ಇದೇ ವಿಶ್ವದ ಅತ್ಯಂತ ತೆಳುವಾದ ಫೋಲ್ಡಬಲ್ ಫೋನ್! ಜುಲೈ 2ಕ್ಕೆ ಬಿಡುಗಡೆ

Honor Magic V5 ಹೆಸರಿನ ಫೋನ್ ಜುಲೈ 2ರಂದು ಚೀನಾದಲ್ಲಿ ಲಾಂಚ್ ಆಗುತ್ತಿದೆ. 6100mAh ಬ್ಯಾಟರಿ, Snapdragon 8 ಚಿಪ್, ಟ್ರಿಪಲ್ ಕ್ಯಾಮರಾ ಮತ್ತು 2K ಫೋಲ್ಡಿಂಗ್ ಡಿಸ್ಪ್ಲೇ ಇದರ ವೈಶಿಷ್ಟ್ಯಗಳು.

  • ಜುಲೈ 2ರಂದು Magic V5 ಭಾರೀ ಸ್ಪೆಕ್ಸ್‌ನೊಂದಿಗೆ ಲಾಂಚ್
  • 6100mAh ಬ್ಯಾಟರಿ, Snapdragon 8 Elite ಚಿಪ್
  • 50MP ಕ್ಯಾಮರಾ, 2K ಡಿಸ್ಪ್ಲೇ, 16GB RAM

Honor ಕಂಪನಿ ತನ್ನ ಮುಂದಿನ ಫ್ಲಾಗ್‌ಶಿಪ್ foldable Smartphone Magic V5 ಅನ್ನು ಜುಲೈ 2 ರಂದು ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಫೋನ್ ಈಗಾಗಲೇ Weibo ನಲ್ಲಿ ಟೀಜರ್ ರೂಪದಲ್ಲಿ ಪ್ರದರ್ಶನವಾಗಿದೆ.

ಕಂಪನಿಯ ಪ್ರಕಾರ, ಇದು ಈಗವರೆಗೆ ಲಭ್ಯವಿರುವ ಅತ್ಯಂತ ತೆಳ್ಳನೆಯ ಫೋಲ್ಡಬಲ್ ಫೋನ್ (slimmest foldable phone) ಆಗಿರಲಿದೆ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ಬಜೆಟ್ ಸೆಗ್ಮೆಂಟ್‌ನಲ್ಲಿ ಬರಿ 7 ಸಾವಿರಕ್ಕೆ ಲಾವಾ 5G ಫೋನ್! ಖರೀದಿ ಜೋರು

AI ಮತ್ತು ಪಿಸಿ ಲೆವೆಲ್ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ

Magic V5 ಫೋನ್‌ AI ಅಳವಡಿಕೆ ಹೊಂದಿದ್ದು, ಕಂಪನಿಯು ಇದನ್ನು “PC-level productivity” ಕೊಡುವ ಸಾಧನವೆಂದು ಬಿಂಬಿಸಿದೆ. ಇದರ ಡಿಸೈನ್ ಬಹಳ ಪ್ಲೀನ್ ಆಗಿದ್ದು, ಆಕರ್ಷಕ ಕ್ಯಾಮರಾ ಐಲ್ಯಾಂಡ್ ಮತ್ತು ಸೈಡ್ ಮೌಂಟ್ ಪವರ್ ಬಟನ್ ಹೊಂದಿದೆ. ಇದನ್ನು Samsung Galaxy Z Fold 7 ಗೆ ಪ್ರತಿಸ್ಪರ್ಧಿಯಾಗಿ ಪ್ರಸ್ತುತಪಡಿಸಲಾಗುತ್ತಿದೆ.

ಜಬರದಸ್ತ್ ಬ್ಯಾಟರಿ ಮತ್ತು ಕ್ಯಾಮರಾ ಸೆಟ್‌ಅಪ್

ಹಾಗೇ ನೋಡಿದರೆ Magic V5 ನಲ್ಲಿ 6100mAh ಬ್ಯಾಟರಿ ಜೊತೆಗೆ 66W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಹಿಂದಿನ ಲೀಕ್ಸ್ ಪ್ರಕಾರ, ಇದರ ಕ್ಯಾಮರಾ ಸೆಟ್‌ಅಪ್‌ ಸಹ ಹೆಚ್ಚು ಆಕರ್ಷಕವಾಗಿದ್ದು, 50MP ಪ್ರೈಮರಿ ಕ್ಯಾಮೆರಾ, ಅಲ್ಟ್ರಾ ವೈಡ್ ಕ್ಯಾಮೆರಾ, ಮತ್ತು 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇರಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ವಾವ್ಹ್, ಲಕ್ಷ ರೂಪಾಯಿ ತರ ಕಾಣುವ ಈ ಫೋನ್ ಬೆಲೆ ₹10,000ಕ್ಕಿಂತ ಕಡಿಮೆ

Honor Magic V5

ಡಿಸ್ಪ್ಲೇ

Magic V5 ಫೋನ್‌ನಲ್ಲಿ 6.45 ಇಂಚುಗಳ LTPO OLED ಕವರ್ ಡಿಸ್ಪ್ಲೇ ಇರುವ ಸಾಧ್ಯತೆ ಇದೆ. ಜೊತೆಗೆ, 8 ಇಂಚುಗಳ 2K ರೆಸಲ್ಯೂಷನ್‌ನೊಳಗಿನ ಫೋಲ್ಡಬಲ್ ಡಿಸ್ಪ್ಲೇ (foldable inner screen) ಕೂಡ ಇರಲಿದೆ ಎಂದು ತಜ್ಞರು ಊಹಿಸಿದ್ದಾರೆ.

ಇದನ್ನೂ ಓದಿ: ಐಫೋನ್ 16e ಮೇಲೆ ಅಮೆಜಾನ್ ಬಂಪರ್ ಡಿಸ್ಕೌಂಟ್! ಒಂದೇ ದಿನಕ್ಕೆ ಸ್ಟಾಕ್ ಖಾಲಿ

ಪರ್ಫಾರ್ಮೆನ್ಸ್? Snapdragon 8 Elite!

ಈ ಸಾಧನದಲ್ಲಿ Qualcomm Snapdragon 8 Elite (Snapdragon 8 Gen 3) ಪ್ರೊಸೆಸರ್, 16GB RAM, Android 15 OS ಹಾಗೂ IPX8 ವಾಟರ್ ರೆಸಿಸ್ಟೆಂಟ್ ಬಿಲ್ಡ್ ಇರಲಿದೆ ಎಂಬ ಅಂಶಗಳು ಗಿಕ್‌ಬೆಂಚ್ ಲಿಸ್ಟಿಂಗ್‌ಗಳಲ್ಲಿ ತಿಳಿದುಬಂದಿವೆ. ಇದರ ಮಾದರಿ ಸಂಖ್ಯೆ MHG-AN00 ಎಂದು ವರದಿಯಾಗಿದೆ.

World’s Slimmest Foldable Phone, Honor Magic V5 Launching July 2

Feature Details
Model Honor Magic V5
Launch Date July 2, 2025 (China)
Processor Snapdragon 8 Elite
RAM 16GB
OS Android 15
Battery 6100mAh with 66W Fast Charging
Display 6.45″ LTPO OLED Cover, 8″ 2K Inner Foldable
Camera 50MP Primary, 200MP Telephoto, Ultra-wide lens
Build IPX8 Rated, Slim Foldable Design
Weight & Thickness Likely under 9mm (folded), lightest in segment
English Summary

Related Stories