ಮೊಬೈಲ್ ಬಳಸುವ ಎಲ್ಲರಿಗೂ ಹೊಸ ರೂಲ್ಸ್! ಸಿಮ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ

ಡಿಸೆಂಬರ್ 1, 20023 ರಿಂದ ಸಿಮ್ ಕಾರ್ಡ್ (sim card rules) ಖರೀದಿಯ ನಿಯಮಗಳು ಬದಲಾಗಲಿವೆ ಎಂದು ದೂರ ಸಂಪರ್ಕ ಇಲಾಖೆ (department of telecommunication) ಸುತ್ತೋಲೆ ಹೊರಡಿಸಿದೆ.

ಸಿಮ್ ಕಾರ್ಡ್ ಖರೀದಿ ಹಾಗೂ ಮಾರಾಟದಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ತಡೆಯಲು ಈ ಹೊಸ ನಿಯಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ (sim card purchase) ಅದನ್ನ ಮತ್ತೊಬ್ಬರು ಬಳಸುವುದು ಹಾಗೂ ವಂಚನೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ

ಇದೇ ಕಾರಣಕ್ಕೆ ಸಿಮ್ ಕಾರ್ಡ್ ಮಾರಾಟ ಮಾಡುವವರಿಗಾಗಿ (new rules for sim Card dealers) ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ, ಈ ಎಲ್ಲಾ ನಿಯಮಗಳು ಡಿಸೆಂಬರ್ ಒಂದರಿಂದ ಜಾರಿಯಾಗಲಿದ್ದು ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ದುಬಾರಿ ಫೋನ್‌ಗಳು ಅರ್ಧ ಬೆಲೆಗೆ ಮಾರಾಟ! OnePlus, iPhone 13 ಸಹ ಪಟ್ಟಿಯಲ್ಲಿದೆ

ಸಿಮ್ ಕಾರ್ಡ್ ಡೀಲರ್ಸ್ ಪರಿಶೀಲನೆ (Sim Card dealers verification)

ನೀವೇನಾದ್ರೂ ಹೊಸ ಸಿಮ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ನಿಯಮಗಳನ್ನು ತಿಳಿದುಕೊಳ್ಳಿ, ಮೊದಲನೆಯದಾಗಿ ಯಾರು ಸಿಮ್ ಕಾರ್ಡ್ ಮಾರಾಟ ಮಾಡುತ್ತಾರೋ ಅಂತವರು ಪೊಲೀಸ್ ಪರಿಶೀಲನೆಗೆ ಒಳಗಾಗಬೇಕು. ಟೆಲಿಕಾಂ ಆಪರೇಟರ್ ಗಳ ನೋಂದಣಿ ಆಗಬೇಕು

ಡಿಸೆಂಬರ್ ಒಂದರ ಒಳಗೆ ನೋಂದಣಿ ಆಗದೆ ಇದ್ದರೆ ಅಂತವರು ಸಿಮ್ ಕಾರ್ಡ್ ಡೀಲರ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಒಂದು ವೇಳೆ ಹಾಗೂ ನೋಂದಣಿ ಮಾಡಿಸಿಕೊಳ್ಳದೆ ಸಿಮ್ ಕಾರ್ಡ್ ಮಾರಾಟ ಮಾಡಿದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಹಾಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಆಧಾರ್ ಸ್ಕ್ಯಾನಿಂಗ್ ಕಡ್ಡಾಯ (Aadhar card scanning mandatory)

ಇನ್ನು ಮುಂದೆ ಸಿಮ್ ಕಾರ್ಡ್ ಖರೀದಿ ಮಾಡುವವರು ಆಧಾರ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲೇಬೇಕು, ಜೊತೆಗೆ ಜನಸಂಖ್ಯಾ ಡಾಟಾ (population data) ಸಂಗ್ರಹಣೆ ಮಾಡಲಾಗುತ್ತದೆ. ಈ ರೀತಿ ಮಾಡುವುದರಿಂದ ವಂಚನೆ ಪ್ರಕರಣಗಳನ್ನು ತಡೆಗಟ್ಟಬಹುದು ಎನ್ನುವುದು ದೂರಸಂಪರ್ಕ ಇಲಾಖೆಯ ಮುಖ್ಯ ಉದ್ದೇಶವಾಗಿದೆ.

ಬೆಲೆ ತುಂಬಾ ಕಡಿಮೆ, ಸ್ಯಾಮ್‌ಸಂಗ್‌ನ ಹೊಸ 5G ಫೋನ್ ಖರೀದಿಗೆ ಮುಗಿಬಿದ್ದ ಜನ!

ಬೃಹತ್ ಸಿಮ್ ಕಾರ್ಡ್ ವಿತರಣೆ

Sim Cardಬೃಹತ್ ಸಿಮ್ ಕಾರ್ಡ್ ವಿತರಣೆಯಲ್ಲಿಯೂ ಕೂಡ ಬದಲಾವಣೆ ಮಾಡಲಾಗಿದೆ ಇನ್ನು ಮುಂದೆ ವ್ಯಾಪಾರ ಸಂಪರ್ಕದ ಮೂಲಕ ಮಾತ್ರ ಬೃಹತ್ ಪ್ರಮಾಣದಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಬಹುದು. ಇನ್ನು ಮುಂದೆ ಒಂದು ಅಡ್ರೆಸ್ ನಲ್ಲಿ 9 ಸೇಮ್ ಖರೀದಿಯ ಮೇಲು ಕೂಡ ಮಿತಿ ಏರಿಕೆ ಮಾಡಲಾಗಿದೆ. ಸರಿಯಾದ ಪರಿಶೀಲನೆ ಮಾಡದೆ ಯಾರಿಗೂ ಸಿಮ್ ಕಾರ್ಡ್ ಕೊಡುವಂತಿಲ್ಲ.

ಸಿಮ್ ಕಾರ್ಡ್ ನಿಷ್ಕ್ರಿಯಗೊಳಿಸಲು ಕ್ರಮ! (Sim card cancellation)

ಸಿಮ್ ಕಾರ್ಡ್ ಸ್ಥಗಿತಗೊಂಡಿದ್ದರೆ, ಅದೇ ಸಂಖ್ಯೆಯನ್ನು ಮತ್ತೊಬ್ಬ ವ್ಯಕ್ತಿಗೆ ನೀಡುವುದಾದರೆ ಕನಿಷ್ಠ 90 ದಿನಗಳು ಆಗಿರಲೇಬೇಕು ಅದಕ್ಕಿಂತ ಮುಂಚೆ ಅದೇ ನಂಬರ್ ಅನ್ನು ಇನ್ನೊಬ್ಬರಿಗೆ ಕೊಟ್ಟರೆ ಅದರಲ್ಲಿ ವಂಚನೆ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇರುತ್ತದೆ.

ಪ್ರತಿಯೊಬ್ಬ ಸಿಮ್ ಮಾರಾಟಗಾರರು ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು, ಇಲ್ಲವಾದರೆ 10 ಲಕ್ಷ ರೂಪಾಯಿಗಳವರೆಗೆ ದಂಡ ಹಾಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ

ನವೆಂಬರ್ 30ರ ಒಳಗೆ ಸಿಮ್ ಕಾರ್ಡ್ ಮಾರಾಟ ಮಾಡಲು ನೋಂದಣಿ (sim card dealer registration) ಮಾಡಿಸಿಕೊಳ್ಳಬೇಕು. ನೊಂದಣಿ ಮಾಡಿಸಿಕೊಳ್ಳದೆ ಇರುವ ವ್ಯಕ್ತಿಯಿಂದ ಸಿಮ್ ಕಾರ್ಡ್ ಖರೀದಿ ಮಾಡುವುದು ಕೂಡ ಅಪರಾಧವಾಗುತ್ತದೆ.

ಸಿಮ್ ಕಾರ್ಡ್ ಬಳಸಿ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಈ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ದೂರ ಸಂಪರ್ಕ ಇಲಾಖೆ ತಿಳಿಸಿದೆ.

New rules for all mobile users, Change in SIM card rules

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories