ಸ್ವಂತ ಆಸ್ತಿ, ಸೈಟ್, ಮನೆ, ಜಮೀನು ಇರುವವರಿಗೆ ಸರ್ಕಾರದಿಂದ ಹೊಸ ಆದೇಶ! ಖಡಕ್ ನಿರ್ಧಾರ
ಇನ್ನುಮುಂದೆ ಭೂಮಿಗೆ (Property) ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಡಿಜಿಟಲೈಸ್ ಮಾಡುವ ನಿರ್ಧಾರ ತೆಗೆದುಕೊಂಡಿದೆ ಸರ್ಕಾರ.
ಈಗ ಎಲ್ಲಾ ಕಡೆ ಭೂಮಿ, ನೆಲ, ಆಸ್ತಿ ಇವುಗಳಿಗೆ ಸಂಬಂಧಿಸಿದ ಹಾಗೆ ಬಹಳಷ್ಟು ಅಕ್ರಮ, ವಂಚನೆಗಳು ನಡೆಯುತ್ತಿದೆ. ನಕಲಿ ದಾಖಲೆಗಳನ್ನು (Fake Documents) ಇಟ್ಟುಕೊಂಡು ಮೋಸ ಮಾಡುವವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ.
ಇದೆಲ್ಲವನ್ನು ನಿಲ್ಲಿಸಬೇಕು ಎಂದು ಸರ್ಕಾರ ಈಗ ಹೊಸದೊಂದು ರೂಲ್ಸ್ ಅನ್ನು ಜಾರಿಗೆ ತಂದಿದ್ದು, ಇದರಿಂದ ಎಲ್ಲರಿಗೂ ಅನುಕೂಲ ಆಗಲಿದೆ. ಅಕ್ರಮಗಳು ಕಡಿಮೆ ಆಗಲಿದೆ. ಹಾಗಿದ್ದಲ್ಲಿ ಸರ್ಕಾರದ ಹೊಸ ಕ್ರಮ ಏನು? ತಿಳಿಯೋಣ..
ಇನ್ನು ಮುಂದೆಯೂ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸವನ್ನು ತಪ್ಪದೇ ಮಾಡಿ
ಇನ್ಮೇಲೆ ಎಲ್ಲವೂ ಡಿಜಿಟಲ್
ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ಇನ್ನುಮುಂದೆ ಭೂಮಿಗೆ (Property) ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಡಿಜಿಟಲೈಸ್ ಮಾಡುವ ನಿರ್ಧಾರ ತೆಗೆದುಕೊಂಡಿದೆ ಸರ್ಕಾರ. ಇದರಿಂದ ನಕಲಿ ದಾಖಲೆ ಸೃಷ್ಟಿಸಿ, ಮೋಸ ಮಾಡುವವರ ಸಂಖ್ಯೆ ಕಡಿಮೆ ಆಗುತ್ತದೆ.
ಅಕ್ರಮಗಳು ನಡೆಯುವುದು ಕೂಡ ತಪ್ಪುತ್ತದೆ ಎಂದು ಈ ರೂಲ್ಸ್ ಜಾರಿಗೆ ತರಲಾಗಿದೆ. ಎಲ್ಲವೂ ಡಿಜಿಟಲೈಸ್ (Digitalise) ಆದರೆ, ಭೂಮಿಗೆ ಸೇರಿದ ದಾಖಲೆಗಳು, RTC ಇದೆಲ್ಲವನ್ನು ಸಹ ನೀವು ಆನ್ಲೈನ್ ಮೂಲಕವೇ ಪಡೆದುಕೊಳ್ಳಬಹುದು. ಈ ರೀತಿ ಆದರೆ, ಜನರು ದಾಖಲೆಗಳಿಗಾಗಿ ಕಂದಾಯ ಇಲಾಖೆಗೆ ಹೋಗುವುದು ತಪ್ಪುತ್ತದೆ.
ರೇಷನ್ ಕಾರ್ಡ್‌ಗೆ ಹೊಸ ಸದಸ್ಯರ ಹೆಸರು ಸೇರಿಸಲು ಅವಕಾಶ! ಆನ್ಲೈನ್ ಸುಲಭ ಪ್ರಕ್ರಿಯೆ ಇಲ್ಲಿದೆ
ನಕಲಿ ದಾಖಲೆ ಮೋಸಕ್ಕೆ ಬ್ರೇಕ್
ಭೂಮಿ ಖರೀದಿ (Buy Property) ಮಾಡಬೇಕು ಎನ್ನುವ ಆಸೆ ಬಹಳಷ್ಟು ಜನರಿಗೆ ಇರುತ್ತದೆ. ಅಂಥವರು ಭೂಮಿ ಖರೀದಿ ಮಾಡಲು ಮುಂದಾದಾಗ ಕೆಲವು ಕಿಡಿಗೇಡಿಗಳು ಅವರ ಮುಗ್ಧತೆಯನ್ನು ಬಳಸಿಕೊಂಡು, ನಕಲಿ ದಾಖಲೆಗಳನ್ನು ನೀಡಿ ಮೋಸ ಮಾಡುತ್ತಾರೆ. ಇಂಥ ಮೋಸದ ಪ್ರಕರಣಗಳು ಇತ್ತೀಚೆಗೆ ಜಾಸ್ತಿ ಆಗುತ್ತಲೇ ಇದೆ. ಹಾಗಾಗಿ ಸರ್ಕಾರವು ಎಲ್ಲಾ ದಾಖಲೆಗಳು ಡಿಜಿಟಲೀಕರಣ ಆಗಲೇಬೇಕು ಎಂದು ಕಠಿಣ ಕ್ರಮ ತೆಗೆದುಕೊಂಡಿದೆ.
ಇದರಿಂದ ನಿಮ್ಮ ಕೆಲಸಗಳು ಸುಲಭ
ಸರ್ಕಾರದ ಈ ನಿರ್ಧಾರದಿಂದ ಸಾರ್ವಜನಿಕರಿಗೆ ಅವರ ಕೆಲಸಗಳು ಸುಲಭ ಆಗಲಿದೆ. ಹೌದು, ಇನ್ನುಮುಂದೆ ನೀವು ಆಸ್ತಿ ನೋಂದಾಣಿಗಾಗಿ ದಲ್ಲಾಳಿಗಳ ಮೇಲೆ ಅವಲಂಬಿಸುವ ಹಾಗಿಲ್ಲ. ಮೋಸದ ಪ್ರಕರಣ ಕೂಡ ನಡೆಯುವುದಿಲ್ಲ. ಸುಳ್ಳು ದಾಖಲೆಗಳ ಸಮಸ್ಯೆ, ಸರ್ವರ್ ತೊಂದರೆ ಇಂಥ ಯಾವುದೇ ಸಮಸ್ಯೆಗಳು ಇನ್ನುಮುಂದೆ ಇರುವುದಿಲ್ಲ.
ಕೊನೆಗೂ ಮೇ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ
ಈ ಕೆಲಸ ಮಾಡಿ
ಈ ಎಲ್ಲಾ ಸಮಸ್ಯೆಗಳು ದೂರವಾಗಲಿ ಎಂದು ಸರ್ಕಾರ ಡಿಜಿಟಲೀಕರಣವನ್ನು ಜಾರಿಗೆ ತಂದಿದ್ದು, ನಿಮ್ಮ ಜಮೀನು ಪತ್ರಕ್ಕೆ RTC ಲಿಂಕ್ ಮಾಡಿಸಬೇಕು. ಹಳ್ಳಿಯ ಜನರು ಕೂಡ ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಳ್ಳಿಯ ಪ್ರತಿ ಮನೆಗಳಿಗೆ ತೆರಳಿ ಈ ಒಂದು ಕೆಲಸವನ್ನು ರೈತರಿಂದ ಮಾಡಿಸುತ್ತಿದ್ದಾರೆ. ಆಧಾರ್ ಲಿಂಕ್ ಮಾಡಿಸಿ, ಇಕೆವೈಸಿಯನ್ನು ಕೂಡ ಮಾಡಿಸುತ್ತಿದ್ದಾರೆ. ಈ ಕೆಲಸಗಳನ್ನು ಎಲ್ಲರೂ ಮಾಡಿದರೆ, ಡೇಟಾ ಬೇಸ್ ನಲ್ಲಿ ಎಲ್ಲರ ಆಸ್ತಿ ವಿವರಗಳು ಸೇರುತ್ತಾ ಹೋಗುತ್ತದೆ.
ಬೇಕಾಗುವ ದಾಖಲೆಗಳು
*ಆಸ್ತಿ ದಾಖಲೆ
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ರಿಜಿಸ್ಟ್ರೇಷನ್ ಕಾಪಿ
*ಮುನ್ಸಿಪಾಲ್ ತೆರಿಗೆ ಕಟ್ಟಿರುವ ಬಿಲ್
*NOC
*ಮುದ್ರಾಂಕ ಮತ್ತು ರಿಜಿಸ್ಟ್ರೇಷನ್ ಶುಲ್ಕ ಪಾವತಿ ಮಾಡಿರುವ ರಿಸಿಪ್ಟ್
A new order from the government for those who have their own property, site, house, land