ಕೊನೆಗೂ ಎಲ್ಲಾ 3 ತಿಂಗಳ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಖಾತೆಗೆ ಜಮಾ!
ಮೂರು ತಿಂಗಳ ನಿರೀಕ್ಷೆಯ ನಂತರ, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಎಲ್ಲಾ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಮುಂದಾಗಿದೆ. ಆದರೆ ಮುಂದಿನ ತಿಂಗಳಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ.
- ಶೀಘ್ರವೇ ಎಲ್ಲಾ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ
- ಮುಂದಿನ ತಿಂಗಳಿಂದ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಣೆ
- ಇನ್ಮುಂದೆ ರಾಜ್ಯದಲ್ಲಿ 4 ಕೋಟಿ ಜನರಿಗೆ ಅಕ್ಕಿ ಸಿಗಲಿದೆ
ಬೆಂಗಳೂರು (Bengaluru) : ಅನ್ನಭಾಗ್ಯ ಯೋಜನೆಯ ಅಕ್ಕಿ (Annabhagya Yojane) ಹಣ ಬರಲಿಲ್ಲ ಅಂತ ಇಷ್ಟು ದಿನ ತಾಳ್ಮೆಯಿಂದ ಕಾಯ್ತಿದ್ರಿ ಅಲ್ಲವೇ? ಕೊನೆಗೂ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ.
ಕಳೆದ ಮೂರು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ (Anna Bhagya Scheme) ಅಕ್ಕಿ ಹಣ ಬಿಡುಗಡೆಯಾಗದೇ ಫಲಾನುಭವಿಗಳು ಮತ್ತು ವಿರೋಧ ಪಕ್ಷಗಳಿಂದ ಸರ್ಕಾರದ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಸರ್ಕಾರ ಬುದ್ಧಿವಂತಿಕೆ ಪ್ರದರ್ಶಿಸಿ ಎಲ್ಲಾ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಕರ್ನಾಟಕ ಮಹಿಳೆಯರಿಗೆ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ! ಶೇ.50 ಸಬ್ಸಿಡಿ
ಮುಂದಿನ ತಿಂಗಳಿಂದ ಅಕ್ಕಿ ಪೂರೈಕೆ ಗ್ಯಾರಂಟಿ
ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಮಾತನಾಡುತ್ತಾ, “ಈ ತಿಂಗಳ ಹಣದ ಜೊತೆಗೆ 10 ಕೆಜಿ ಅಕ್ಕಿ ಕೂಡ ಲಭ್ಯವಾಗಲಿದೆ. ಮುಂದಿನ ತಿಂಗಳಿಂದ ನಿರಂತರವಾಗಿ ಅಕ್ಕಿಯನ್ನು ವಿತರಿಸುತ್ತೇವೆ. ರಾಜ್ಯ ಸರ್ಕಾರಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ,” ಎಂದರು.
ಅಕ್ಕಿ ಕೊಡೋಕ್ಕೆ ಮುಂದಾದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಅಕ್ಕಿ ಕೊಡೋದಕ್ಕೆ ಮುಂದಾಗಿದೆ, ಅದಕ್ಕಾಗಿಯೇ ಬಾಕಿ ಹಣ ನೀಡಿ ಸಮಸ್ಯೆ ನಿವಾರಿಸಲಾಗಿದೆ. ಆದರೆ ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಕ್ಕಿ ವಿತರಣೆ ಮುಂದಾಗಿದ್ದಾರೆ. ರಾಜ್ಯಕ್ಕೆ ಪ್ರತೀ ತಿಂಗಳು 2.10 ಲಕ್ಷ ಮಟ್ರಿಕ್ ಟನ್ ಅಕ್ಕಿಯ ಅಗತ್ಯವಿದ್ದು, ಈಗಾಗಲೇ ಹಣ ನೀಡಲಾಗಿದೆ. ಸುಮಾರು 4 ಕೋಟಿ ಜನರಿಗೆ ಇದರ ಲಾಭ ಸಿಗಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರದಿಂದ ಕಡಿಮೆ ಬೆಲೆಗೆ ಸೈಟ್ ಖರೀದಿಸುವ ಅವಕಾಶ! ಅರ್ಜಿ ಆಹ್ವಾನ
ಸರ್ಕಾರದ ತೀರ್ಮಾನಕ್ಕೆ ಜನರಿಂದ ಸ್ವಾಗತ
ಹಣದ ಬಿಡುಗಡೆ ಮತ್ತು ಮುಂದಿನ ತಿಂಗಳಿಂದ ಅಕ್ಕಿ ಪೂರೈಕೆಯ ಘೋಷಣೆ ಫಲಾನುಭವಿಗಳಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಸರ್ಕಾರದ ತೀರ್ಮಾನವನ್ನು ಜನರೂ ಸಹ ಸ್ವಾಗತಿಸಿದ್ದಾರೆ
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಪಂಚಾಯಿತಿ ಮೂಲಕ ವಿತರಣೆ, ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸುಳಿವು
Anna Bhagya Funds Credited, Rice from Next Month
Our Whatsapp Channel is Live Now 👇