ಕೇವಲ ₹5 ರೂಪಾಯಿಗೆ 90 ದಿನಗಳ ವ್ಯಾಲಿಡಿಟಿ! ಬಂಪರ್ ರಿಚಾರ್ಜ್ ಪ್ಲಾನ್

ಬಿಎಸ್‌ಎನ್ಎಲ್ ಹೊಸ ಪ್ಲಾನ್‌ ಅನಾವರಣ! ₹439 ರೀಚಾರ್ಜ್ ಮಾಡಿದರೆ 90 ದಿನಗಳ ಕಾಲ ಸೇವೆ ಸಿಗಲಿದೆ. ಇದು ಅನಿಯಮಿತ ಕಾಲಿಂಗ್, ಉಚಿತ SMS ಸೌಲಭ್ಯವನ್ನು ನೀಡಲಿದೆ.

  • ಬಿಎಸ್‌ಎನ್ಎಲ್ ಬಳಕೆದಾರರಿಗೆ ಸಿಹಿಸುದ್ದಿ – ದೀರ್ಘಕಾಲದ ಚೌಕಾಸಿ ಪ್ಲಾನ್ ಲಭ್ಯ!
  • ₹439 ಪ್ಲಾನ್‌ನಲ್ಲಿ 90 ದಿನಗಳ ವ್ಯಾಲಿಡಿಟಿ, ಅನಿಯಮಿತ ಕಾಲಿಂಗ್, ಉಚಿತ SMS
  • ಡೇಟಾ ಸೇವೆ ಬೇಕಾದರೆ ಪ್ರತ್ಯೇಕ ಪ್ಯಾಕ್ ರೀಚಾರ್ಜ್ ಮಾಡುವ ಅವಕಾಶ

ಬಿಎಸ್‌ಎನ್ಎಲ್ 90 ದಿನಗಳ ವ್ಯಾಲಿಡಿಟಿ ಕೇವಲ ದಿನಕ್ಕೆ ₹5 ರೂಪಾಯಿ

ಪ್ರೈವೇಟ್ ಕಂಪನಿಗಳು ದಿನದಿಂದ ದಿನಕ್ಕೆ ರೀಚಾರ್ಜ್ ದರ (Recharge Cost) ಹೆಚ್ಚಿಸುತ್ತಿರುವಾಗ, ಬಿಎಸ್‌ಎನ್ಎಲ್ (BSNL) ಮಾತ್ರ ತನ್ನ ಗ್ರಾಹಕರಿಗೆ ಕಡಿಮೆ ದರದ ಆಕರ್ಷಕ ಪ್ಲಾನ್‌ಗಳನ್ನು ನೀಡುತ್ತಲೇ ಇದೆ. ಈಗ ಕೇವಲ ₹5 ದಿನಕ್ಕೆ ನೀವು ನಿಮ್ಮ ಸಿಮ್ ಅನ್ನು ಆ್ಯಕ್ಟಿವ್ (Active) ಇಟ್ಟುಕೊಳ್ಳಬಹುದು!

ಬಿಎಸ್‌ಎನ್ಎಲ್ ತನ್ನ ₹439 ಪ್ರೀಪೇಯ್ಡ್ ಪ್ಲಾನ್ (Prepaid Plan) ಅನ್ನು ಲಾಂಚ್ ಮಾಡಿದ್ದು, ಇದರಿಂದ ಬಳಕೆದಾರರು 90 ದಿನಗಳ ವ್ಯಾಲಿಡಿಟಿ (Validity) ಪಡೆಯಬಹುದು. ಈ ಪ್ಲಾನ್‌ನಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್ ಮತ್ತು ಉಚಿತ 300 SMS‌ಗಳ ಸೌಲಭ್ಯವಿದೆ. ಆದರೆ, ಈ ಪ್ಲಾನ್‌ನಲ್ಲಿ ಡೇಟಾ ಸೌಲಭ್ಯ ಇರದ ಕಾರಣ, ಅಗತ್ಯವಿದ್ದರೆ ಪ್ರತ್ಯೇಕ ಡೇಟಾ ಪ್ಯಾಕ್ ರೀಚಾರ್ಜ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಬಿಎಸ್ಎನ್ಎಲ್ ಹೋಳಿ ಧಮಾಕಾ, 1 ವರ್ಷದ ಬಂಪರ್ ಆಫರ್ ಬಿಡುಗಡೆ!

ಬಿಎಸ್‌ಎನ್ಎಲ್ 4G ವಿಸ್ತರಣೆ

ಬಿಎಸ್‌ಎನ್ಎಲ್ ತನ್ನ 4G ಮೊಬೈಲ್ ಟವರ್‌ (Mobile Tower) ಗಳನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಇದುವರೆಗೆ 65,000+ ಟವರ್‌ಗಳನ್ನು ಸ್ಥಾಪಿಸಿದೆ. ಗ್ರಾಹಕರಿಗೆ ಉತ್ತಮ ನೆಟ್ವರ್ಕ್ (Network) ಸೇವೆ ನೀಡಲು ಹೊಸ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಿದೆ.

BSNL Network

ಈ ಪ್ಲಾನ್ ದೇಶದಾದ್ಯಂತ ರೋಮಿಂಗ್ (Roaming) ಸೌಲಭ್ಯವನ್ನೂ ನೀಡುತ್ತದೆ. ನಗರಗಳು ಮಾತ್ರವಲ್ಲ, ಹಳ್ಳಿ ಪ್ರದೇಶಗಳಲ್ಲಿಯೂ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಹೊಸ ಪ್ಲಾನ್‌ ಜಾರಿಗೆ ತಂದಿದೆ. ಪ್ರೈವೇಟ್ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರಗಳು ಏರಿದ ನಂತರ, ಸಾವಿರಾರು ಬಳಕೆದಾರರು ಬಿಎಸ್‌ಎನ್ಎಲ್ ಕಡೆಗೆ ಮಾರುಹೋಗುತ್ತಿದ್ದಾರೆ.

ಇದನ್ನೂ ಓದಿ: OnePlus ಹೋಳಿ ಆಫರ್, ಡಿಸ್ಕೌಂಟ್ ನಲ್ಲಿ ಫೋನ್ ಖರೀದಿಗೆ ಸೂಪರ್ ಚಾನ್ಸ್

90 ದಿನಗಳ ವೇಗದ ಸೇವೆ – ನಿಮ್ಮ ಆಯ್ಕೆ!

ಕೇವಲ ₹439 ರೀಚಾರ್ಜ್ ಮಾಡಿದರೆ, ಇದು ಕಡಿಮೆ ದರದಲ್ಲಿ ನಿಮ್ಮ ಮೊಬೈಲ್‌ ಸೇವೆಯನ್ನು 90 ದಿನಗಳ ಕಾಲ ನಿರಾತಂಕವಾಗಿ (Without Worries) ಬಳಸುವ ಅವಕಾಶವನ್ನು ನೀಡುತ್ತದೆ. ಡೇಟಾ ಸೇವೆ ಅಗತ್ಯವಿಲ್ಲದ ಬಳಕೆದಾರರಿಗೆ ಇದು ಅತ್ಯುತ್ತಮ ಆಯ್ಕೆ!

BSNL Prepaid Plan with 90 Days Validity for Just ₹5 Per Day

Related Stories