ಗೃಹಲಕ್ಷ್ಮಿ ಯೋಜನೆಯಲ್ಲಿ ಗೊಂದಲ, ಲೆಕ್ಕಾಚಾರವೇ ಅದಲು-ಬದಲು!
Gruha Lakshmi Scheme : ಗೃಹಲಕ್ಷ್ಮಿ ಯೋಜನೆಡಿ ಸಹಾಯ ನಿರೀಕ್ಷೆಯಲ್ಲಿರುವ ಮಹಿಳೆಯರು ಹಣವನ್ನು ಪಡೆಯಲು ಬ್ಯಾಂಕ್ ಅಲೆದಾಟ. ಸರ್ಕಾರದ ನಿರ್ಧಾರ, ತಾಂತ್ರಿಕ ಸಮಸ್ಯೆಗಳ ನಡುವೆ ಗೃಹಿಣಿಯರ ಸಂಕಷ್ಟ ಹೆಚ್ಚಳ.
- ಮೂರು ತಿಂಗಳ ಗೃಹಲಕ್ಷ್ಮಿ ಹಣ ಬಾಕಿ, ಮಹಿಳೆಯರ ನಿರೀಕ್ಷೆ ಹೆಚ್ಚಳ
- ಬ್ಯಾಂಕ್‌ಗಳಿಗೆ ಮಹಿಳೆಯರ ಪ್ರತಿನಿತ್ಯ ಅಲೆದಾಟ
- ಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಜಕೀಯ ವಿವಾದಕ್ಕೆ ಕಾರಣ
ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರ ಪರದಾಟ
ಬೆಂಗಳೂರು (Bengaluru): ಬಡ ಮಹಿಳೆಯರು ಸರ್ಕಾರದ ಗೃಹಲಕ್ಷ್ಮಿ (Gruha Lakshmi Scheme) ಯೋಜನೆಯಡಿ ತಲಾ ₹2000 ಪಡೆಯುತ್ತಿದ್ದಾರೆ. ಆದರೆ, ಜನವರಿ, ಫೆಬ್ರವರಿ, ಮಾರ್ಚ್ ತಿಂಗಳ ಹಣ ಅವರ ಖಾತೆಗೆ (Bank Account) ಕ್ರೆಡಿಟ್ ಆಗದೇ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಯೋಜನೆಯಡಿ ಹಾಸನ ಜಿಲ್ಲೆಯಲ್ಲಿ 4.69 ಲಕ್ಷ ಜನ ಗೃಹಲಕ್ಷ್ಮಿಯರಲ್ಲಿ 4.40 ಲಕ್ಷ ಮಂದಿ ಅರ್ಹರಾಗಿದ್ದಾರೆ. ಆದರೂ ಕೆಲವು ತಾಂತ್ರಿಕ ಸಮಸ್ಯೆ, ಆಧಾರ್ (Aadhaar) ತಿದ್ದುಪಡಿ, ತೆರಿಗೆ ಪಾವತಿಯಂತಹ ಕಾರಣಗಳಿಂದ ಲಕ್ಷಾಂತರ ಮಹಿಳೆಯರು ಯೋಜನೆಯ ಪ್ರಯೋಜನದಿಂದ ವಂಚಿತರಾಗಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ 16ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂದಿದೆ! ಚೆಕ್ ಮಾಡಿದ್ರಾ
ಲೆಕ್ಕಾಚಾರವೇ ಅದಲು-ಬದಲು
ಒಂದೆಡೆ ಸರ್ಕಾರ ಮೂರು ತಿಂಗಳ ಹಣ ಮಾತ್ರ ಬಾಕಿ ಇದೆ ಎನ್ನುತ್ತಿದ್ದರೆ, ಇತ್ತ ಮಹಿಳೆಯರು ಐದು ತಿಂಗಳಿಂದ ಹಣವೇ ಬಂದಿಲ್ಲ ಎಂದು ದೂರುತ್ತಿದ್ದಾರೆ. ಕೆಲವು ಫಲಾನುಭವಿಗಳಿಗೆ ಬಂದಿದ್ದರೂ ಅನೇಕರಿಗೆ ಹಣವೇ ಜಮೆ ಆಗಿಲ್ಲ. ಈಗ ಸರ್ಕಾರ ಕೇವಲ ಮೂರು ತಿಂಗಳು ಬಾಕಿ ಎನ್ನುತ್ತಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರಿಗೆ ಮೂರು ತಿಂಗಳು, ಕೆಲವರಿಗೆ ನಾಲ್ಕು ತಿಂಗಳು ಹಾಗೂ ಅನೇಕರಿಗೆ ಐದು ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಇರುವುದಾಗಿ ಮಹಿಳೆಯರು ಹೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಖಾಸಗಿ ಶಾಲೆಗಳಲ್ಲಿ RTE ಅಡಿ ಮಕ್ಕಳಿಗೆ ಉಚಿತ ಶಿಕ್ಷಣ! ಅರ್ಜಿ ಪ್ರಕ್ರಿಯೆ
ಬ್ಯಾಂಕ್ ಅಲೆದಾಟ, ಹಣವಿಲ್ಲದೆ ಹೈರಾಣ
ಯೋಜನೆಯ ಹಣ ನೇರವಾಗಿ ಬ್ಯಾಂಕ್ ಖಾತೆಗೆ (Bank Account) ಜಮೆಯಾಗುವುದರಿಂದ, ಹಣ ಬಂದಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಮಹಿಳೆಯರು ಪ್ರತಿದಿನ ಬ್ಯಾಂಕ್‌ಗಳಿಗೆ ಹೋಗುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿ “ಹಣ ಜಮೆಯಾದರೆ ಮೆಸೇಜ್ ಬರುತ್ತದೆ” ಎಂದು ಹೇಳಿದರೂ, ಹಣದ ನಿರೀಕ್ಷೆಯಲ್ಲಿ ಮಹಿಳೆಯರು ನಿತ್ಯವೂ ಬ್ಯಾಂಕ್‌ಗಳ ಸುತ್ತಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಇಂತವರ ರೇಷನ್ ಕಾರ್ಡ್ ಕ್ಯಾನ್ಸಲ್, ಸರ್ಕಾರದ ಯಾವುದೇ ಯೋಜನೆ ಸಿಗಲ್ಲ!
ಅನೇಕರು ಈ ಹಣವನ್ನು ಕುಟುಂಬದ ಅಗತ್ಯಗಳಿಗೆ ಬಳಸುತ್ತಿದ್ದರು, ಕೆಲವು ಮಹಿಳೆಯರು ಸಂಘ-ಸಂಸ್ಥೆಗಳ ಸಾಲ ತೀರಿಸಲು ಗೃಹಲಕ್ಷ್ಮಿ ಹಣವನ್ನು (Gruha Lakshmi Scheme) ನೆಚ್ಚಿಕೊಂಡಿದ್ದರು. ಆದರೆ ಮೂರು ತಿಂಗಳಿಂದ ಹಣ ಬಿಡುಗಡೆಯಾಗದೇ, ಈ ಮಹಿಳೆಯರು ನಿರಾಶರಾಗಿದ್ದಾರೆ.
ಗ್ಯಾರಂಟಿ ಯೋಜನೆಗಳ ರಾಜಕೀಯ ಬಿಸಿ
ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಇತರ ಗ್ಯಾರಂಟಿ ಯೋಜನೆಗಳ ಹಣ ತಲುಪದಿರುವುದು ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಬಿಜೆಪಿ ಪ್ರಶ್ನಿಸುತ್ತಿದ್ದು, ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ.
ಈ ಬಗ್ಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಪ್ರತಿಕ್ರಿಯಿಸಿ, “ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿತ್ವವನ್ನು ನೋಡಿ ಆತಂಕಗೊಂಡಿದ್ದಾರೆ, ಸರ್ಕಾರದ ಮೇಲೆ ತಪ್ಪು ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಇನ್ನೊಂದು ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ
ತಾಂತ್ರಿಕ ತೊಡಕುಗಳೇ ಕಾರಣ?
ಅಧಿಕಾರಿಗಳ ಪ್ರಕಾರ, ಡಿಸೆಂಬರ್ 2024ರ ವರೆಗೆ ಹಣ ಜಮೆಯಾಗಿದ್ದು, ಜನವರಿಯಿಂದ ಹಣ ವಿಳಂಬವಾಗಲು ತಾಂತ್ರಿಕ ತೊಡಕುಗಳೇ ಪ್ರಮುಖ ಕಾರಣವಾಗಿದೆ. “ಯೋಜನೆ ಶೇ.93 ರಷ್ಟು ಯಶಸ್ವಿಯಾಗಿದೆ, ಆದರೆ ಕೆಲವು ಬಾಕಿ ಪಾವತಿ ಸಮಸ್ಯೆಗಳಿವೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.
Delay in Gruhalakshmi Payments Leaves Women Struggling
Our Whatsapp Channel is Live Now 👇