Technology

JioHotstar: ಜಿಯೋ ಹಾಟ್‌ಸ್ಟಾರ್ ಲಾಂಚ್, ಒಂದೇ ವೇದಿಕೆ ಹೆಚ್ಚು ಮನರಂಜನೆ

ರಿಲಾಯನ್ಸ್ ಮತ್ತು ಡಿಸ್ನಿ ಜಂಟಿ ಉಪಕ್ರಮದಲ್ಲಿ ಜಿಯೋಸಿನೆಮಾ ಮತ್ತು ಹಾಟ್‌ಸ್ಟಾರ್ ಸಂಯೋಜನೆ. ಬಳಕೆದಾರರಿಗೆ ಒಂದೇ ವೇದಿಕೆಯಲ್ಲಿ ಹೆಚ್ಚು ಮನರಂಜನೆ.

  • ಜಿಯೋಸಿನೆಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಸೇರಿ ಒಟ್ಟಿಗೆ ಹೊಸ ಸೇವೆ
  • ಬಳಕೆದಾರರಿಗೆ ತ್ರಿಮಾಸಿಕ ಪ್ಲಾನ್‌ಗಳೊಂದಿಗೆ ಸುಲಭ ಪ್ಲ್ಯಾನ್ ಆಯ್ಕೆಗಳು
  • ಐಪಿಎಲ್, ಐಸಿಸಿ ಟೂರ್ನಿ ಸೇರಿದಂತೆ ಹೈ-ಕ್ವಾಲಿಟಿ ಸ್ಪೋರ್ಟ್ಸ್ ಸ್ಟ್ರೀಮಿಂಗ್ ಲಭ್ಯ

JioHotstar : ಭಾರತದ ಒಟಿಟಿ ಮಾರ್ಕೆಟ್‌ನಲ್ಲಿ ಹೊಸ ತಂತ್ರಜ್ಞಾನ ಸಂಯೋಜನೆ ಜಿಯೋಹಾಟ್‌ಸ್ಟಾರ್ ರೂಪದಲ್ಲಿ ಉದಯಿಸಿದೆ. ಜಿಯೋಸಿನೆಮಾ (JioCinema) ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಈಗ ಒಟ್ಟಾಗಿ ಒಂದೇ ಹೆಸರಿನಲ್ಲಿ ಲಭ್ಯವಿದ್ದು, ಬಳಕೆದಾರರಿಗೆ ಹೆಚ್ಚಿನ ಸೇವೆ ಒದಗಿಸುತ್ತಿದೆ.

ಈ ಹೊಸ ಸೇವೆಯೊಂದಿಗೆ, ಈ ಹಿಂದೆ ಪ್ರತ್ಯೇಕವಾಗಿ ಲಭ್ಯವಿದ್ದ ಹಾಟ್‌ಸ್ಟಾರ್ ಮತ್ತು ಜಿಯೋಸಿನೆಮಾ ಕಂಟೆಂಟ್ ಅನ್ನು ಒಂದೇ ವೇದಿಕೆಯಲ್ಲಿ ಕಾಣಬಹುದು.

JioHotstar: ಜಿಯೋ ಹಾಟ್‌ಸ್ಟಾರ್ ಲಾಂಚ್, ಒಂದೇ ವೇದಿಕೆ ಹೆಚ್ಚು ಮನರಂಜನೆ

ನೂತನ ಒಟಿಟಿ ಸೇವೆ ಆರಂಭವಾದ ಬಳಿಕ, ಹಳೆಯ ಜಿಯೋಸಿನೆಮಾ ಮತ್ತು ಹಾಟ್‌ಸ್ಟಾರ್ ಬಳಕೆದಾರರಿಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಅವರ ಪ್ಲಾನ್‌ಗೆ ಅನುಗುಣವಾಗಿ ಮುಂದುವರಿಯಲಿದ್ದು, ಬದಲಾವಣೆಯಾಗಿದೆ ಎಂಬ ಅರ್ಥದಲ್ಲಿ ಕೇವಲ ಹೊಸ ಬ್ರಾಂಡಿಂಗ್ ಮಾತ್ರ ಕಾಣಸಿಗಲಿದೆ. ಜಿಯೋಸಿನೆಮಾ ಪ್ರೀಮಿಯಂ ಬಳಕೆದಾರರನ್ನು ಸ್ವಯಂಚಾಲಿತವಾಗಿ ಹೊಸ ಅಪ್ಲಿಕೇಶನ್‌ಗೆ ಸ್ಥಳಾಂತರಿಸಲಾಗುತ್ತಿದೆ.

ಮಹಿಳೆಯ ಜೀನ್ಸ್ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್ ಸ್ಫೋಟ! ಇಲ್ಲಿದೆ ಸಿಸಿಟಿವಿ ದೃಶ್ಯ

JioHotstar ಪ್ಲಾನ್‌ಗಳ ಮಾಹಿತಿ

JioHotstar Plans : ಈ ಹೊಸ ಸೇವೆಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಸಬ್ಸ್ಕ್ರಿಪ್ಷನ್ ಪ್ಲಾನ್‌ಗಳನ್ನು ಪರಿಚಯಿಸಲಾಗಿದೆ. ಮೊಬೈಲ್ ಬಳಕೆದಾರರಿಗೆ ₹149 ಪ್ಲಾನ್, ಅದೇ ರೀತಿ ₹299 ಸೂಪರ್ ಪ್ಲಾನ್ ಮತ್ತು ₹349 ಪ್ರೀಮಿಯಂ (ಆಡ್ಸ್-ಫ್ರೀ) ಪ್ಲಾನ್ ಲಭ್ಯವಿದೆ. ಎಲ್ಲಾ ಪ್ಲಾನ್‌ಗಳು ಮೂರು ತಿಂಗಳ ಅವಧಿಯೊಂದಿಗೆ ಲಭ್ಯ.

ಕಂಟೆಂಟ್‌ನಲ್ಲಿ ಹೊಸ ಬದಲಾವಣೆಗಳು

ಹಾಟ್‌ಸ್ಟಾರ್‌ನಲ್ಲಿ ಈಗಾಗಲೇ ಲಭ್ಯವಿರುವ ಎಲ್ಲಾ ವಿಡಿಯೋಗಳ ಜೊತೆಗೆ ಹೊಸ ಸೇರ್ಪಡೆಗಳೂ ಇದ್ದು, NBC Universal, Peacock, Warner Bros, Discovery, HBO ಮತ್ತು Paramount ನಂತಹ ದೊಡ್ಡ ಕಂಪನಿಗಳ ಕಂಟೆಂಟ್ ಕೂಡ ಲಭ್ಯವಾಗಲಿದೆ.

JioHotstar

5 ಅಗ್ಗದ ಜಿಯೋ ರಿಚಾರ್ಜ್ ಪ್ಲಾನ್‌ಗಳು, 1.5GB ಡೇಟಾ, ಇಡೀ ತಿಂಗಳು ಅನಿಯಮಿತ ಟಾಕ್‌ಟೈಮ್

ವಿಶೇಷವಾಗಿ, Sparks ಹೆಸರಿನ ಹೊಸ ಫೀಚರ್ ಪರಿಚಯಿಸಲಾಗಿದೆ, ಇದರಿಂದ ಭಾರತದ ಪ್ರಮುಖ ಡಿಜಿಟಲ್ ಕ್ರಿಯೇಟರ್‌ಗಳ ವಿನೂತನ ಕಂಟೆಂಟ್ ಹೈಲೈಟ್ ಆಗಲಿದೆ.

ಈಗ ಬಳಕೆದಾರರಿಗೆ ಐಪಿಎಲ್, ಮಹಿಳಾ ಪ್ರೀಮಿಯರ್ ಲೀಗ್, ಐಸಿಸಿ ಕ್ರಿಕೆಟ್ ಟೂರ್ನಿಯ ಎಲ್ಲಾ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಕೂಡ ಸುಲಭವಾಗಿ ಲಭ್ಯವಾಗಲಿದೆ. ಇದು ಭಾರತೀಯ ಒಟಿಟಿ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.

A New OTT Experience with JioHotstar

English Summary

Our Whatsapp Channel is Live Now 👇

Whatsapp Channel

Related Stories