ಇಷ್ಟು ಕಡಿಮೆ ಬೆಲೆಗೂ ಮೊಬೈಲ್ ಸಿಗುತ್ತಾ? ಇದೇ ಫಸ್ಟ್ ಟೈಮ್ ಬಂಪರ್ ಕೊಡುಗೆ
6000mAh ಬ್ಯಾಟರಿ, 50MP ಕ್ಯಾಮೆರಾ, 5G ಚಿಪ್ಸೆಟ್ ಇರುವ Vivo T4 Lite 5G ಮಾದರಿ ಭಾರತದಲ್ಲಿ ಲಾಂಚ್ ಆಗುತ್ತಿದೆ. ದರ ₹10,000ಕ್ಕಿಂತ ಕಡಿಮೆ ಇರುವುದು ಖಚಿತವಾಗಿದೆ.

- 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿದ ಫೋನ್
- ₹10,000ಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿರಲಿದೆ
- MediaTek Dimensity 6300 (5G ಚಿಪ್ಸೆಟ್) ಒಳಗೊಂಡಿದೆ
ವಿವೋ ಕಂಪನಿಯಿಂದ ಮಾರುಕಟ್ಟೆಗೆ ಬರಲಿರುವ ಹೊಸ Vivo T4 Lite 5G Smartphone ಮಾದರಿ ಈಗಾಗಲೇ ತಂತ್ರಜ್ಞಾನ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಫೋನ್ನ್ನು ಜೂನ್ 2025 ರಲ್ಲಿ ಲಾಂಚ್ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಫ್ಲಿಪ್ಕಾರ್ಟ್ (Flipkart), ವಿವೋ ವೆಬ್ಸೈಟ್ ಮತ್ತು ಆಫ್ಲೈನ್ ಸ್ಟೋರ್ಗಳಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.
ಈ ಹೊಸ Vivo T4 Lite 5G ಡಿವೈಸ್ನಲ್ಲಿ 6000mAh ಸಾಮರ್ಥ್ಯದ ಭಾರಿ ಬ್ಯಾಟರಿ ಒದಗಿಸಲಾಗಿದ್ದು, ಇದು ಸುಮಾರು 15.7 ಗಂಟೆಗಳ ಯುಟ್ಯೂಬ್ ವೀಕ್ಷಣೆ ಅಥವಾ 46.6 ಗಂಟೆಗಳ ಕಾಲ್ಗೆ ಸಾಕಾಗುತ್ತದೆ. ಇದರೊಂದಿಗೆ 33W SuperVOOC ಫಾಸ್ಟ್ ಚಾರ್ಜಿಂಗ್ ಕೂಡ ಲಭ್ಯವಿರಲಿದೆ. ಬಜೆಟ್ ಫೋನ್ಗಳಲ್ಲಿ ಇಷ್ಟು ದೊಡ್ಡ ಬ್ಯಾಟರಿ ನಿಜಕ್ಕೂ ಗಮನ ಸೆಳೆಯುತ್ತದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಲ್ಲಿ ಈ 5G ಸ್ಮಾರ್ಟ್ಫೋನ್ ಮೇಲೆ ಬಂಪರ್ ಡಿಸ್ಕೌಂಟ್! ಸೋಲ್ಡ್ ಔಟ್
ಫೋನ್ನ್ನು ಶಕ್ತಿಶಾಲಿ ಮೇಕ್ ಮಾಡಿರುವ MediaTek Dimensity 6300 (5G ಚಿಪ್ಸೆಟ್) ಇದರ ಗುರ್ತಿಸುವ ಅಂಶವಾಗಿದೆ. ಈ ಚಿಪ್ 6nm ತಂತ್ರಜ್ಞಾನದಲ್ಲಿ ನಿರ್ಮಿತವಾಗಿದ್ದು, AnTuTu ಸ್ಕೋರ್ 410,000ಕ್ಕಿಂತ ಹೆಚ್ಚು ಇದೆ. ಇದು ಉತ್ತಮ ಗೇಮಿಂಗ್, ಸ್ಟ್ರೀಮಿಂಗ್ ಮತ್ತು multitasking ಸಾಧನವಾಗಿದೆ.
Vivo T4 Lite 5G ಡಿಸ್ಪ್ಲೇ ಅಂಶದಲ್ಲೂ ವೈಶಿಷ್ಟ್ಯತೆ ಹೊಂದಿದೆ. 6.56 ಇಂಚಿನ HD+ LCD ಸ್ಕ್ರೀನ್ ಅನ್ನು 120Hz ರಿಫ್ರೆಶ್ ರೇಟ್ನಲ್ಲಿ ನೀಡಲಾಗಿದೆ. ಇದು ಸ್ಮೂತ್ ಸ್ಕ್ರೋಲಿಂಗ್ ಮತ್ತು ಆಟಗಳಲ್ಲಿ ಉತ್ತಮ ಅನುಭವ ನೀಡುತ್ತದೆ. ಡಿಸೈನ್ ಕೂಡ ಬಹಳ ಸ್ಲಿಮ್ ಮತ್ತು ಸ್ಟೈಲಿಷ್ ಆಗಿದ್ದು, ಬ್ಲಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಇದನ್ನೂ ಓದಿ: 1 ವರ್ಷ ರಿಚಾರ್ಜ್ ಬೇಕಿಲ್ಲ! ಜಿಯೋದಿಂದ ಲಾಂಗ್ ವ್ಯಾಲಿಡಿಟಿ ಪ್ಲಾನ್ ಬಿಡುಗಡೆ
ಫೋಟೋಗ್ರಫಿಗಾಗಿ, ಈ Vivo ಫೋನ್ನಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು AI Clear Face ಫೀಚರ್ ಲಭ್ಯವಿರುತ್ತದೆ. ಇದು ಫೋಟೋಗಳ ಸ್ಪಷ್ಟತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುಂದೆ 8MP ಫ್ರಂಟ್ ಕ್ಯಾಮೆರಾ ದೊರೆಯುತ್ತದೆ. ಈ ಎಲ್ಲ ಫೀಚರ್ಗಳು ₹10,000 ಬೆಲೆಗೆ ಭರ್ಜರಿ ವ್ಯಾಲ್ಯೂ ನೀಡುತ್ತವೆ.
Vivo T4 Lite 5G to Launch Under 10,000 with 6000mAh Battery




