ಅನರ್ಹರ ಬಿಪಿಎಲ್ ಕಾರ್ಡ್ ಪತ್ತೆಕಾರ್ಯ ಶುರು, ಮುಲಾಜಿಲ್ಲದೆ ಕ್ಯಾನ್ಸಲ್! ಖಡಕ್ ವಾರ್ನಿಂಗ್
BPL Ration Card : ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ ಕಾರ್ಯ ಮುಂದುವರಿದಿದ್ದು, ಸರ್ಕಾರದಿಂದ ದಂಡದ ಎಚ್ಚರಿಕೆ, ಅನರ್ಹ ಬಿಪಿಎಲ್ ಕಾರ್ಡ್ ವಾಪಸ್ ಮಾಡೋ ಸಮಯ ಬಂದಿದೆ!
- ಅನರ್ಹರ ಬಿಪಿಎಲ್ (BPL) ಕಾರ್ಡ್ ಪತ್ತೆಕಾರ್ಯ
- ಪಂಚಾಯಿತಿ ಮಟ್ಟದಲ್ಲಿ ಪರಿಶೀಲನೆ
- ತಪ್ಪಿತಸ್ಥರಿಗೆ ದಂಡ ವಿಧಿಸಲು ಸರ್ಕಾರ ನಿರ್ಧಾರ
ಬೆಂಗಳೂರು (Bengaluru): ರಾಜ್ಯ ಸರ್ಕಾರಕ್ಕೆ ಈಗ ಅನಧಿಕೃತ ಬಿಪಿಎಲ್ (BPL Ration Card) ಕಾರ್ಡ್‌ಗಳ ತಲೆನೋವು ತೀವ್ರವಾಗಿ ಕಾಡುತ್ತಿದೆ. ಪಂಚ ಗ್ಯಾರಂಟಿ (Guarantee) ಯೋಜನೆಗಳ ಜತೆ ಬಿಪಿಎಲ್ ಅಕ್ರಮ ಸಮಸ್ಯೆಯೂ ಸರ್ಕಾರಕ್ಕೆ ಭಾರವಾದ ಹೊರೆ ತಂದೊಡ್ಡಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶೇ.70% ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳಿವೆ. ಆದರೆ, ಅವುಗಳಲ್ಲಿ ಹಲವು ಅನರ್ಹ ಕುಟುಂಬಗಳಿಗೂ ನೀಡಲಾಗಿದೆ ಎಂಬ ಆತಂಕ ಸರ್ಕಾರದಲ್ಲಿದೆ.
ಪಂಚಾಯಿತಿ ಮಟ್ಟದಲ್ಲಿ (Panchayat Level) ಆಧಾರಿತ ತಪಾಸಣೆ ಪ್ರಾರಂಭವಾಗಿದ್ದು, ಅನರ್ಹ ಪಡಿತರ ಚೀಟಿಗಳನ್ನು (Ration Card) ವಾಪಸು ಪಡೆಯುವ ಕಾರ್ಯ ಚುರುಕಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ? ದಿನಾಂಕ ನಿಗದಿ ಮಾಡಿ; ನಿಖಿಲ್ ಕುಮಾರಸ್ವಾಮಿ
“ಯೋಗ್ಯರಿಗೆ ಗ್ಯಾರಂಟಿ ಸೌಲಭ್ಯಗಳು ಸಿಗಬೇಕು, ಆದರೆ ಅವ್ಯವಹಾರ ತಡೆಯಲೇಬೇಕು” ಎಂಬ ದೃಷ್ಟಿಕೋನದಿಂದ ಸರ್ಕಾರ ಹೊಸ ಕಾರ್ಯಯೋಜನೆಗೆ ಮುಂದಾಗಿದೆ.
“ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರು ತಮ್ಮ ಪಡಿತರ ಚೀಟಿಯನ್ನು (BPL Card) ತಕ್ಷಣ ವಾಪಸು ಮಾಡಬೇಕು. Panchayat ಮಟ್ಟದಲ್ಲಿ ವಿಶೇಷ ತಂಡದ ಮೂಲಕ ಪರಿಶೀಲನೆ ನಡೆಯಲಿದೆ. ತಪ್ಪಿತಸ್ಥರ ವಿರುದ್ಧ ದಂಡ (Penalty) ವಿಧಿಸಲಾಗುವುದು” ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ (K.H. Muniyappa) ಎಚ್ಚರಿಸಿದ್ದಾರೆ.
ಇತ್ತ ಅನಧಿಕೃತ ಕಾರ್ಡ್ ಹೊಂದಿರುವ ಜನರು ಇನ್ನೂ ಹಿಂದಿರುಗಿಸಲು ಸಿದ್ಧರಾಗಿಲ್ಲ. “ನಾವು ಎಷ್ಟೋ ವರ್ಷಗಳಿಂದ ಈ ಕಾರ್ಡ್ ಹೊಂದಿದ್ದೇವೆ, ಈಗ ಏಕಾಏಕಿ ಏಕೆ ವಾಪಸ್ ಮಾಡಬೇಕು?” ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಆದರೆ ಸರ್ಕಾರ ಈ ವಿಚಾರದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ಬೆಂಗಳೂರು ಪಬ್ಲಿಕ್ ಶಾಲೆಗಳಲ್ಲಿ ಮಕ್ಕಳಿಗೆ ಫ್ರೀ ಅಡ್ಮಿಷನ್! ಅರ್ಜಿ ಆಹ್ವಾನ
ಸದ್ಯ, ಬಿಪಿಎಲ್ ಕಾರ್ಡ್‌ಗಳ ಸಂಪೂರ್ಣ ಪರಿಶೀಲನೆ ಮಾಡಿ, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಿ, ವಾಸ್ತವ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಸೌಲಭ್ಯ ನೀಡಬೇಕು ಎಂಬ ಗುರಿಯೊಂದಿಗೆ ಸರ್ಕಾರ ಮುನ್ನಡೆಯುತ್ತಿದೆ. ನೋಡೋಣ, ಈ ಕ್ರಮ ಎಷ್ಟು ಪರಿಣಾಮಕಾರಿಯಾಗುತ್ತದೆಯೆಂದು!
Government to crack down on fake BPL card Holders
Our Whatsapp Channel is Live Now 👇