ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣಕ್ಕೆ ಬಿಡುಗಡೆ ಭಾಗ್ಯ! ಬಿಗ್ ಅಪ್ಡೇಟ್
ಗೃಹಲಕ್ಷ್ಮಿ ಯೋಜನೆ ಯಾವುದೇ ಕಾರಣಕ್ಕೂ ಪರಿಷ್ಕರಣೆ ಆಗುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಬಾಕಿ ಉಳಿದ ಹಣ ಶೀಘ್ರದಲ್ಲೇ ಜಮೆ ಆಗಲಿದ್ದು, ಫಲಾನುಭವಿಗಳಿಗೆ ಹತ್ತು-ಹದಿನೈದು ದಿನಗಳಲ್ಲಿಯೇ ತಲುಪಲಿದೆ.
- ಗೃಹಲಕ್ಷ್ಮಿ ಹಣದ ವಿತರಣೆಯಲ್ಲಿ ಯಾವುದೇ ತಡವಿಲ್ಲ.
- ಬಜೆಟ್ (Budget) ಅನುಸಾರ ₹32,000 ಕೋಟಿ ಅನುದಾನ ಖರ್ಚಾಗಿದೆ.
- ಜನವರಿ ಮತ್ತು ಫೆಬ್ರವರಿ ತಿಂಗಳ ಹಣವೂ ಶೀಘ್ರದಲ್ಲೇ ಜಮೆ
ಬೆಂಗಳೂರು (Bengaluru): ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme) ಯಾವುದೇ ಕಾರಣಕ್ಕೂ ಪರಿಷ್ಕರಣೆ ಮಾಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಹಲವರು ಯೋಜನೆಯ ಹಣ ವಿತರಣೆಯಲ್ಲಿ ತಡವಾಗಿದೆ ಎಂಬ ವದಂತಿಗಳನ್ನು ಹರಡುತ್ತಿದ್ದು, ಜನವರಿ ಮತ್ತು ಫೆಬ್ರವರಿ ತಿಂಗಳ ಹಣವೂ ಶೀಘ್ರದಲ್ಲೇ ಜಮೆ ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನು, ಮಾರ್ಚ್ 31ರೊಳಗೆ ಮಹಿಳೆಯರ ಖಾತೆಗೆ ಹಣ ತಲುಪಲಿದೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ವಿತರಣೆಗೆ ಹೊಸ ಕ್ರಮ; ಸಿದ್ದರಾಮಯ್ಯ ಖಡಕ್ ಸೂಚನೆ
ಯೋಜನೆಗೆ ಯಾವ ತೊಂದರೆ ಇಲ್ಲ:
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಯೋಜನೆ ಈಗ ನಡೀತಿರುವ ರೀತಿಯಲ್ಲೇ ಮುಂದುವರಿಯಲಿದೆ ಎಂದು ಹೇಳಿದರು. ಸರ್ಕಾರ ಈ ಯೋಜನೆಗೆ ₹32,000 ಕೋಟಿ ಅನುದಾನ ನೀಡಿದ್ದು, ಶೇಕಡ 90% ಹಣ ಖರ್ಚಾಗಿದೆ. ಉಳಿದ ಹಣ ಮಾರ್ಚ್ 31ರೊಳಗೆ ಬಳಕೆಯಾಗಲಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ! 3 ಲಕ್ಷ ಸಹಾಯಧನ ಯೋಜನೆ ಘೋಷಣೆ
ರಾಜಕೀಯ ಟೀಕೆಗಳಿಗೆ ಉತ್ತರ:
ಬಿಜೆಪಿ ನಾಯಕರು ಈ ಬಜೆಟ್ ಸಿಎಂ ಸಿದ್ದರಾಮಯ್ಯ ಅವರ ಕೊನೆಯ ಬಜೆಟ್ ಎಂದು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಆದರೆ ಸಿದ್ಧರಾಮಯ್ಯನವರು 16ನೇ ಬಜೆಟ್ ಮಂಡನೆ ಮಾಡಿರುವುದು ದೊಡ್ಡ ಸಾಧನೆ ಎಂದು ಹೇಳಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಕುರಿತು ಕರ್ನಾಟಕ ಬಜೆಟ್‌ನಲ್ಲಿ ಮಹತ್ವದ ಘೋಷಣೆ
ಮಹಾರಾಷ್ಟ್ರದ ಜೊತೆ ಹೋಲಿಕೆ:
ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸುತ್ತಿದ್ರೆ, ಮಹಾರಾಷ್ಟ್ರದಲ್ಲಿ ಚುನಾವಣೆ ಮುಂಚೆ ಮಾತ್ರ ಹಣ ನೀಡಲಾಗಿತ್ತು. ಬಳಿಕ ಯೋಜನೆ ಸ್ಥಗಿತಗೊಂಡಿದೆ. ಆದರೆ ಕರ್ನಾಟಕದಲ್ಲಿ (Karnataka) ಇದು ನಿಯಮಿತವಾಗಿ (Regularly) ನಡೆಯುತ್ತಿದೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಗಿಫ್ಟ್: ಸಾಲದ ಮೇಲೆ ಬಡ್ಡಿ ಮನ್ನಾ
Gruhalakshmi Scheme Will Continue, No Changes
Our Whatsapp Channel is Live Now 👇