ಇನ್ಮುಂದೆ ವಾಹನಗಳಲ್ಲಿ ಪ್ರಕಾಶಿಸುವ LED ಬಲ್ಬ್ ಬಳಕೆ ಮಾಡುವಂತಿಲ್ಲ! ರೂಲ್ಸ್ ಮಿರಿದ್ರೆ ಕೇಸ್ ಗ್ಯಾರೆಂಟಿ

Story Highlights

ವಾಹನದಲ್ಲಿ ಬಳಕೆ ಮಾಡುವ LED ಬಲ್ಬ್ ಗೂ ಅಪಘಾತ ಸಂಖ್ಯೆ ಹೆಚ್ಚಳಕ್ಕು ನಿಖಟ ಸಂಬಂಧ ಇದೆ ಎಂಬ ಅಚ್ಚರಿಯ ಸಂಗತಿ ಕೂಡ ಹೊರಬಂದಿದೆ.

ವಾಹನ ಚಲಾಯಿಸುವಾಗ ಎಚ್ಚರದಿಂದ ಇರುವಂತೆ ಸರಕಾರ ಅನೇಕ ಸಲ ಸೂಚನೆ ನೀಡಿದರೂ ಕೂಡ ಜನರು ಈ ಬಗ್ಗೆ ನಿರ್ಲಕ್ಷ್ಯ ಭಾವನೆ ವಹಿಸುತ್ತಲೇ ಇರುತ್ತಾರೆ. ವಾಹನ ಸವಾರರು (Vehicles) ಮಾಡುವ ಕೆಲವು ನಿರ್ಲಕ್ಷ್ಯದಿಂದಲೇ ನಿತ್ಯ ಅಪಘಾತ ನಡೆಯುತ್ತಲಿರುತ್ತದೆ.

ಹಾಗಾಗಿ ಅಪಘಾತ ತಡೆಯುವ ಸಲುವಾಗಿ ಸರಕಾರ ಅನೇಕ ವಿಧವಾದ ನೀತಿ ನಿಯಮ ಜಾರಿಗೆ ತರುತ್ತಲಿದೆ‌. ಇನ್ನು ಮುಂದೆ ಕೂಡ ವಾಹನ ಸವಾರರು ಸರಕಾರ ವಿಧಿಸಿದ್ದ ಹೊಸತೊಂದು ನಿಯಮ ಉಲ್ಲಂಘನೆ ಮಾಡಿದರೆ ಕೇಸ್ ದಾಖಲಾಗುವ ಸಾಧ್ಯತೆ ಇರಲಿದೆ.

ಗೃಹಲಕ್ಷ್ಮಿ ಹಣಕ್ಕೆ ಪೋಸ್ಟ್ ಆಫೀಸ್ ಅಕೌಂಟ್ ತೆರೆಯಿರಿ! ಹಣ ಬಾರದವರಿಗೆ ಒಟ್ಟಿಗೆ ಸಿಗಲಿದೆ ₹22,000

ಈಗಂತೂ ಮನೆಯೊಂದರಲ್ಲಿ ಎರಡು ಮೂರು ವಾಹನ ನಿತ್ಯ ಬಳಕೆ ಆಗುತ್ತಲಿರುತ್ತದೆ. ಹಾಗಾಗಿ ಸದಾ ಕಾಲ ವಾಹನ ರಶ್ ಆಗಿ ಟ್ರಾಫಿಕ್ ಜಾಂ ಕೂಡ ಆಗುತಲಿರುತ್ತದೆ. ಕೆಲಸಕ್ಕೆ ಬೇಗ ತಲುಪಬೇಕು, ಕೆಲಸದಿಂದ ಮನೆಗೆ ಬೇಗ ವಾಪಾಸ್ ಆಗಬೇಕು ಎಂದು ಆತುರದಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದು ಕೂಡ ಅಪಘಾತ ಆಗಿದ್ದನ್ನು ನಾವು ಕಾಣಬಹುದು.

ಅದರ ಜೊತೆಗೆ ವಾಹನದಲ್ಲಿ ಬಳಕೆ ಮಾಡುವ LED ಬಲ್ಬ್ ಗೂ ಅಪಘಾತ ಸಂಖ್ಯೆ ಹೆಚ್ಚಳಕ್ಕು ನಿಖಟ ಸಂಬಂಧ ಇದೆ ಎಂಬ ಅಚ್ಚರಿಯ ಸಂಗತಿ ಕೂಡ ಹೊರಬಂದಿದೆ.

ಈ ಬಲ್ಬ್ ಬಳಕೆ ಮಾಡುವಂತಿಲ್ಲ

ಇನ್ನು ಮುಂದೆ ವಾಹನಗಳಲ್ಲಿ ಹೆಚ್ಚು ಬೆಳಕು ಪ್ರಕಾಶಿಸುವ ಬೆಳಕನ್ನು ಬಳಕೆ ಮಾಡದಂತೆ ಸರಕಾರದ ಆದೇಶದ ಅನ್ವಯ ಪೊಲೀಸ್ ಇಲಾಖೆ ಹೊಸ ಸೂಚನೆ ನೀಡಿದೆ. ಇತ್ತೀಚಿನ ದೊಡ್ಡ ವಾಹನಗಳಾದ ಬಸ್, ಲಾರಿ , ಟ್ರಕ್ ಇತರ ವಾಹನದಲ್ಲಿ LED ಬಲ್ಬ್ ಬಳಕೆ ಮಾಡಲಾಗುತ್ತದೆ.

ಹಾಗಾಗಿ ಎದುರಿಗೆ ಬರುವ ವಾಹನಕ್ಕೆ LED ಬಲ್ಬ್ ನ ಪ್ರಕಾಶ ಕಣ್ಣು ಕುಕ್ಕಲಿದ್ದು ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಇದೆ. ಹಾಗಾಗಿಯೇ ಅಪಘಾತ ಆಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ವಾಹನಗಳಿಗೆ LED ಬಲ್ಬ್ ಬಳಕೆ ಮಾಡಿದ್ದು ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತೆ ಮಹಾ ನಿರ್ದೇಶಕರಾದ ಪೊಲೀಸ್ ಅಲೋಕ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ರೇಷನ್ ಪಡೆಯೋಕೆ ಹೊಸ ರೂಲ್ಸ್, ಇನ್ಮುಂದೆ ಕಣ್ಣಿನ ಐರಿಸ್ ಸ್ಕ್ಯಾನ್ ಮಾಡಿ ನೀಡಲಾಗುತ್ತೆ ರೇಷನ್!

ಮೋಟಾರು ವಾಹನ ಕಾಯ್ದೆ ಯಲ್ಲಿ ಕೂಡ ಈ ಬಗ್ಗೆ ಉಲ್ಲೇಖಿಸಲಾಗಿದ್ದು ಇನ್ನು ಮುಂದೆ ಯಾವುದೇ ವಾಹನಕ್ಕೆ LED ಬಲ್ಬ್ ಅನ್ನು ಬಳಕೆ ಮಾಡುವಂತಿಲ್ಲ‌. ಬಳಕೆ ಮಾಡುವ ಬಲ್ಬ್ ಗಳು ಇತರ ವಾಹನ ಚಾಲಕರಿಗೆ ಸಮಸ್ಯೆ ಉಂಟು ಮಾಡಬಾರದು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಒಂದು ವೇಳೆ ಈ ನಿಯಮ ಉಲ್ಲಂಘನೆ ಮಾಡಿದರೆ ಭಾರತದ ಮೋಟಾರ್ ವಾಹನ ಕಾಯ್ದೆ ಕಲಂ 177 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ. ಜುಲೈನಿಂದಲೇ ವಾಹನಕ್ಕೆ LED ಬಲ್ಬ್ ಹಾಕಿ ಬಳಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ವಾಹನ ಸವಾರರು ಈ ಬಗ್ಗೆ ಮೊದಲೇ ಜಾಗೃತ ರಾಗಬೇಕಿದೆ.

Henceforth, LED light bulbs cannot be used in vehicles

Related Stories