Flipkart ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ iPhone 13 ಮೇಲೆ ರೂ. 8000 ರಿಯಾಯಿತಿ!
Flipkart: ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಮಾರಾಟವು (Flipkart Big Saving Days Sale) ಅನೇಕ ಸಾಧನಗಳಲ್ಲಿ ಲಭ್ಯವಿರುವ ರಿಯಾಯಿತಿಗಳು ಗ್ರಾಹಕರ ಮನ ಸೆಳೆಯುತ್ತಿವೆ.
Flipkart: ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಮಾರಾಟವು (Flipkart Big Saving Days Sale) ಅನೇಕ ಸಾಧನಗಳಲ್ಲಿ ಲಭ್ಯವಿರುವ ರಿಯಾಯಿತಿಗಳು ಗ್ರಾಹಕರ ಮನ ಸೆಳೆಯುತ್ತಿವೆ. ಆಪಲ್‌ನ ಪ್ರೀಮಿಯಂ ಐಫೋನ್‌ಗಳು ಮತ್ತು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ತಾತ್ಕಾಲಿಕ ರಿಯಾಯಿತಿ ಇದೆ.
ಐಫೋನ್ 14 ಮೇಲೆ ರೂ. 1000 ರಿಯಾಯಿತಿ ಹಾಗೂ iPhone 13 ಮೇಲೆ ರೂ. 8000 ರಿಯಾಯಿತಿ (Discount Offer) ನೀಡಲಾಗುತ್ತಿದೆ. ಇವುಗಳ ಜೊತೆಗೆ ಬ್ಯಾಂಕ್ ಆಫರ್‌ಗಳು ಮತ್ತು ವಿನಿಮಯದೊಂದಿಗೆ (Exchange Offers) ಆಕರ್ಷಕ ಬೆಲೆಯಲ್ಲಿ ಪ್ರೀಮಿಯಂ ಐಫೋನ್‌ಗಳನ್ನು ಹೊಂದಲು ಅವಕಾಶವಿದೆ. ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಡಿಸೆಂಬರ್ 21 ರಂದು ಕೊನೆಗೊಳ್ಳುತ್ತದೆ.
ಈ ಮಾರಾಟದ ಭಾಗವಾಗಿ, iPhone 13 (128GB) ನ MRP ರೂ. 69,900 ಆದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ರೂ. 62,999 ಮಾರಾಟವಾಗುತ್ತಿದೆ. ಹೆಚ್ಚುವರಿಯಾಗಿ, Flipkart SBI ಕ್ರೆಡಿಟ್ ಕಾರ್ಡ್‌ಗಳಲ್ಲಿ 10 ಪ್ರತಿಶತವನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರು ಆರ್ಡರ್ ಮಾಡಿದಾಗ ಶೇಕಡಾ 5 ರಷ್ಟು ಕೊಡುಗೆಯನ್ನು ಪಡೆಯುತ್ತಾರೆ. ಮತ್ತು ಹಳೆಯ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ನಲ್ಲಿ ಗ್ರಾಹಕರಿಗೆ ರೂ. 17,500 ಲಭ್ಯವಿದೆ. ಐಫೋನ್ 13 ಕೆಂಪು, ನೀಲಿ, ಆಲಿವ್ ಹಸಿರು, ಕಪ್ಪು, ಗುಲಾಬಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.
iPhone 13 Available With Rs 8000 Off During Flipkart Big Saving Days Sale