ಮೊಬೈಲ್ ಫೋನ್ ಕಳೆದುಹೋದ್ರೆ ಪೊಲೀಸ್ ಸ್ಟೇಶನ್ ಗೆ ಹೋಗುವ ಅವಶ್ಯಕತೆ ಇಲ್ಲ, ಶುರುವಾಗ್ತಿದೆ ಹೊಸ ಸೇವೆ

ಇನ್ನುಮುಂದೆ ಮೊಬೈಲ್ ಫೋನ್ ಕಳೆದು ಹೋಯಿತು ಎಂದು ನೀವು ಭಯ ಪಡುವ ಅಗತ್ಯವೇ ಇಲ್ಲ. ಕೇಂದ್ರ ಸರ್ಕಾರ ಕಳೆದು ಹೋದ ಮೊಬೈಲ್ ಫೋನ್ ಅನ್ನು ಕಂಡುಹಿಡಿಯಲು ಹೊಸ ವ್ಯವಸ್ಥೆಯೊಂದನ್ನು ತಂದಿದೆ

ಈಗಿನ ಕಾಲದಲ್ಲಿ ಮೊಬೈಲ್ ಫೋನ್ (Mobile Phone) ಗಳನ್ನು ಕದಿಯುವ ಕೇಸ್ ಗಳು ಜಾಸ್ತಿ ಆಗುತ್ತಲೇ ಇದೆ. ದಿನಕ್ಕೆ ಅದೆಷ್ಟೋ ಜನರು ತಮ್ಮ ಫೋನ್ ಕಳೆದು ಹೋಯಿತು (Lost Mobilephone) ಎಂದು ಪೊಲೀಸ್ ಸ್ಟೇಶನ್ ಗೆ ಬಂದು ಕಂಪ್ಲೇಂಟ್ ಕೊಡುತ್ತಾರೆ. ಆದರೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವುದು ಕೆಲವು ಕಳ್ಳರು ಮಾತ್ರ.

ಮೊಬೈಲ್ ಫೋನ್ ಗಳನ್ನು (Smartphones) ಕದ್ದು, ಯಾವುದಾದರು ಒಂದು ಐಡಿಯಾ ಮಾಡಿ, ಸಿಕ್ಕಿಹಾಕಿಕೊಳ್ಳದ ಹಾಗೆ ಎಸ್ಕೇಪ್ ಆಗಿಬಿಡುತ್ತಿದ್ದರು. ಆದರೆ ಮೊಬೈಲ್ ಫೋನ್ ಕಳೆದುಕೊಂಡವರಿಗೆ ಎಲ್ಲಾ ತೊಂದರೆ ಆಗುತ್ತಿತ್ತು. ಈಗ ಜೀವನದ ಡೇಟಾ (Personal Data) ಕೂಡ ಮೊಬೈಲ್ ಫೋನ್ ನಲ್ಲಿಯೇ ಸ್ಟೋರ್ ಆಗಿರುತ್ತದೆ, ನಮ್ಮ ಕುರಿತು ಎಲ್ಲ ಮಾಹಿತಿಗಳು, ಎಲ್ಲಾ ಸೀಕ್ರೆಟ್ ಗಳು ಮೊಬೈಲ್ ಫೋನ್ ನಲ್ಲಿಯೇ ಇರುತ್ತದೆ.

ಸಿಮ್ ಕಾರ್ಡ್ ನಿಯಮದಲ್ಲಿ ಬದಲಾವಣೆ ತಂದ ಸರ್ಕಾರ, ಹೆಚ್ಚು ಸಿಮ್ ಇಟ್ಟುಕೊಂಡರೆ ನಿಮಗೆ ಆಪತ್ತು!

ಮೊಬೈಲ್ ಫೋನ್ ಕಳೆದುಹೋದ್ರೆ ಪೊಲೀಸ್ ಸ್ಟೇಶನ್ ಗೆ ಹೋಗುವ ಅವಶ್ಯಕತೆ ಇಲ್ಲ, ಶುರುವಾಗ್ತಿದೆ ಹೊಸ ಸೇವೆ - Kannada News

ಹಾಗಾಗಿ ಮೊಬೈಲ್ ಫೋನ್ ಕಳೆದು ಹೋದರೆ ಎಲ್ಲರಿಗು ಟೆನ್ಷನ್ ಆಗುತ್ತದೆ. ಆದರೆ ಇನ್ನುಮುಂದೆ ಮೊಬೈಲ್ ಫೋನ್ ಕಳೆದು ಹೋಯಿತು ಎಂದು ನೀವು ಭಯ ಪಡುವ ಅಗತ್ಯವೇ ಇಲ್ಲ. ಕೇಂದ್ರ ಸರ್ಕಾರ ಕಳೆದು ಹೋದ ಮೊಬೈಲ್ ಫೋನ್ ಅನ್ನು ಕಂಡುಹಿಡಿಯಲು ಹೊಸ ವ್ಯವಸ್ಥೆಯೊಂದನ್ನು ತಂದಿದೆ. ಮೊಬೈಲ್ ಫೋನ್ ಗಳಲ್ಲೇ ಎಲ್ಲಾ ಡೇಟಾ ಇರುವುದರಿಂದ..

ಜನರ ಪರ್ಸನಲ್ ಡೇಟಾವನ್ನು ರಕ್ಷಿಸಲು ಹಾಗೆಯೇ ಫೋನ್ ಕಳೆದುಹೋಗುವ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಕೇಂದ್ರ ಸರ್ಕಾರ (Central Government) ಈಗ ಸಂಚಾರ್ ಸಾಥಿ (Sanchar Sathi) ಎನ್ನುವ ಪೋರ್ಟಲ್ ಸೇವೆಯನ್ನು ಜಾರಿಗೆ ತಂದಿದೆ. ಈಗ ಫೋನ್ ಕಳ್ಳತನ ಹೆಚ್ಚಾಗಿ ನಡೆಯುವ ಸಮಸ್ಯೆ ಆಗಿದೆ. ಫೋನ್ ಗಳಲ್ಲಿ ಎಲ್ಲಾ ದಾಖಲೆಗಳನ್ನು ಕೂಡ ಇಡುವುದರಿಂದ ಫೋನ್ ಕಳೆದು ಹೋದರೆ, ಒಬ್ಬ ವ್ಯಕ್ತಿಯ ಪರ್ಸನಲ್ ಡೇಟಾ ಕೂಡ ಮಿಸ್ ಯೂಸ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇಷ್ಟು ಕಡಿಮೆ ಬೆಲೆಗೂ ಫೋನ್ ಸಿಗುತ್ತಾ? ಕೈಟುಕುವ ಬೆಲೆಯಲ್ಲಿ 5200mAh ಬ್ಯಾಟರಿ, ಸ್ಟ್ರಾಂಗ್ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ

Sanchar sarathi portalಹಾಗಾಗಿ ಈ ರೀತಿ ಆಗದ ಹಾಗೆ ತಡೆಯಲು ಜನರಿಗೆ ಸುರಕ್ಷತೆ ನೀಡಲು, ಸಂಚಾರ್ ಸಾಥಿ ಪೋರ್ಟಲ್ (Sanchar Sarathi Portal) ಪರಿಚಯಿಸಲಾಗಿದೆ. ಇದರಲ್ಲಿ ನಿಮಗೆ ಸಾಕಷ್ಟು ಸೇವೆಗಳು ಲಭ್ಯವಿದೆ. ಫೋನ್ ಕಳೆದುಹೋದರೆ ಈ ಪೋರ್ಟಲ್ ಮೂಲಕ ನೀವು ಸುಲಭವಾಗಿ ದೂರು ನೀಡಬಹುದು..

ಸ್ಯಾಮ್‌ಸಂಗ್‌ನ ಫೋಲ್ಡಬಲ್ ಫೋನ್ ಅನ್ನು ₹10,000 ಕ್ಕಿಂತ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಿ, 50% ಕ್ಕಿಂತ ಹೆಚ್ಚು ರಿಯಾಯಿತಿ

ಕೇಂಪ್ಲೇಂಟ್ ಮಾಡುವುದಕ್ಕೆ ನಿಮ್ಮ ಮೊಬೈಲ್ ಫೋನ್ ನ IMEI ನಂಬರ್ ನಿಮ್ಮ ಹತ್ತಿರ ಇರೆಬೇಕು. https://sancharsaathi.gov.in/ ಅಧಿಕೃತ ವೆಬ್ಸೈಟ್ ಗೆ ಹೋಗಿ, ಇಲ್ಲಿ ಹೋಮ್ ಪೇಜ್ ನಲ್ಲಿ ನಿಮಗೆ ನಾಗರಿಕ ಕೇಂದ್ರಿತ ದೂರುಗಳು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ..

ಈಗ ಮೊಬೈಲ್ ಫೋನ್ ಕಳೆದುಹೋಗಿರುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.. ಈಗ ನಿಮ್ಮ ಎದುರು ಫಾರ್ಮ್ ಬರುತ್ತದೆ, ಅದನ್ನು ಫಿಲ್ ಮಾಡಿ. ಫಾರ್ಮ್ ನಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಮಾಹಿತಿ ನೀಡಬೇಕು. ಇಲ್ಲಿ ನೀವು FIR ಕಾಪಿಯನ್ನು ಸಹ ಕೊಡಬೇಕು, ನಿಮ್ಮ ಹೆಸರು, ಇಮೇಲ್ ಐಡಿ, ಅಡ್ರೆಸ್ ಹಾಗೂ ಇನ್ನಿತರ ಎಲ್ಲಾ ಮಾಹಿತಿಗಳನ್ನು ನೀಡಬೇಕು.

ಈ Realme 5G ಫೋನ್ ಅನ್ನು ತಕ್ಷಣವೇ ಖರೀದಿಸಿ, ₹10 ಸಾವಿರ ನೇರ ಡಿಸ್ಕೌಂಟ್! ಜುಲೈ 20ಕ್ಕೆ ಆಫರ್ ಕೊನೆ

ಈ ಫಾರ್ಮ್ ಅನ್ನು ಸರಿಯಾಗಿ ಫಿಲ್ ಮಾಡಿ, ಹಕ್ಕುತ್ಯಾಗಕ್ಕೆ ಒಪ್ಪಿಕೊಂಡ ಬಳಿಕ, ನಿಮ್ಮ ಸ್ಮಾರ್ಟ್ಫೋನ್ ಬ್ಲಾಕ್ ಮಾಡಲಾಗುತ್ತದೆ. ಸಂಚಾರ್ ಸಾಥಿ ಪೋರ್ಟಲ್ ಇಂದ ನಿಮ್ಮ ಪರ್ಸನಲ್ ಡೇಟಾವನ್ನು ರಕ್ಷಿಸಬಹುದು.

Sanchar sarathi portal launched

Follow us On

FaceBook Google News

Sanchar sarathi portal launched