Jio Plan: ಜಿಯೋ ಭರ್ಜರಿ ಆಫರ್, 11 ತಿಂಗಳ ವ್ಯಾಲಿಡಿಟಿ ಪ್ಲಾನ್ ಬಿಡುಗಡೆ
Jio Recharge Plan: ಜಿಯೋ ಬಳಕೆದಾರರಿಗೆ ಸೀಮಿತವಾದ ವಿಶೇಷ ಪ್ಲಾನ್, ಕಡಿಮೆ ದರದಲ್ಲಿ! ಜಿಯೋ ಟಿವಿ, ಜಿಯೋ ಕ್ಲೌಡ್ ಉಚಿತ ಸಬ್‌ಸ್ಕ್ರಿಪ್ಷನ್ ಸೌಲಭ್ಯ ಕೂಡ

- ₹895 ಪ್ಲಾನ್‌ನಲ್ಲಿ 336 ದಿನಗಳ ವ್ಯಾಲಿಡಿಟಿ
- 24GB ಡೇಟಾ, 600 SMS ಮತ್ತು ಅನಿಯಮಿತ ಕರೆ ಸೌಲಭ್ಯ
- ಜಿಯೋ ಟಿವಿ, ಜಿಯೋ ಕ್ಲೌಡ್ ಉಚಿತ ಸಬ್‌ಸ್ಕ್ರಿಪ್ಷನ್ ಸೌಲಭ್ಯ
Jio Recharge Plan: ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ದರದಲ್ಲಿ ಜಾಸ್ತಿ ವ್ಯಾಲಿಡಿಟಿ (Validity) ನೀಡುವ ಉದ್ದೇಶದಿಂದ ₹895 ವಿಶೇಷ ಪ್ಲಾನ್ ಹೊರತಂದಿದೆ.
ಈ ಪ್ಲಾನ್‌ನ ಪ್ರಮುಖ ಲಕ್ಷಣವೆಂದರೆ, ಕೇವಲ ₹2.66 ಪ್ರತಿ ದಿನದ ಖರ್ಚಿನಲ್ಲಿ ನೀವು 336 ದಿನಗಳ ಕಾಲ ಅನಿಯಮಿತ ಕರೆ (Unlimited Calls), 600 ಉಚಿತ SMS ಮತ್ತು 24GB ಡೇಟಾ ಸೌಲಭ್ಯ ಪಡೆಯಬಹುದು.
ಆದರೆ, ಈ ಪ್ಲಾನ್ ಎಲ್ಲರಿಗೂ ಅನ್ವಯಿಸುವುದಿಲ್ಲ. ಇದು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿರುವ ವಿಶೇಷ ಪ್ಲಾನ್ ಆಗಿದೆ.
11 ತಿಂಗಳ ವ್ಯಾಲಿಡಿಟಿಯೊಂದಿಗೆ ಬಜೆಟ್ ಪ್ಲಾನ್!
₹895 ಪ್ಲಾನ್‌ನ ವ್ಯಾಲಿಡಿಟಿ 336 ದಿನಗಳಾಗಿದ್ದು, ಈ ಅವಧಿಯಲ್ಲಿ ಯಾವುದೇ ನೆಟ್ವರ್ಕ್‌ಗೂ ಅನಿಯಮಿತ ಕರೆ ಮಾಡಬಹುದು. ಇದನ್ನು 28 ದಿನಗಳ ಚಕ್ರಗಳಾಗಿ ವಿಭಜಿಸಲಾಗಿದ್ದು, ಪ್ರತಿಯೊಂದು ಚಕ್ರದಲ್ಲಿ 50 ಉಚಿತ SMS ಲಭ್ಯ. ಒಟ್ಟು 12 ಚಕ್ರಗಳ ಅವಧಿಯಲ್ಲಿ ಗ್ರಾಹಕರು 600 SMS ಗಳನ್ನು ಉಚಿತವಾಗಿ ಪಡೆಯಬಹುದು.
ಡೇಟಾ ಲಿಮಿಟ್
ಈ ಪ್ಲಾನ್‌ನಲ್ಲಿ ಒಟ್ಟು 24GB ಡೇಟಾ ಸೌಲಭ್ಯವಿದ್ದು, ಪ್ರತಿ 28 ದಿನಗಳಿಗೆ 2GB ಡೇಟಾ ಲಭ್ಯವಾಗುತ್ತದೆ. ಹೀಗಾಗಿ ಕಡಿಮೆ ಡೇಟಾ ಬಳಕೆದಾರರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ. ಹೆಚ್ಚಿನ ಇಂಟರ್ನೆಟ್ ಬಳಕೆದಾರರಿಗೆ ಇದು ಸೂಕ್ತವಲ್ಲ.
ಈ ಪ್ಲಾನ್ ಯಾರಿಗೆ?
₹895 ಪ್ಲಾನ್ ವಿಶೇಷವಾಗಿ ಜಿಯೋ ಫೋನ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಪ್ಲಾನ್‌ನಲ್ಲಿ ಜಿಯೋ ಟಿವಿ (JioTV) ಮತ್ತು ಜಿಯೋ ಕ್ಲೌಡ್ (JioCloud) ಉಚಿತ ಸಬ್‌ಸ್ಕ್ರಿಪ್ಷನ್ ಸೌಲಭ್ಯವೂ ಲಭ್ಯ. ಆದರೆ, ಸಾಮಾನ್ಯ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ಪ್ಲಾನ್ ಅನ್ವಯಿಸುವುದಿಲ್ಲ.
ಹೆಚ್ಚುವರಿ ವ್ಯಾಲಿಡಿಟಿ ಬೇಕಾದರೆ ₹1748 ಪ್ಲಾನ್!
ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸಿಮ್ 336 ದಿನಗಳ ಕಾಲ ಸಕ್ರಿಯವಾಗಿರಿಸಲು ₹1748 ಪ್ಲಾನ್ ಅನ್ನು ಆಯ್ಕೆ ಮಾಡಬಹುದು. ಈ ಪ್ಲಾನ್‌ನಲ್ಲಿ 3600 ಉಚಿತ SMS, ಅನಿಯಮಿತ ಕರೆ ಸೌಲಭ್ಯ ದೊರೆಯುತ್ತದೆ. ಆದರೆ, ಇದರಲ್ಲಿ ಡೇಟಾ ಸೌಲಭ್ಯ ಇರುವುದಿಲ್ಲ.
Jio 336 Days Validity with Unlimited Calls and Data




