ಗೃಹಲಕ್ಷ್ಮಿ ಬಾಕಿ ಹಣ ₹4000 ಬ್ಯಾಂಕ್ ಖಾತೆಗೆ! ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಾಕಿ ಇರುವ ₹4000 ಹಣವನ್ನು ಶೀಘ್ರದಲ್ಲೇ ಖಾತೆಗೆ ಜಮಾ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖುದ್ದಾಗಿ ಘೋಷಿಸಿದ್ದಾರೆ

  • ಗೃಹಲಕ್ಷ್ಮಿ ಯೋಜನೆಯ ಜೂನ್ ಕಂತು ಒಂದೇ ವಾರದಲ್ಲಿ ಖಾತೆಗೆ
  • ₹4000 ಪೆಂಡಿಂಗ್ ಇರುವ ಫಲಾನುಭವಿಗಳಿಗೆ ಭರವಸೆ
  • DBT ಸ್ಥಿತಿ ಪರಿಶೀಲನೆಗೆ ಸೇವಾ ಸಿಂಧು, ಆಹಾರ ಇಲಾಖೆ ವೆಬ್‌ಸೈಟ್ ಉಪಯೋಗಿಸಿ

ಬೆಂಗಳೂರು (Bengaluru Today): ಕಳೆದ ಕೆಲ ತಿಂಗಳಿಂದ ಗೃಹಲಕ್ಷ್ಮಿ (Gruha Lakshmi Scheme) ಯೋಜನೆಯಡಿ ಕೆಲವು ಫಲಾನುಭವಿಗಳಿಗೆ ಹಣ ಜಮೆಯಾಗದೆ ಬಾಕಿಯಾಗಿದೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಈಗ ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ವತಃ ಸ್ಪಷ್ಟನೆ ನೀಡಿದ್ದಾರೆ.

ಜೂನ್ ತಿಂಗಳ ₹2000 ಕಂತನ್ನು ಮುಂದಿನ ಏಳು ದಿನಗಳಲ್ಲಿ ಖಾತೆಗಳಿಗೆ (Bank Account) ಜಮಾ ಮಾಡಲಾಗುತ್ತದೆ ಎಂಬ ಸುದ್ದಿಯು ಮಹಿಳೆಯರಲ್ಲಿ ಹರ್ಷ ತಂದಿದೆ.

ಇದನ್ನೂ ಓದಿ: ಇನ್ಮುಂದೆ ಪುರುಷರಿಗೂ ಉಚಿತ ಬಸ್ ಪ್ರಯಾಣ! ಶಕ್ತಿ ಯೋಜನೆಯ ಬಿಗ್ ಅಪ್ಡೇಟ್

ಈ ಯೋಜನೆಯು 2023ರ ಆಗಸ್ಟ್‌ನಲ್ಲಿ ಆರಂಭವಾಗಿದ್ದು, ಪ್ರತಿಮಹಿಳೆಗೆ ತಿಂಗಳಿಗೆ ₹2000 ನೇರವಾಗಿ ಬ್ಯಾಂಕ್ ಖಾತೆಗೆ (bank account) ಜಮೆಯಾಗುತ್ತಿದೆ. ಈವರೆಗೆ 23 ಕಂತುಗಳು ಜಮೆಯಾಗಬೇಕಾಗಿದ್ದು, ಕೆಲವು ಫಲಾನುಭವಿಗಳಿಗೆ ಮೊದಲಿನ ಮೂರು-ನಾಲ್ಕು ಕಂತುಗಳು ಇನ್ನೂ ಬಾಕಿಯಿವೆ.

ಮೇ ತಿಂಗಳಲ್ಲಿ ಕೆಲವು ಫಲಾನುಭವಿಗಳಿಗೆ ₹4000 (20ನೇ ಹಾಗೂ 21ನೇ ಕಂತು) ಹಣವನ್ನು ಜಮೆ ಮಾಡಲಾಗಿದೆ.

ಮಾರ್ಚ್ ತಿಂಗಳಲ್ಲಿ ಹಣಕಾಸು ವರ್ಷದ ಕೊನೆಯ ಲೆಕ್ಕಾಚಾರಗಳು, ತಾಂತ್ರಿಕ ದೋಷಗಳು ಹಾಗೂ ಡೇಟಾ ಮಿಸ್‌ಮ್ಯಾಚ್‌ನಂತಹ (technical issues) ಕಾರಣಗಳಿಂದ ಕೆಲವೊಂದು ವಿಳಂಬಗಳಾಗಿದ್ದವು. ಆದರೆ ಈಗ ಏಪ್ರಿಲ್ ಹಾಗೂ ಜೂನ್ ಕಂತುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: 2025ರ ಹೊಸ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ಲಿಸ್ಟ್‌ನಲ್ಲಿ ನಿಮ್ಮ ಹೆಸರು ಪರಿಶೀಲಿಸಿ

Lakshmi Hebbalkar

ನಿಮ್ಮ ಖಾತೆಗೆ ಹಣ ಬಂದಿದೆಯೆಂದು ನೋಡಲು, DBT Karnataka app ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ (ahara.kar.nic.in) ಮೂಲಕ ‘DBT Status’ ಪರಿಶೀಲಿಸಬಹುದು. ಹಾಗೆಯೇ ಸೇವಾ ಸಿಂಧು (Seva Sindhu portal) ನಲ್ಲಿ ‘ಗ್ರಹಲಕ್ಷ್ಮಿ’ ಆಯ್ಕೆಮಾಡಿ ವಿವರ ಪಡೆಯಬಹುದು.

ಇದನ್ನೂ ಓದಿ: ರೈತರ ಖಾತೆಗೆ ಹಾಲಿನ ಪ್ರೋತ್ಸಾಹಧನ! ನಿಮಗೂ ಬಂತಾ? ಚೆಕ್ ಮಾಡಿಕೊಳ್ಳಿ

ಇನ್ನು ಬ್ಯಾಂಕ್ ಖಾತೆ ಸ್ಟೇಟ್‌ಮೆಂಟ್‌ ಅಥವಾ SMS ಮೂಲಕವೂ ಹಣದ ಜಮಾ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಯಾವುದೇ ಸಮಯದಲ್ಲಿ ಗೊಂದಲವಿದ್ದರೆ, ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರವನ್ನು ಸಂಪರ್ಕಿಸಬಹುದು.

ಗೃಹಲಕ್ಷ್ಮಿ ಹಣ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುನಃ ಭರವಸೆ ನೀಡಿದ್ದು, ಸರ್ಕಾರವು ಈ ಯೋಜನೆ ಮೂಲಕ ಮಹಿಳೆಯರ ಆರ್ಥಿಕ ಶಕ್ತಿ ಮತ್ತು ಮನೆ ವ್ಯಯ ನಿರ್ವಹಣೆಗೆ ಖಾತರಿಯ ಸಹಾಯವನ್ನು ನೀಡುತ್ತಿದೆ. ಯೋಜನೆ ವಿಳಂಬವಾದರೂ, ಹಣ ಬಾಕಿಯಾಗುವುದಿಲ್ಲ ಎನ್ನುವುದು ಸರ್ಕಾರದ ನಿಲುವು.

ಇದನ್ನೂ ಓದಿ: ಜುಲೈ-2025 ತಿಂಗಳ ಪಿಂಚಣಿ ಹಣ ಬಿಡುಗಡೆ, ಇಲ್ಲಿದೆ ಹಳ್ಳಿವಾರು ಪಟ್ಟಿ! ಚೆಕ್ ಮಾಡಿ

ಈ ಯೋಜನೆಯು ಮಹಿಳೆಯರಲ್ಲಿ ಆತ್ಮವಿಶ್ವಾಸ ಹಾಗೂ ಆರ್ಥಿಕ ನಿರ್ಣಯಕ್ಕೆ ಪ್ರೇರಣೆ ನೀಡುತ್ತಿರುವ ಉದಾಹರಣೆಯಾಗಿದೆ. ಸಣ್ಣ ಉಳಿತಾಯದಿಂದ ಕುಟುಂಬದ ನಿತ್ಯದ ಖರ್ಚಿಗೆ ಸಹಾಯವಾಗುವಂತಹ ಈ ಯೋಜನೆ, ಈಗ ಲಕ್ಷಾಂತರ ಗೃಹಿಣಿಯರ ಬದುಕಿಗೆ ಶಕ್ತಿ ತುಂಬುತ್ತಿದೆ.

Gruha Lakshmi Scheme Pending Amount to Be Credited Soon

English Summary

Related Stories