ನಕಲಿ ಸುದ್ದಿಗೆ 7 ವರ್ಷ ಜೈಲು, 10 ಲಕ್ಷ ದಂಡ: ಕರ್ನಾಟಕ ಸರ್ಕಾರ ಖಡಕ್ ಸೂಚನೆ
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚಿದರೆ ಈಗ ಭಾರೀ ಶಿಕ್ಷೆ ಎದುರಾಗಲಿದೆ. ಕಾನೂನು ಬದಲಾಗುತ್ತಿದ್ದು, ಜೈಲು ಮತ್ತು ದಂಡ ಎರಡೂ ಗಂಭೀರವಾಗಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
Publisher: Kannada News Today (Digital Media)
- ತಪ್ಪು ಸುದ್ದಿ ಹಂಚಿದರೆ 7 ವರ್ಷ ಜೈಲು ಮತ್ತು ₹10 ಲಕ್ಷದ ದಂಡ
- ತಪ್ಪುಮಾಹಿತಿಗೆ ತಡೆ ನೀಡಲು ನಿಯಂತ್ರಣ ಮಂಡಳಿ ರಚನೆ
- ಸಾಮಾಜಿಕ ಜಾಲತಾಣಗಳಲ್ಲಿ ನಿಗಾ ಹೆಚ್ಚಿಸಲು ವಿಶೇಷ ನ್ಯಾಯಾಲಯ
ಬೆಂಗಳೂರು (Bengaluru): ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಯ ವಿರುದ್ಧ ಸರ್ಕಾರ ತೀವ್ರ ಕ್ರಮ ಕೈಗೊಳ್ಳಲು ಮುಂದಾಗಿದೆ. ನಕಲಿ ಸುದ್ದಿ (fake news) ಹಂಚಿದರೆ ಇದೀಗ ಕಾನೂನು ಪ್ರಕಾರ 7 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ ₹10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
ಈ ಹೊಸ ಮಸೂದೆ “ತಪ್ಪುಮಾಹಿತಿ ಮತ್ತು ನಕಲಿ ಸುದ್ದಿ ನಿಷೇಧ ಕಾಯ್ದೆ – 2025” ಎಂದು ಹೆಸರಿಸಲಾಗಿದ್ದು, ಇದನ್ನು ಇತ್ತೀಚೆಗೆ ರಾಜ್ಯದ ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಬದಲಾವಣೆ, ಸಚಿವರು ಕೊಟ್ರು ಅಪ್ಡೇಟ್! ಭಾರೀ ಸುದ್ದಿ
ಈ ಕಾನೂನಿಗೆ ಅನುಗುಣವಾಗಿ ಕರ್ನಾಟಕ ರಾಜ್ಯದಲ್ಲಿ ನಿಯಂತ್ರಣ ಮಂಡಳಿ ರಚನೆಯಾಗಲಿದೆ. ಇದರ ಅಧ್ಯಕ್ಷತೆಯನ್ನು ಒಬ್ಬ ಸಚಿವರು ವಹಿಸಲಿದ್ದು, ಒಟ್ಟು 6 ಮಂದಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ನಿಯಮವು (misinformation law) ಕೇವಲ ಸಾಮಾಜಿಕ ಮಾಧ್ಯಮವಲ್ಲದೆ, ಡಿಜಿಟಲ್ ಮಾಧ್ಯಮಗಳಲ್ಲೂ ಅನ್ವಯವಾಗುತ್ತದೆ. ಸರ್ಕಾರ ತಪ್ಪು ಮಾಹಿತಿ ಹಂಚುವವರನ್ನು ಗುರುತಿಸಲು ಮತ್ತು ತನಿಖೆ ನಡೆಸಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಿದೆ. ಜನರ ಸುರಕ್ಷತೆ ಮತ್ತು ಮಾಹಿತಿ ಪ್ರಾಮಾಣಿಕತೆಗೆ ಇದು ಸಹಕಾರಿಯಾಗಲಿದೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್‌ಗೆ ರಾಗಿ, ಅಕ್ಕಿ, ಜೋಳ ಉಚಿತ! ಕರ್ನಾಟಕ ಸರ್ಕಾರ ಹೊಸ ನಿರ್ಧಾರ
ಸಾಮಾನ್ಯ ತಪ್ಪು ಮಾಹಿತಿಗೆ 2ರಿಂದ 5 ವರ್ಷದ ಜೈಲು ಶಿಕ್ಷೆ ಹಾಗೂ ಪ್ರತಿದಿನ ₹25,000ರ ತನಕ ದಂಡ ವಿಧಿಸಬಹುದು. ಅಲ್ಲದೇ, ಈ ಪ್ರಕರಣಗಳನ್ನು ನಿಭಾಯಿಸಲು ಸರ್ಕಾರವು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಬಿಪಿಎಲ್ ರೈತರಿಗೆ ಉಚಿತ ಹಸು ಹಾಗೂ ಮೇವು ಯಂತ್ರ ಯೋಜನೆಗೆ ಅರ್ಜಿ ಆಹ್ವಾನ
ಇದೊಂದು cognisable ಮತ್ತು non-bailable ಕಾಯ್ದೆಯಾಗಿರುವುದರಿಂದ, ತಪ್ಪು ಸುದ್ದಿ ಹರಡುವವರಿಗೆ ಸುಲಭದಲ್ಲಿ ಜಾಮೀನು ದೊರೆಯುವ ಸಾಧ್ಯತೆಯಿಲ್ಲ. ಕಂಪನಿಗಳು ಅಥವಾ ಸಂಸ್ಥೆಗಳ ಮೂಲಕ ತಪ್ಪು ಮಾಹಿತಿ ಹಬ್ಬಿಸಿದರೂ ಕೂಡ ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.
ಇದರಿಂದ ಜನರು ಸ್ಪಷ್ಟವಾದ ಮಾಹಿತಿ ಹಂಚಿಕೊಳ್ಳುವ ದೃಷ್ಟಿಕೋನಕ್ಕೆ ಚಲಿಸುವ ಸಾಧ್ಯತೆ ಹೆಚ್ಚಾಗಿದ್ದು, ತಪ್ಪು ಸುದ್ದಿಯಿಂದ ಉಂಟಾಗುವ ಗೊಂದಲಗಳಿಗೆ ತಡೆಬೀಳುಬಹುದೆಂಬ ನಿರೀಕ್ಷೆ ಇದೆ.
7-Year Jail for Spreading Fake News in Karnataka