ವಾವ್ಹ್, ಲಕ್ಷ ರೂಪಾಯಿ ತರ ಕಾಣುವ ಈ ಫೋನ್ ಬೆಲೆ ₹10,000ಕ್ಕಿಂತ ಕಡಿಮೆ
ಪ್ರಿಮಿಯಂ ಲುಕ್, 120Hz ಡಿಸ್ಪ್ಲೇ, ಶಕ್ತಿಯುತ ಬ್ಯಾಟರಿ ಮತ್ತು ಉತ್ತಮ ಕ್ಯಾಮರಾದೊಂದಿಗೆ Redmi 14C 5G ಇದೀಗ 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಲಭ್ಯವಿದೆ.

- 50MP ಕ್ಯಾಮರಾ, 5160mAh ಬ್ಯಾಟರಿ
- ₹10,000 ರೂ. ಒಳಗಿನ ಬೆಲೆಯಲ್ಲಿ 5G ಫೋನ್
- HyperOS 14 ಆಧಾರಿತ ಹೊಸ ಸಾಫ್ಟ್‌ವೇರ್
ಬಜೆಟ್ ಸೆಗ್ಮೆಂಟ್‌ನಲ್ಲಿ 5G Smartphone ಹುಡುಕುತ್ತಿರುವವರಿಗೆ Redmi 14C 5G ಉತ್ತಮ ಆಯ್ಕೆಯಾಗಲಿದೆ. ಇದರ ಬೆಲೆ ₹10,000ಕ್ಕಿಂತ ಕಡಿಮೆ ಇದ್ದರೂ, ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಪ್ರೀಮಿಯಂ ಫೋನ್‌ನಂತೆ ಕಾಣುತ್ತದೆ.
ಮೊಬೈಲ್ ಹಿಂದಿನ ಭಾಗದಲ್ಲಿ ಸ್ಟಾರ್ ಫಿನಿಶ್ ಇದ್ದು, ಕ್ಯಾಮರಾ ಬಂಪ್ ಕೂಡ ಮಿತವಾಗಿರುವುದರಿಂದ ಹಿಡಿದಾಗಲೂ ಆಕರ್ಷಕವಾಗಿ ಕಾಣುತ್ತದೆ.
ಇದನ್ನೂ ಓದಿ: ಐಫೋನ್ 16e ಮೇಲೆ ಅಮೆಜಾನ್ ಬಂಪರ್ ಡಿಸ್ಕೌಂಟ್! ಒಂದೇ ದಿನಕ್ಕೆ ಸ್ಟಾಕ್ ಖಾಲಿ
ಡಿಸ್ಪ್ಲೇ 6.88 ಇಂಚಿನಾಗಿದ್ದು, ಇದರಲ್ಲಿ 120Hz ರಿಫ್ರೆಶ್ ರೇಟ್ (refresh rate) ನೀಡಲಾಗಿದೆ. ಇದರಿಂದ ಯೂಟ್ಯೂಬ್, OTTಗಳಲ್ಲಿ ವಿಡಿಯೋ ನೋಡಲು ಒಳ್ಳೆಯ ಅನುಭವ ಸಿಗುತ್ತದೆ. ಥಿಕ್ ಬೇಜಲ್ ಇದ್ದರೂ ಅದು ಬಳಕೆದಾರ ಅನುಭವಕ್ಕೆ ತೊಂದರೆ ಆಗುವುದಿಲ್ಲ.
ಫೋನ್ Snapdragon 4 Gen 2 ಪ್ರೊಸೆಸರ್ (processor) ಹೊಂದಿದೆ. ಬಾಕ್ಸ್‌ನಲ್ಲಿಯೇ 33W ಚಾರ್ಜರ್ ಇದೆ, ಆದರೆ ಬ್ಯಾಟರಿ 18W ಫಾಸ್ಟ್ ಚಾರ್ಜಿಂಗ್ (fast charging) ಸಪೋರ್ಟ್ ಹೊಂದಿದೆ. ಬ್ಯಾಟರಿ ಪರ್ಫಾರ್ಮನ್ಸ್ ಉತ್ತಮವಾಗಿದೆ. ನಿಯಮಿತ ಬಳಕೆದಾರರಿಗೆ ದಿನಕ್ಕೆ ಒಂದು ಚಾರ್ಜ್ ಸಾಕು; ಹೆವಿ ಯೂಸರ್ಸ್ ಮಾತ್ರ ದಿನಕ್ಕೆ ಎರಡು ಬಾರಿ ಚಾರ್ಜ್ ಮಾಡಬೇಕಾಗಬಹುದು.
ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ನಲ್ಲಿ ಈ 5G ಸ್ಮಾರ್ಟ್‌ಫೋನ್ ಮೇಲೆ ಬಂಪರ್ ಡಿಸ್ಕೌಂಟ್! ಸೋಲ್ಡ್ ಔಟ್
ಈ ಫೋನ್‌ನಲ್ಲಿ 50MP ಪ್ರಾಥಮಿಕ ಕ್ಯಾಮರಾ ಹಾಗೂ 2MP ಸೆಕೆಂಡರಿ ಲೆನ್ಸ್ ಇದ್ದು, ನೈಟ್ ಮೋಡ್ ಮತ್ತು ಪೋಟ್ರೇಟ್ ಮೋಡ್ ಸೇರಿದಂತೆ ಹಲವಾರು ಆಯ್ಕೆಗಳಿವೆ. ಕ್ಯಾಮರಾ ಔಟ್‌ಪುಟ್ ಉತ್ತಮವಾಗಿದ್ದು, ಕೆಲವೊಂದು ಸನ್ನಿವೇಶಗಳಲ್ಲಿ ಶಾರ್ಪ್‌ನೆಸ್ ಕಡಿಮೆ ಇರಬಹುದು. ಸೆಲ್ಫಿ ಕ್ಯಾಮರಾ 8MP ಆಗಿದ್ದು, ಬ್ಯೂಟಿ ಮೋಡ್ ಡೀಫಾಲ್ಟ್ ಆಗಿ ಆನ್ ಇರುತ್ತದೆ.
ಇದನ್ನೂ ಓದಿ: ಇಷ್ಟು ಕಡಿಮೆ ಬೆಲೆಗೂ ಮೊಬೈಲ್ ಸಿಗುತ್ತಾ? ಇದೇ ಫಸ್ಟ್ ಟೈಮ್ ಬಂಪರ್ ಕೊಡುಗೆ
ಇದು HyperOS 14 ಆಧಾರಿತ ಫೋನ್ ಆಗಿದ್ದು, Android 14 (Android OS) ಮೂಲಕ ಸುಗಮವಾದ ಬಳಕೆಯನ್ನು ನೀಡುತ್ತದೆ. ಮೊಬೈಲ್ ಡೈಲಿ ಯೂಸ್, ಮಲ್ಟಿಟಾಸ್ಕಿಂಗ್ ಮತ್ತು ಲೈಟ್ ಗೇಮಿಂಗ್‌ಗೆ ಇದು ಸೂಕ್ತವಾಗಿದೆ.
ಒಟ್ಟಾರೆ, ಈ ಸೆಗ್ಮೆಂಟ್‌ನಲ್ಲಿ ಪ್ರೀಮಿಯಂ ಲುಕ್, ಪರ್ಫಾರ್ಮನ್ಸ್, ಡಿಸ್ಪ್ಲೇ ಮತ್ತು ಬ್ಯಾಟರಿ all-in-one ಫೋನ್ ಖರೀದಿಸಬೇಕೆಂದು ಬಯಸುವವರಿಗೆ Redmi 14C 5G ಉತ್ತಮ ಆಯ್ಕೆಯಾಗಿದೆ.
Redmi 14C 5G Review, A Premium 5G Phone Under ₹10,000
| Feature | Details |
|---|---|
| Model | Redmi 14C 5G |
| Display | 6.88-inch HD+, 120Hz Refresh Rate |
| Processor | Snapdragon 4 Gen 2 |
| Rear Camera | 50MP + 2MP Dual |
| Front Camera | 8MP Selfie |
| Battery | 5160mAh, 18W Charging |
| Charging Adapter | 33W Charger in Box |
| RAM + Storage | 6GB + 128GB |
| OS | HyperOS based on Android 14 |




