ಇನ್ನು ಮುಂದೆಯೂ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸವನ್ನು ತಪ್ಪದೇ ಮಾಡಿ

Story Highlights

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಇನ್ನು ಕೂಡ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು

ರಾಜ್ಯದ ಜನರಿಗೆ ಹೆಚ್ಚಿನ ಅನುಕೂಲಗಳನ್ನು ಕೊಡಬೇಕು, ಅವರೆಲ್ಲರೂ ನೆಮ್ಮದಿಯಿಂದ ಜೀವನ ನಡೆಸಬೇಕು ಎಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಉಚಿತ ಯೋಜನೆಗಳನ್ನು ಜಾರಿಗೆ ತಂದಿತು.

ಅದು ಅನ್ನಭಾಗ್ಯ ಯೋಜನೆ (Annabhagya Scheme), ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಗೃಹಜ್ಯೋತಿ ಯೋಜನೆ (Gruha Jyothi), ಶಕ್ತಿ ಯೋಜನೆ (Shakti Scheme) ಮತ್ತು ಯುವನಿಧಿ ಯೋಜನೆ (Yuvanidhi) . ಈ ಯೋಜನೆಗಳ ಮೂಲಕ ಸರ್ಕಾರವು ಜನರಿಗೆ ಅರ್ಥಿಕವಾಗಿಯೂ ಸಹಾಯ ಮಾಡುತ್ತಿದೆ..

ರೇಷನ್ ಕಾರ್ಡ್‌ಗೆ ಹೊಸ ಸದಸ್ಯರ ಹೆಸರು ಸೇರಿಸಲು ಅವಕಾಶ! ಆನ್ಲೈನ್ ಸುಲಭ ಪ್ರಕ್ರಿಯೆ ಇಲ್ಲಿದೆ

ಈ ಕೆಲಸ ತಪ್ಪದೇ ಮಾಡಿ

ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆಯ ಮುಖ್ಯಸ್ಥೆಯ ಖಾತೆಗೆ (Bank Account) ಪ್ರತಿ ತಿಂಗಳು 2000 ಬರುತ್ತಿದೆ, ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಇರುವ ಎಲ್ಲಾ ಸದಸ್ಯರಿಗೆ ಪ್ರತಿ ತಿಂಗಳು 170 ರೂಪಾಯಿ ಸಿಗುತ್ತಿದೆ. ಆದರೆ ರಾಜ್ಯದ ಎಲ್ಲಾ ಜನರಿಗೂ ಕೂಡ ಈ ಯೋಜನೆಯ ಹಣ ಸಿಗುತ್ತಿಲ್ಲ, ಕೆಲವರಿಗೆ ದಾಖಲೆ ಸರಿ ಇಲ್ಲದೇ ಅಥವಾ ಇನ್ನಿತರ ಕಾರಣಕ್ಕೆ ಈ ಯೋಜನೆಗಳ ಹಣ ಸಿಗುತ್ತಿಲ್ಲ. ಒಂದು ವೇಳೆ ನಿಮಗು ಹೀಗೆ ಆಗಿದ್ದರೆ ಈ ಒಂದು ಕೆಲಸವನ್ನು ನೀವು ಕಡ್ಡಾಯವಾಗಿ ಮಾಡಲೇಬೇಕಾಗಿದೆ.

ಕೊನೆಗೂ ಮೇ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ

Gruha Lakshmi Yojanaಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ!

ಹೌದು, ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಇನ್ನು ಕೂಡ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಎಂದು ಸರ್ಕಾರ ತಿಳಿಸಿದೆ.

ಹೌದು, 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಅಪ್ಡೇಟ್ (Aadhaar Update) ಮಾಡಿಸಬೇಕು ಎಂದು ಈಗಾಗಲೇ ಸರ್ಕಾರ ತಿಳಿಸಿತ್ತು, ಒಂದು ವೇಳೆ ನೀವಿನ್ನು ಈ ಕೆಲಸ ಮಾಡಿಸಿಲ್ಲ ಎಂದರೆ, ಈಗಲೇ ಮಾಡಿಸಿ. ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಜೂನ್ 14 ಕೊನೆಯ ದಿನಾಂಕ ಆಗಿದ್ದು, ಆಧಾರ್ ಅಪ್ಡೇಟ್ ಹೇಗೆ ಮಾಡಬಹುದು ಎಂದು ತಿಳಿಯೋಣ..

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದ್ಯೋ ಇಲ್ವೋ? ಈ ರೀತಿ ಸುಲಭವಾಗಿ DBT ಚೆಕ್ ಮಾಡಿಕೊಳ್ಳಿ

Aadhaar Cardಮೊಬೈಲ್ ನಲ್ಲೇ ಮಾಡಿ ಆಧಾರ್ ಅಪ್ಡೇಟ್

*ಮೊದಲಿಗೆ ನೀವು UIDAI ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ,
https://myaadhaar.uidai.gov.in/verifyAadhaar ಇದು ಅಧಿಕೃಫಾ ವೆಬ್ಸೈಟ್ ಆಗಿದೆ

*ಈಗ ಲಾಗಿನ್ ಮಾಡಬೇಕು, ಇದಕ್ಕಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ, ಬಳಿಕ ಓಟಿಪಿ ಪಡೆಯುವ ಆಪ್ಶನ್ ಸೆಲೆಕ್ಟ್ ಮಾಡಿ.

*ನಿಮ್ಮ ಫೋನ್ ಗೆ ಬರುವ ಓಟಿಪಿ ಅನ್ನು ಎಂಟರ್ ಮಾಡಿ ಆ ಮೂಲಕ Login ಮಾಡಿ

*ಬಳಿಕ ಡಾಕ್ಯುಮೆಂಟ್ ಅಪ್ಡೇಟ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಈಗ ನಿಮ್ಮ ಬಗ್ಗೆ ಇರುವ ಎಲ್ಲಾ ಮಾಹಿತಿಗಳು ಸರಿಯಾಗಿದೆಯಾ ಎಂದು ಚೆಕ್ ಮಾಡಿ, ನಿಮ್ಮ ಹೆಸರು, ಅಡ್ರೆಸ್, ಡೇಟ್ ಆಫ್ ಬರ್ತ್ ಎಲ್ಲವನ್ನು ವೆರಿಫೈ ಮಾಡಿ. ಎಲ್ಲವೂ ಸರಿ ಇದ್ದರೆ I verify above details are correct ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

*ನಂತರ Next ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

*ಇದಾದ ಬಳಿಕ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಇಲ್ಲಿಗೆ ಆಧಾರ್ ಅಪ್ಡೇಟ್ ಪ್ರಕ್ರಿಯೆ ಮುಗಿದಿದೆ ಎಂದು ಅರ್ಥ.

ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಅವಕಾಶ! ಆದ್ರೆ ಈ ದಾಖಲೆ ಇರಬೇಕಷ್ಟೆ

ಆಧಾರ್ ಅಪ್ಡೇಟ್ ಗೆ ಅಗತ್ಯವಿರುವ ದಾಖಲೆಗಳು

*ಆಧಾರ್ ಕಾರ್ಡ್
*ಫೋನ್ ನಂಬರ್
*ಪ್ಯಾನ್ ಕಾರ್ಡ್ / LPG Cylinder Bill
*ಐಡೆಂಟಿಟಿ ಪ್ರೂಫ್ ಅಥವಾ ರೇಷನ್ ಕಾರ್ಡ್

do this to get money for Gruha Lakshmi Yojana Without Fail from now on

Related Stories