ಬೆಂಗಳೂರು ಪಬ್ಲಿಕ್ ಶಾಲೆಗಳಲ್ಲಿ ಮಕ್ಕಳಿಗೆ ಫ್ರೀ ಅಡ್ಮಿಷನ್! ಅರ್ಜಿ ಆಹ್ವಾನ
ಬೆಂಗಳೂರು ಪೋಷಕರಿಗೆ ಗುಡ್ ನ್ಯೂಸ್! ಫ್ರೀ ಸಿಬಿಎಸ್‌ಇ ಶಾಲೆಗೆ ಅರ್ಜಿ ಆಹ್ವಾನ, ನರ್ಸರಿ (CBSE) ತರಗತಿಗೆ ಉಚಿತ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಿದೆ.
- ನೋಂದಣಿ ಆರಂಭ: 25 ಫೆಬ್ರವರಿ 2025
- ಮಕ್ಕಳ ಶಿಕ್ಷಣಕ್ಕೆ ಸಂಪೂರ್ಣ ಉಚಿತ ಪ್ರವೇಶ
- ಅರ್ಜಿ ಸಲ್ಲಿಸಲು ಕೊನೆಯ ದಿನ: 25 ಮಾರ್ಚ್ 2025
ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ (Education) ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ ಎಂಬ ಮಾತು ಎಲ್ಲರಿಗೂ ಗೊತ್ತೇ ಇದೆ.
ಆದರೆ, ಈ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪೋಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ! 2025-26ನೇ ಶೈಕ್ಷಣಿಕ ವರ್ಷದ, ಭಾರತೀಯ ವಿದ್ಯಾಭವನ ಮತ್ತು ಬಿಬಿಎಂಪಿ ಪಬ್ಲಿಕ್ ಶಾಲೆ ಒಂದಾಗಿ, ನರ್ಸರಿ (CBSE) ತರಗತಿಗೆ ಉಚಿತ ಪ್ರವೇಶ (School Admission) ನೀಡಲು ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ: ಕರ್ನಾಟಕ ಆಸ್ತಿ ನೋಂದಣಿ ರೂಲ್ಸ್ ಬದಲಾವಣೆ! ಭೂಮಿ, ಮನೆ ರಿಜಿಸ್ಟ್ರೇಷನ್ ಹೊಸ ನಿಯಮ
ಯಾರಿಗೆ ಅವಕಾಶ?
- ಬೆಂಗಳೂರು ಪೋಷಕರ ಮಕ್ಕಳಿಗೆ ವಿಶೇಷ ಅವಕಾಶ
- 31 ಮೇ 2025ಕ್ಕೆ 3 ರಿಂದ 4 ವರ್ಷದೊಳಗಿನ ಮಕ್ಕಳು ಅರ್ಜಿ ಸಲ್ಲಿಸಬಹುದು
- ಬಿಬಿಎಂಪಿ ವ್ಯಾಪ್ತಿಯ 3 ಕಿಮೀ ಅಂತರದ ನಿವಾಸಿಗಳು ಮಾತ್ರ ಅರ್ಹರು
ಪ್ರಮುಖ ದಿನಾಂಕಗಳು
- ಅರ್ಜಿಗಳನ್ನು ವಿತರಣಾ ದಿನಾಂಕ: 25-02-2025 ರಿಂದ 11-03-2025
- ಅರ್ಜಿ ಸಲ್ಲಿಸಲು ಕೊನೆಯ ದಿನ: 11-03-2025 ರಿಂದ 25-03-2025
- ಅರ್ಜಿಗಳ ಪರಿಶೀಲನೆ: 20-04-2025
ಇದನ್ನೂ ಓದಿ: ಬೆಂಗಳೂರು ಸುತ್ತ-ಮುತ್ತ ಬೋರ್‌ವೆಲ್ ಕೊರೆಸುವುದು ನಿಷೇಧ! ಉಲ್ಲಂಘನೆಗೆ ಕಠಿಣ ಕ್ರಮ
ಅಗತ್ಯ ದಾಖಲೆಗಳ ಪಟ್ಟಿ
1️⃣ ಮಗುವಿನ ಪಾಸ್‌ಪೋರ್ಟ್ (Passport) ಸೈಜ್ ಫೋಟೋ – 5
2️⃣ ಕುಟುಂಬದ 2B ಸೈಜ್ (Size) ಭಾವಚಿತ್ರ
3️⃣ ಜನನ ಪ್ರಮಾಣಪತ್ರ (Birth Certificate)
4️⃣ ಆದಾಯ ಪ್ರಮಾಣಪತ್ರ (Income Certificate)
5️⃣ ಜಾತಿ ಪ್ರಮಾಣಪತ್ರ (Caste Certificate)
6️⃣ ಮಗುವಿನ & ಪೋಷಕರ ಆಧಾರ್ (Aadhaar) ಕಾರ್ಡ್ ಜೆರಾಕ್ಸ್
7️⃣ ಸ್ಥಿರ ವಿಳಾಸವನ್ನು ದೃಢಪಡಿಸುವ ದಾಖಲೆ
8️⃣ ಮಗುವಿನ ವೈದ್ಯಕೀಯ ಪ್ರಮಾಣ ಪತ್ರ (ಎತ್ತರ, ತೂಕ, ರಕ್ತದ ಗುಂಪು)
ಇದನ್ನೂ ಓದಿ: ಇನ್ಮುಂದೆ ಬಿಪಿಎಲ್ ಕಾರ್ಡ್ ಇದ್ದೋರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು!
ಅರ್ಜಿ ಸಲ್ಲಿಸುವ ವಿಳಾಸ:
ಹಿರಿಯ ಸಹಾಯಕ ನಿರ್ದೇಶಕರ (ಶಿಕ್ಷಣ), ಬಿಬಿಎಂಪಿ ಕೇಂದ್ರ ಕಚೇರಿ, Annex-3, 1ನೇ ಮಹಡಿ
ಹೆಚ್ಚಿನ ಮಾಹಿತಿಗೆ ಎಂ. ಮುನಿಶಾಮಪ್ಪ (BBMP ಶಿಕ್ಷಣ ಇಲಾಖೆ) ಅವರನ್ನು 9480180152 ನಲ್ಲಿ ಸಂಪರ್ಕಿಸಬಹುದು.
ಪೋಷಕರೇ! ಇದು ನಿಮ್ಮ ಮಗುವಿನ ಭವಿಷ್ಯ ನಿರ್ಮಿಸಲು ಸಿಗುವ ಅದ್ಬುತ ಅವಕಾಶ. ತಡ ಮಾಡದೆ ಅರ್ಜಿ ಸಲ್ಲಿಸಿ!
Free CBSE School Admission in Bengaluru
Our Whatsapp Channel is Live Now 👇