ಒಂದೇ ಮನೆಯಲ್ಲಿ ಎರಡೆರಡು ರೇಷನ್ ಕಾರ್ಡ್ ಇದ್ದರೆ ರದ್ದು! ಸರ್ಕಾರ ಕಟ್ಟುನಿಟ್ಟು ಕ್ರಮ

ಒಂದೇ ಮನೆಗೆ ಸೇರಿದ್ದರೂ ವಿಭಿನ್ನ ಹೆಸರುಗಳಲ್ಲಿ ಎರಡು ರೇಷನ್ ಕಾರ್ಡ್‌ ಪಡೆದವರ ಮೇಲೆ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದ್ದು, ಎರಡೂ ಕಾರ್ಡ್‌ಗಳನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ.

  • ಒಂದೇ ಮನೆಗೆ ಎರಡು ರೇಷನ್ ಕಾರ್ಡ್‌ ಇದ್ದರೆ ರದ್ದು
  • ಮೆಡಿಕಲ್ ಎಮರ್ಜೆನ್ಸಿಗೆ ಮಾತ್ರ ಹೊಸ ಅರ್ಜಿ ಅವಕಾಶ
  • ಸೂಕ್ತ ದಾಖಲೆ ಇಲ್ಲದವರ ಕಾರ್ಡ್‌ ರದ್ದು ಪಡಿಸಲಾಗುವುದು

ಬೆಂಗಳೂರು (Bengaluru): ಒಂದೇ ಮನೆಗೆ ಸೇರಿದವರು ವಿಭಿನ್ನ ಹೆಸರುಗಳಲ್ಲಿ ಎರಡು ರೇಷನ್ ಕಾರ್ಡ್ (Karnataka Ration card) ಹೊಂದಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ, ಸರ್ಕಾರ ಇದೀಗ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈಗಾಗಲೇ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ (Ahara Ilake) ಈ ಕುರಿತು ಪರಿಶೀಲನೆ ಆರಂಭಿಸಿದೆ.

ಆರ್ಥಿಕವಾಗಿ ಸದೃಢರಾದರೂ ಸಹ, ಪಡಿತರ ಚೀಟಿಗಳನ್ನು ಪಡೆದು ಸಬ್ಸಿಡಿ ಅಕ್ಕಿಯನ್ನು ಖಾಸಗಿ ಬಳಕೆ ಅಥವಾ ಮಾರುಕಟ್ಟೆಗೆ ಮಾರಾಟ ಮಾಡುತ್ತಿರುವ ಘಟನೆಗಳು ಕೂಡ ಸರ್ಕಾರದ ಗಮನ ಸೆಳೆದಿವೆ. ಈ ಹಿನ್ನಲೆಯಲ್ಲಿ, ನಿಜವಾದ ಫಲಾನುಭವಿಗಳಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಜಾಹಿರಾತು

ಇದನ್ನೂ ಓದಿ: ಬೆಂಗಳೂರು ಆಸ್ತಿ ಮಾಲೀಕರಿಗೆ ಜುಲೈ 1ರಿಂದ ಮನೆ ಬಾಗಿಲಿಗೆ ಇ-ಖಾತಾ ಸೌಲಭ್ಯ

ಇಂತಹ ದ್ವಿತೀಯ ಕಾರ್ಡ್‌ಗಳನ್ನು ಹೊಂದಿರುವವರು ತಾವಾಗಿಯೇ (voluntarily) ಕಾರ್ಡ್‌ ಅನ್ನು ಹಿಂತಿರುಗಿಸಬೇಕೆಂದು ಸರ್ಕಾರ ಹಿಂದೆಯೇ ಎಚ್ಚರಿಕೆ ನೀಡಿತ್ತು. ಆದರೆ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ದೊರಕದ ಕಾರಣ, ಈಗ ನೇರವಾಗಿ ಎರಡೂ ಕಾರ್ಡ್‌ಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇನ್ನು, ಹೊಸ ಪಡಿತರ ಚೀಟಿ (New Ration Card) ಪಡೆಯಲು ಸಾರ್ವಜನಿಕರಿಗೆ ಸಂಪೂರ್ಣ ಅವಕಾಶವಿಲ್ಲ. ಕೇವಲ ವೈದ್ಯಕೀಯ ತುರ್ತು ಪರಿಸ್ಥಿತಿಯ (Medical emergency) ವೇಳೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಜಾಹಿರಾತು

ಇದನ್ನೂ ಓದಿ: ಕರ್ನಾಟಕ ರೈತರಿಗೆ ಬಂಪರ್ ಸೌಲಭ್ಯ! ಹಣ್ಣು, ಹೂವು, ತರಕಾರಿ ತೋಟಗಳಿಗೆ ಸಹಾಯಧನ

BPL Ration Card

ಆರೋಗ್ಯ ಸಂಬಂಧಿತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಪಾಲ್ಗೊಳ್ಳಲು, ಈ ರೀತಿಯ ಆಧಾರಿತ ದಾಖಲೆ ಇರುವವರಿಗೆ ಮಾತ್ರ ಅರ್ಜಿ ಅವಕಾಶ ಒದಗಿಸಲಾಗಿದೆ.

ಸದ್ಯಕ್ಕೆ ಹೊಸ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಳೆಯ ಬಾಕಿ ಅರ್ಜಿಗಳ ಪರಿಶೀಲನೆಯ ನಂತರವೇ ಹೊಸ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂಬುದಾಗಿ ಆಹಾರ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಗೃಹ ಭಾಗ್ಯ ಯೋಜನೆ, ಅರ್ಹ ಬಡ ಫಲಾನುಭವಿಗಳಿಗೆ ಉಚಿತ ಮನೆ ಸವಲತ್ತು

ಅಲ್ಲದೆ, ಒಂದು ಮನೆಯಲ್ಲಿ ಅತ್ತೆ ಹೆಸರಿನಲ್ಲಿ ಒಂದು ಕಾರ್ಡ್, ಸೊಸೆ ಹೆಸರಿನಲ್ಲಿ ಮತ್ತೊಂದು, ಸೋದರರ ಹೆಸರಿನಲ್ಲಿ ಇನ್ನೊಂದು ಎಂಬಂತೆ ಕಾರ್ಡ್‌ಗಳನ್ನು ಪಡೆದು ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಅಕ್ರಮವಾಗಿ ಪಡೆಯುತ್ತಿರುವುದು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಪಡಿತರ ಚೀಟಿಯ (ration identity) ನಿಜವಾದ ಉದ್ದೇಶವನ್ನು ಖಂಡಿತವಾಗಿ ಕಾಪಾಡಬೇಕೆಂಬ ದೃಷ್ಟಿಕೋನದಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ಅರ್ಹ ಫಲಾನುಭವಿಗಳು ನಿಯಮಿತವಾಗಿ ಪಡಿತರ ಪಡೆಯಲು ಈ ಕ್ರಮ ನೆರವಾಗಲಿದೆ ಎಂಬ ನಂಬಿಕೆ ಸರ್ಕಾರದ್ದು.

Dual ration cards in one house, Both will be cancelled

ಜಾಹಿರಾತು

About Author:

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ…🔸ಇನ್ನಷ್ಟು ಓದಿ »

Related Stories