WhatsApp: 47 ಲಕ್ಷ ಭಾರತೀಯ ವಾಟ್ಸಾಪ್ ಖಾತೆಗಳು ಬ್ಯಾನ್! ಈ ಕೂಡಲೇ ನೀವು ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ
WhatsApp: ವಾಟ್ಸಾಪ್ನಲ್ಲಿ ಕೃತಕ ಬುದ್ಧಿಮತ್ತೆ (AI), ಡೇಟಾ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ವಿಭಾಗವು ನೀಡಿದ ವರದಿಗಳ ಆಧಾರದ ಮೇಲೆ ನಾವು ಕ್ರಮ ಕೈಗೊಂಡಿದ್ದೇವೆ. ಉಳಿದ ಖಾತೆಗಳ ಬಗ್ಗೆ ಬಳಕೆದಾರರಿಂದ ಬಂದ ದೂರುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.
WhatsApp Ban: ಮೆಸೇಜಿಂಗ್ ಅಪ್ಲಿಕೇಶನ್ WhatsApp ಮಾರ್ಚ್ ತಿಂಗಳಲ್ಲಿ 47 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ (WhatsApp Account Banned) ಎಂದು ಹೇಳಿದೆ. ಇತ್ತೀಚೆಗೆ ಬಿಡುಗಡೆಯಾದ ಬಳಕೆದಾರರ ಸುರಕ್ಷತೆ ವರದಿಯಲ್ಲಿ ಈ ವಿಷಯಗಳು ಬಹಿರಂಗವಾಗಿವೆ.
ಎಲ್ಲಾ ನಿಷೇಧಿತ ಖಾತೆಗಳು ಭಾರತೀಯ ಐಟಿ ಕಾನೂನುಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅದು ಹೇಳಿದೆ. “ನಾವು ಮಾರ್ಚ್ 1 ರಿಂದ ಮಾರ್ಚ್ 31 ರವರೆಗೆ 47,15,906 ಖಾತೆಗಳನ್ನು ನಿಷೇಧಿಸಿದ್ದೇವೆ. ಕೃತಕ ಬುದ್ಧಿಮತ್ತೆ (AI), ಡೇಟಾ ವಿಜ್ಞಾನಿಗಳು ಮತ್ತು WhatsApp ನ ತಾಂತ್ರಿಕ ವಿಭಾಗವು ಒದಗಿಸಿದ ವರದಿಗಳ ಆಧಾರದ ಮೇಲೆ ನಾವು 16,59,385 ಖಾತೆಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಉಳಿದ ಖಾತೆಗಳಲ್ಲಿ ಬಳಕೆದಾರರಿಂದ ಬಂದ ದೂರುಗಳ ಆಧಾರದ ಮೇಲೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ವಾಟ್ಸಾಪ್ ಹೇಳಿಕೆಯಲ್ಲಿ ತಿಳಿಸಿದೆ.
WhatsApp ನ ಸುರಕ್ಷತಾ ವರದಿಯ ಪ್ರಕಾರ, 4,720 ಖಾತೆಗಳ ವಿರುದ್ಧ ದೂರುಗಳನ್ನು ಸ್ವೀಕರಿಸಲಾಗಿದೆ ಮತ್ತು 4,316 ಖಾತೆಗಳನ್ನು ನಿಷೇಧಿಸುವಂತೆ ವಿನಂತಿಸಲಾಗಿದೆ. ಆದರೆ, ಕೆಲವು ಬಳಕೆದಾರರ ಖಾತೆಗಳ ವಿರುದ್ಧ ದೂರುಗಳು ಬಂದಿದ್ದರೂ, ಅವರ ವಿರುದ್ಧ ದೂರು ನೀಡಿದವರು ಯಾವುದೇ ಸಾಕ್ಷ್ಯವನ್ನು ತೋರಿಸಲು ಸಾಧ್ಯವಾಗಲಿಲ್ಲ. ಈ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬಹಿರಂಗವಾಗಿದೆ.
ಅದೇ ರೀತಿ ವಾಟ್ಸಾಪ್ ಮೂಲಕ ಅಶ್ಲೀಲ ಮಾಹಿತಿ ಹರಡುವುದನ್ನು ತಡೆಯಲು ಎಐ ನೆರವಿನೊಂದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿದುಬಂದಿದೆ.
ರಾಂಗ್ ನಂಬರ್ಗೆ ರೀಚಾರ್ಜ್ ಮಾಡಿದ್ದೀರಾ? ಹಣ ವಾಪಸ್ ಪಡೆಯಲು ಇಲ್ಲಿದೆ ಟ್ರಿಕ್, ಕ್ಷಣದಲ್ಲಿ ಹಣ ವಾಪಸ್ ಪಡೆಯಿರಿ
“ನಾವು ವರ್ಷಗಳಿಂದ ಬಳಕೆದಾರರ ಸುರಕ್ಷತೆಗಾಗಿ AI, ಸುಧಾರಿತ ತಂತ್ರಜ್ಞಾನ (Technology), ಡೇಟಾ ವಿಜ್ಞಾನಿಗಳು ಮತ್ತು ತಜ್ಞರ ಮೇಲೆ ಸಾಕಷ್ಟು ಖರ್ಚು ಮಾಡುತ್ತಿದ್ದೇವೆ. IT ಕಾಯಿದೆ 2021 ರ ನಿಬಂಧನೆಗಳ ಪ್ರಕಾರ ನಾವು ನಮ್ಮ ಮಾಸಿಕ ಸುರಕ್ಷತಾ ವರದಿಯನ್ನು ಬಹಿರಂಗಪಡಿಸಿದ್ದೇವೆ.
ಬಳಕೆದಾರರಿಂದ ಸ್ವೀಕರಿಸಿದ ದೂರುಗಳು, ಖಾತೆ ನಿಷೇಧ (WhatsApp Ban) ಇತ್ಯಾದಿಗಳ ಸಂಪೂರ್ಣ ಮಾಹಿತಿಯನ್ನು ಇದು ಒಳಗೊಂಡಿದೆ,” ಎಂದು ವಾಟ್ಸಾಪ್ ಹೇಳಿಕೆಯಲ್ಲಿ ತಿಳಿಸಿದೆ.
೧). ಯಾವುದೇ ಸಂದೇಶವನ್ನು ಪರಿಶೀಲಿಸದೆ ಫಾರ್ವರ್ಡ್ ಮಾಡಬೇಡಿ.
೨). ಅಶ್ಲೀಲ ಸಂದೇಶಗಳನ್ನು ಹಂಚಿಕೊಳ್ಳಬೇಡಿ.
೩). ಜಾತಿ, ಧರ್ಮ ನಿಂದನೆಯ ಸಂದೇಶಗಳನ್ನು ಸಹ ವಾಟ್ಸಾಪ್ ನಿರಂತರ ಗಮನಹರಿಸುತ್ತದೆ.
೪). ಕೆಲವೊಮ್ಮೆ ನಿಮ್ಮ ಸ್ನೇಹಿತರಲ್ಲದವರಿಗೆ ಸಂದೇಶ ಕಳಿಸಿದಾಗ, ಅವರು ನಿಮ್ಮ ಬಗ್ಗೆ ದೂರು ದಾಖಲಿಸಬಹುದು.
ನೀವು ಸಹ ನಿಮಗೆ ವಾಟ್ಸಾಪ್ ನಲ್ಲಿ ತೊಂದರೆ ನೀಡುವ ಹಾಗೂ ಮಾನಸಿಕ ಕಿರುಕುಳ ನೀಡುವ ಸಂಖ್ಯೆಗಳ ಬಗ್ಗೆ ದೂರು ದಾಖಲಿಸಬಹುದು, ಆದರೆ ಅದಕ್ಕೆ ಸರಿಯಾದ ಸಾಕ್ಷಿ ಹೊದಗಿಸಬೇಕು, ಆಗ ವಾಟ್ಸಾಪ್ ಆ ಸಂಖ್ಯೆಗಳನ್ನು ನಿಷೇದಿಸುತ್ತದೆ.
Messaging App WhatsApp Banned 47 lakh Indian accounts in the month of March
Follow us On
Google News |