Bengaluru NewsKarnataka News

ಕರ್ನಾಟಕ ರೈತರಿಗೆ ಬಂಪರ್ ಸೌಲಭ್ಯ! ಹಣ್ಣು, ಹೂವು, ತರಕಾರಿ ತೋಟಗಳಿಗೆ ಸಹಾಯಧನ

2025-26ರ ತೋಟಗಾರಿಕೆ ಮಿಷನ್ ಯೋಜನೆಯಡಿ ಹಣ್ಣು, ಹೂವಿನ ತೋಟ ಸ್ಥಾಪನೆ ಸೇರಿದಂತೆ ಯಂತ್ರೋಪಕರಣಗಳ ಖರೀದಿವರೆಗೆ ರೈತರಿಗೆ ನೇರ ಸಹಾಯಧನ ಪಡೆಯಲು ಜೂನ್ 30ರೊಳಗೆ ಅರ್ಜಿ ಆಹ್ವಾನ.

Publisher: Kannada News Today (Digital Media)

  • ಹಣ್ಣು, ಹೂವು, ತರಕಾರಿ ತೋಟಗಳಿಗೆ ಸಹಾಯಧನ
  • ಯಾಂತ್ರೀಕರಣ, ನೀರು ಸಂಗ್ರಹಣೆ, ಕೊಯ್ಲೋತ್ತರ ಘಟಕಗಳಿಗೆ ಸಹಾಯ
  • ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 30, ಸಂಜೆ 5:30 ರೊಳಗೆ

ಬೆಂಗಳೂರು (Bengaluru): ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕೆ ಮಿಷನ್ (National Horticulture Mission) ಯೋಜನೆಯಡಿ ಈ ಬಾರಿ ಹೊಸ ನೆರವು ಘೋಷಣೆಯಾಗಿದೆ.

2025-26ನೇ ಸಾಲಿನಲ್ಲಿ ಬೀದರ್ ಜಿಲ್ಲೆಯಲ್ಲಿ ಯೋಜನೆಯ ಅನೇಕ ಘಟಕಗಳಿಗೆ ಸಹಾಯಧನ ಲಭ್ಯವಿದೆ ಎಂದು ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಚೀನ್ ಕೌಠ್ ತಿಳಿಸಿದ್ದಾರೆ.

ಕರ್ನಾಟಕ ರೈತರಿಗೆ ಬಂಪರ್ ಸೌಲಭ್ಯ! ಹಣ್ಣು, ಹೂವು, ತರಕಾರಿ ತೋಟಗಳಿಗೆ ಸಹಾಯಧನ

ಇದನ್ನೂ ಓದಿ: ಗೃಹ ಭಾಗ್ಯ ಯೋಜನೆ, ಅರ್ಹ ಬಡ ಫಲಾನುಭವಿಗಳಿಗೆ ಉಚಿತ ಮನೆ ಸವಲತ್ತು

ಈ ಯೋಜನೆಯಡಿ ಹಲವಾರು ಚಟುವಟಿಕೆಗಳಿಗೆ ನೇರ ಹಣಕಾಸು ನೆರವು (subsidy) ಲಭಿಸುತ್ತದೆ. ಹಣ್ಣು, ಹೂವು, ಸುಗಂಧ ದ್ರವ್ಯ ತೋಟಗಳ ಸ್ಥಾಪನೆ, ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆ, ಹಣ್ಣು ತೋಟ ಪುನಶ್ಚೇತನ, ನೀರು ಸಂಗ್ರಹಣೆ ಘಟಕ ನಿರ್ಮಾಣ, ಸಂರಕ್ಷಿತ ಬೇಸಾಯ (protected farming), ಕೃಷಿ ಯಾಂತ್ರೀಕರಣ (farm mechanization), ಕೊಯ್ಲೋತ್ತರ ನಿರ್ವಹಣೆ ಘಟಕ (post-harvest unit), ಹಾಗೂ ತಳ್ಳುವ ಗಾಡಿ ಘಟಕಗಳಿಗೂ ಸಹಾಯಧನ ಲಭ್ಯವಿದೆ.

ಇದಷ್ಟೇ ಅಲ್ಲದೆ, ಪಿಎಂ ಕೃಷಿ ಸಿಂಚಾಯಿ ಯೋಜನೆ (PMKSY), ತಾಳೆ ಬೆಳೆ ಯೋಜನೆ, ಖಾದ್ಯ ತೈಲ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY), ಯಾಂತ್ರಿಕರಣ ಉಪ ಅಭಿಯಾನ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯೂ ಸಹ ರೈತರಿಗೆ ಈ ವರ್ಷ ನೆರವಾಗಲಿವೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 21ನೇ ಕಂತು ಯಾವಾಗ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

Karnataka Farmer Scheme

ಅರ್ಹರಾಗಿರುವ ರೈತರು ತಮ್ಮ ಹೆಸರು ಪಹಣಿಯಲ್ಲಿ ಇದ್ದ ಜಮೀನಿಗೆ ಅರ್ಜಿ ಸಲ್ಲಿಸಬಹುದು. ಜಂಟಿ ಖಾತೆಯಿದ್ದರೆ ಇತರೆ ಖಾತೆದಾರರ ಒಪ್ಪಿಗೆ ಪತ್ರ ಅಗತ್ಯವಿದೆ.

ತಂದೆ ಅಥವಾ ತಾಯಿಯ ಹೆಸರಿನ ಜಮೀನಿಗೆ (Agriculture Land) ಅರ್ಜಿ ಸಲ್ಲಿಸಲು, ಮೃತರು ಎಂಬ ದೃಢೀಕರಣ ಹಾಗೂ ಕುಟುಂಬದ ಸದಸ್ಯರ ಒಪ್ಪಿಗೆಯೂ ಅಗತ್ಯವಿದೆ. ನೀರಿನ ಮೂಲವಿರಬೇಕು ಮತ್ತು ಇತ್ತೀಚಿನ ಗಣಕೀಕೃತ ಪಹಣಿ ಪ್ರಮಾಣಪತ್ರವೂ ಕಡ್ಡಾಯ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಕೃಷಿ ಭೂಮಿ ಯೋಜನೆ, ಭೂಮಿ ಖರೀದಿಗೆ ಸಾಲ ಸೌಲಭ್ಯ!

ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಜೂನ್ 30 ಸಂಜೆ 5:30 ರವರೆಗೆ ಮಾತ್ರ. ತಾಲ್ಲೂಕಿನ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ನೇರವಾಗಿ ಅಥವಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Horticulture Mission Scheme, Farmers Can Apply for Subsidy

English Summary

Our Whatsapp Channel is Live Now 👇

Whatsapp Channel

Related Stories