Bangalore NewsKarnataka News

ಗ್ರಾಮ ಪಂಚಾಯ್ತಿ ಸೈಟ್‌, ಆಸ್ತಿಗಳಿಗೆ ‘ಬಿ’ ಖಾತಾ ಕಡ್ಡಾಯ! ಹೊಸ ತಿದ್ದುಪಡಿ

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ಅನಿವಾರ್ಯ. ಸರ್ಕಾರ ಹೊಸ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವ ಮೂಲಕ ಸಾವಿರಾರು ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ವೇದಿಕೆ ಸಿದ್ಧಪಡಿಸಿದೆ.

  • ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸೈಟ್‌ಗಳಿಗೆ ಬಿ-ಖಾತಾ ಕಡ್ಡಾಯ
  • ಹೊಸ ಮಸೂದೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ
  • ತೆರಿಗೆ ಸಂಗ್ರಹ ಹೆಚ್ಚಿಸಲು ಸರ್ಕಾರದ ಮಹತ್ವದ ಹೆಜ್ಜೆ

ಬೆಂಗಳೂರು (Bengaluru): ಈಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ (Gram Panchayat) ಸೈಟ್‌ಗಳಿಗೆ (Site) ಅಥವಾ ಕಟ್ಟಡಗಳಿಗೆ ‘ಬಿ-ಖಾತಾ’ (B-Khata) ಕಡ್ಡಾಯವಾಗಲಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ (Karnataka Government) ಮಹತ್ವದ ತೀರ್ಮಾನ ಕೈಗೊಂಡಿದ್ದು, ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಧಿಕೃತ ಆಸ್ತಿಗಳನ್ನು ತೆರಿಗೆ ಚೌಕಟ್ಟಿಗೆ ತರಲು ಹೊಸ ಕಾಯ್ದೆ ತರಲು ಮುಂದಾಗಿದೆ.

ಈ ಸಂಬಂಧ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ (ತಿದ್ದುಪಡಿ) ವಿಧೇಯಕ – 2025’ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ತಿದ್ದುಪಡಿಯೊಂದಿಗೆ ಗ್ರಾಮ ಪಂಚಾಯಿತಿಗಳಿಗೆ ಸಾವಿರಾರು ಕೋಟಿ ತೆರಿಗೆ ಸಂಗ್ರಹ ಸಾಧ್ಯತೆ ಇದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಲ್ಲಿ ಗೊಂದಲ, ಲೆಕ್ಕಾಚಾರವೇ ಅದಲು-ಬದಲು!

ಬಿಬಿಎಂಪಿ (BBMP) ವ್ಯಾಪ್ತಿಯಂತೆ ಗ್ರಾಮೀಣ ಪ್ರದೇಶಗಳಲ್ಲೂ ಅನಧಿಕೃತ ಆಸ್ತಿಗಳಿಗೆ (Property) ತೆರಿಗೆ ವಿಧಿಸಲು ಸರ್ಕಾರ ಈ ಹೊಸ ನಿಯಮ ಜಾರಿಗೆ ತರುತ್ತಿದೆ.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ರಾಜ್ಯದ 1.40 ಕೋಟಿ ಆಸ್ತಿಗಳ ಪೈಕಿ ಕೇವಲ 40 ಲಕ್ಷ ಆಸ್ತಿಗಳು ‘ಇ-ಸ್ವತ್ತು’ (E-Swathu) ತಂತ್ರಾಂಶದಲ್ಲಿ ನೋಂದಣಿ ಹೊಂದಿವೆ. ಇನ್ನು 96 ಲಕ್ಷ ಆಸ್ತಿಗಳು ಯಾವುದೇ ಪ್ರಕಾರದ ದಾಖಲೆ ಇಲ್ಲದೆ ಬಳಕೆಯಲ್ಲಿವೆ. ಇವುಗಳನ್ನು ‘ಬಿ-ಖಾತಾ’ದಲ್ಲಿ ಸೇರಿಸುವ ಮೂಲಕ ಸರ್ಕಾರಕ್ಕೆ ದೊಡ್ಡ ಆದಾಯ ತರಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಉಚಿತ ಮನೆ ಯೋಜನೆ, ಬಡವರಿಗೆ ಸ್ವಂತ ಮನೆ ಭಾಗ್ಯ! ಅರ್ಜಿ ಹಾಕಿ

Gram Panchayat

ಈ ಮಸೂದೆ ಅನುಷ್ಠಾನದಿಂದ ಸರ್ಕಾರಕ್ಕೆ ಮಾತ್ರವಲ್ಲ, ಸಾರ್ವಜನಿಕರಿಗೆ ಸಹ ಸ್ವತ್ತಿನ ಬಗ್ಗೆ ಸರಿಯಾದ ದಾಖಲೆಗಳು ಲಭ್ಯವಾಗಲಿವೆ. ಬಿಬಿಎಂಪಿ ಅನಧಿಕೃತ ಬಡಾವಣೆಗಳಿಗೆ ತೆರಿಗೆ ವಿಧಿಸಿರುವಂತೆ, ಗ್ರಾಮೀಣ ಪ್ರದೇಶಗಳಲ್ಲೂ ಇದೇ ಮಾದರಿಯ ಕ್ರಮ ಜಾರಿಯಾಗಲಿದೆ. ಈ ಮೂಲಕ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿ ಆದಾಯ ಸೃಷ್ಟಿಯಾಗಲಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗಲಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ 16ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂದಿದೆ! ಚೆಕ್ ಮಾಡಿದ್ರಾ

ಇನ್ನೊಂದು ಪ್ರಮುಖ ವಿಷಯವೆಂದರೆ, ಇ-ಖಾತಾ (E-Khata) ಸೇವೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಬಿಎಂಪಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

Property Registration

ಇದರಡಿ, ಖಾತೆ ನೋಂದಣಿ ಮಾಡಿದವರಿಗೆ ಪ್ರತಿ ಖಾತೆಗೆ 45 ರೂ. ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ. ಮೊಬೈಲ್ ಸಂಖ್ಯೆಯ ಮೂಲಕ ಆಧಾರ್ ಕಾರ್ಡ್ (Aadhaar Card) ವಿವರಗಳನ್ನು ಬಳಸಿಕೊಂಡು ಈ ಸೇವೆ ಪಡೆಯಬಹುದು.

ಇದನ್ನೂ ಓದಿ: ಕರ್ನಾಟಕ ಖಾಸಗಿ ಶಾಲೆಗಳಲ್ಲಿ RTE ಅಡಿ ಮಕ್ಕಳಿಗೆ ಉಚಿತ ಶಿಕ್ಷಣ! ಅರ್ಜಿ ಪ್ರಕ್ರಿಯೆ

ಸಾಮಾನ್ಯ ನಾಗರಿಕರಿಗೆ ಅನಧಿಕೃತ ಆಸ್ತಿಗಳ ಬಗ್ಗೆ ಸ್ಪಷ್ಟತೆ ತರುವ ಹಾಗೂ ತೆರಿಗೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಮಸೂದೆ ನಿರ್ಣಾಯಕ ಹೆಜ್ಜೆಯಾಗಿದೆ.

B-Khata Mandatory for Village Gram Panchayat Properties

English Summary

Our Whatsapp Channel is Live Now 👇

Whatsapp Channel

Related Stories