ರಶ್ಮಿಕಾ ಮಂದಣ್ಣ ಸದ್ಯ ಬಹು ಬೇಡಿಕೆಯ ನಟಿ, ಹಿಟ್ ಚಿತ್ರಗಳ ಮೂಲಕ ನ್ಯಾಷನಲ್ ಕ್ರಶ್ ನಟಿಯಾದರು, ಅವರ ಐಷಾರಾಮಿ ಮನೆಗಳು ಯಾವ ನಗರಗಳಲ್ಲಿ ಇವೆ ಗೊತ್ತಾ, ಇಲ್ಲಿದೆ ನೋಡಿ ಮಾಹಿತಿ. 

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ ಚಲೋ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು.

ನಂತರ ರಶ್ಮಿಕಾ ಮಂದಣ್ಣ ಗೀತಗೋವಿಂದಂ, ಸರಿಲೇರು ನೀಕೆವ್ವರು ಸಿನಿಮಾಗಳ ಮೂಲಕ ಸ್ಟಾರ್ ಹೀರೋಯಿನ್ ಆದರು, ಕೆಲವೇ ದಿನಗಳಲ್ಲಿ ಟಾಪ್ ನಾಯಕಿಯಾದರು.

ಇತ್ತೀಚಿನ ಪುಷ್ಪ ಚಿತ್ರದೊಂದಿಗೆ ನ್ಯಾಷನಲ್ ಕ್ರಶ್ ನಾಯಕಿಯಾದರು. ಇದರೊಂದಿಗೆ ಕನ್ನಡದ ಈ ಚೆಲುವೆಗೆ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ನಿಂದ ಸರಣಿ ಆಫರ್ ಗಳು.

ಈ ನಡುವೆ ಬಾಲಿವುಡ್‌ನಿಂದ ಹೆಚ್ಚಿನ ಆಫರ್‌ಗಳು ಬಂದಿದ್ದರಿಂದ, ರಶ್ಮಿಕಾ ಮುಂಬೈಗೆ ತೆರಳಿದರು ಮತ್ತು ಅಲ್ಲಿಯೂ ಸಹ ಮನೆ ಖರೀದಿಸಿದರು.

ಮುಂಬೈಗಿಂತ ಮೊದಲು ರಶ್ಮಿಕಾ ಮಂದಣ್ಣ ಹಲವು ಕಡೆ ಐಷಾರಾಮಿ ಮನೆಗಳನ್ನು ಖರೀದಿಸಿದ್ದರು.

ರಶ್ಮಿಕಾಗೆ ಹೈದರಾಬಾದ್ ಹಾಗೂ ಕೂರ್ಗ್‌ನಲ್ಲಿ ಮನೆಗಳಿವೆ.

ಕೂರ್ಗ್‌ನ ವಿರಾಜಪೇಟೆ ಗಿರಿಧಾಮದಲ್ಲಿರುವ ಈ ಮನೆಯಲ್ಲಿ ರಶ್ಮಿಕಾ ಪೋಷಕರು ವಾಸಿಸುತ್ತಿದ್ದಾರೆ. ಆಗಾಗ ಅಲ್ಲಿಗೆ ಹೋಗಿ ಅವರು ಎಂಜಾಯ್ ಮಾಡುತ್ತಾರೆ.

2021ರಲ್ಲಿ ರಶ್ಮಿಕಾ ಗೋವಾದಲ್ಲಿ ಮನೆ ಖರೀದಿಸಿದ್ದಾರೆ. 2022 ರ ಹೊಸ ವರ್ಷದ ಆಚರಣೆಯನ್ನು ಅವರು ಅಲ್ಲಿಯೇ ಆಚರಿಸಿದರು.

ರಶ್ಮಿಕಾಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ರೇಂಜ್ ರೋವರ್, ಬೆಂಜ್ ಸಿ, ಆಡಿ ಕ್ಯೂ ಜೊತೆಗೆ ಇನ್ನೋವಾ, ಕ್ರೆಟಾ ಅವರ ಬಳಿ ಇವೆ..

Click To Read More STORIES