ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ? ದಿನಾಂಕ ನಿಗದಿ ಮಾಡಿ; ನಿಖಿಲ್ ಕುಮಾರಸ್ವಾಮಿ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ದಿನಾಂಕ ನಿಗದಿ ಮಾಡಬೇಕೆಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ

  • ಕಾಂಗ್ರೆಸ್ ಗ್ಯಾರಂಟಿಗಳಿಗೆ ಹಾಲಿ ಸರ್ಕಾರವೇ ಅಸಮಾಧಾನ!
  • ಬಡವರ ಬಿಪಿಎಲ್ (BPL) ಕಾರ್ಡ್ ರದ್ದು!
  • ಗೃಹಲಕ್ಷ್ಮಿ, ಯುವನಿಧಿ ಫಲಾನುಭವಿಗಳದ್ದು ಅತಂತ್ರ ಸ್ಥಿತಿ!

ಬೆಂಗಳೂರು (Bengaluru): ಕಾಂಗ್ರೆಸ್ (Congress) ಸರ್ಕಾರದ ಪಂಚ ಗ್ಯಾರಂಟಿ (Guarantee) ಯೋಜನೆಗಳ ಮೇಲೆ ಇದೀಗ ಅವರದೇ ಸರ್ಕಾರದ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು, ಗೃಹಲಕ್ಷ್ಮಿ (Gruha Lakshmi Scheme) ಹಣ ಜಮಾ ದಿನಾಂಕ ನಿಗದಿ ಮಾಡಬೇಕು ಎಂದು ಜೆಡಿಎಸ್ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ಈ ಗ್ಯಾರಂಟಿಗಳಿಗೆ ಆಯಸ್ಸು ಕಡಿಮೆಯಾಗಿದೆ. ಗೃಹ ಸಚಿವ ಪರಮೇಶ್ವರ (G Parameshwara) ಅವರೇ ಇದನ್ನು ಅಸಲಿ ಗ್ಯಾರಂಟಿ ಅಲ್ಲ ಎಂದು ಒಪ್ಪಿಕೊಂಡಿದ್ದಾರೆ!” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಆಸ್ತಿ ನೋಂದಣಿ ರೂಲ್ಸ್ ಬದಲಾವಣೆ! ಭೂಮಿ, ಮನೆ ರಿಜಿಸ್ಟ್ರೇಷನ್‌ ಹೊಸ ನಿಯಮ

ಈಗಾಗಲೇ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು (BPL Ration Card) ರದ್ದುಪಡಿಸಿ ಬಡವರ ಸಹಾಯವನ್ನು ಕಡಿತಗೊಳಿಸಲಾಗಿದೆ. ಜೊತೆಗೆ, ಮೂರು-ನಾಲ್ಕು ತಿಂಗಳಿಗೊಮ್ಮೆ ಹಣ ಜಮಾ ಮಾಡೋ ವ್ಯವಸ್ಥೆ ಫಲಾನುಭವಿಗಳಿಗೆ ನಿರಾಸೆಯಾಗಿದೆ.

Gruha Lakshmi Scheme

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ “ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳು ಹಣ ನೇರವಾಗಿ ಖಾತೆಗೆ ಜಮಾ ಆಗುತ್ತದೆ” ಎಂದು ಭರವಸೆ ನೀಡಿತ್ತು. ಆದರೆ ನಿಜವಾದ ಚಿತ್ರಣವೇ ಬೇರೆ! ಹಣಕಾಸು ತೊಡಕು, ತಾಂತ್ರಿಕ ಸಮಸ್ಯೆ ಎಂದು ನೆಪ ಹೇಳುತ್ತಾ ಹಣ ಬಿಡುಗಡೆ ದಿನಾಂಕ ಮುಂದಕ್ಕೆ ತಳ್ಳುತ್ತಿದ್ದಾರೆ”.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 28,608 ಕೋಟಿ ಹಣ ಬಿಡುಗಡೆ! ಇಲ್ಲಿದೆ ಪಕ್ಕಾ ಮಾಹಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 74 ಲಕ್ಷ ಕೋಟಿ ಗಾತ್ರದ ಬಜೆಟ್ ರೂಪಿಸುತ್ತಿದ್ದಾರೆ. ಆದರೂ ಫಲಾನುಭವಿಗಳು ಮೂರು-ನಾಲ್ಕು ತಿಂಗಳ ಕಾಲ ಕಾದುಕಾದು ಹಣಕ್ಕಾಗಿ ಕಂಗಾಲಾಗಬೇಕಾಗಿದೆ.

ಚುನಾವಣೆ ಹತ್ತಿರ ಬಂದಾಗ ಮಾತ್ರ ಹಣ ಜಮಾ ಮಾಡೋ “ಮ್ಯಾಜಿಕ್” ನಡೆಯುತ್ತೆ ಎಂಬುದು ಜನರ ಅನುಭವ. ಬೆಂಗಳೂರು (Bengaluru) ಸಿಲಿಕಾನ್ ಸಿಟಿಯಲ್ಲಿ (Silicon City) DBT (Direct Benefit Transfer) ವ್ಯವಸ್ಥೆ ಸರಿಯಾಗದಿದ್ದರೆ, ಬೇರೇನಾದರೂ ಸರಿ ಆಗುತ್ತಾ? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Nikhil Kumaraswamy questions government on Gruha Lakshmi Scheme

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories