ಮನೆ ಚೇಂಜ್ ಮಾಡಿದಾಗ ಮತ್ತೆ ಗೃಹಜ್ಯೋತಿ ಫ್ರೀ ಕರೆಂಟ್ ಪಡೆಯೋದು ಹೇಗೆ? ಡಿ-ಲಿಂಕ್ ಅಪ್ಡೇಟ್

ಮನೆ ಚೇಂಜ್ ಮಾಡಿದರೆ ಉಚಿತ ವಿದ್ಯುತ್ ಪಡೆಯಲು ಗೃಹಜ್ಯೋತಿ ಸೌಲಭ್ಯ ಪಡೆಯುವುದು ಹೇಗೆ? ಡಿ-ಲಿಂಕ್ ವ್ಯವಸ್ಥೆ ಬಗ್ಗೆ ಮಾಹಿತಿ

Bengaluru, Karnataka, India
Edited By: Satish Raj Goravigere

ಗೃಹಜ್ಯೋತಿ ಯೋಜನೆಯನ್ನು ರಾಜ್ಯ ಸರ್ಕಾರವು ನಮ್ಮ ರಾಜ್ಯದ ಜನರು ಉಚಿತವಾಗಿ ವಿದ್ಯುತ್ (Free Electricity) ಸೌಲಭ್ಯ ಪಡೆಯಲಿ ಎನ್ನುವ ಕಾರಣಕ್ಕೆ ಜಾರಿಗೆ ತಂದಿರುವ ಯೋಜನೆ ಆಗಿದೆ. ಗೃಹಜ್ಯೋತಿ ಯೋಜನೆಯ (Gruha Jyothi Scheme) ಅಡಿಯಲ್ಲಿ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿರುವ ಯೋಜನೆ ಇದಾಗಿದ್ದು, ಇದೀಗ ಯೋಜನೆಗೆ 1 ವರ್ಷದ ಸಂಭ್ರಮ ಆಗಿದೆ. 1 ವರ್ಷಗಳ ಹಿಂದೆ ಗೃಹಜ್ಯೋತಿ ಯೋಜನೆ ಶುರುವಾಗಿತ್ತು.

ಬಹಳಷ್ಟು ಜನರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುತ್ತಿದೆ. ಆದರೆ ಇದರಲ್ಲಿ ಒಂದು ವ್ಯವಸ್ಥೆ ಇರಲಿಲ್ಲ. ಅದು ಗೃಹಜ್ಯೋತಿ ಫಲಾನುಭವಿಗಳು ಒಂದು ವೇಳೆ ಮನೆ ಬದಲಾಯಿಸಿದರೆ, ಮತ್ತೆ ಮತ್ತೆ ಗೃಹಜ್ಯೋತಿ ಯೋಜನೆಯ ಮೂಲಕ ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯುವ ಆಯ್ಕೆ ಇರಲಿಲ್ಲ.

sudden rise in electricity prices even Gruha Jyothi Yojana

ಆದರೆ ಇದೀಗ ಗೃಹಜ್ಯೋತಿ ಯೋಜನೆ 1 ವರ್ಷ ತುಂಬಿರುವ ಸಮಯದಲ್ಲಿ, ಇಂಧನ ಇಲಾಖೆ ಈ ಸಮಸ್ಯೆಗೆ ಒಂದು ಪರಿಹಾರ ತಂದುಕೊಟ್ಟಿದೆ. ಹೌದು, ಇದೀಗ ಹೊಸ ವ್ಯವಸ್ಥೆಯನ್ನು ಬೆಸ್ಕಾಂ ಜಾರಿಗೆ ತಂದಿದೆ.

ಕೊನೆಗೂ ಬಂದೇ ಬಿಡ್ತು ಗೃಹಲಕ್ಷ್ಮಿ ಯೋಜನೆಯ ಹಣ! ಈ ಜಿಲ್ಲೆಯ ಮಹಿಳೆಯರು ಚೆಕ್ ಮಾಡಿಕೊಳ್ಳಿ

ಇದೀಗ ಗೃಹಜ್ಯೋತಿ ಯೋಜನೆಯಲ್ಲಿ ಒಂದು ಮನೆಯ ಗೃಹಜ್ಯೋತಿ ಸೌಲಭ್ಯವನ್ನು ತಪ್ಪಿಸಿ, ಹೊಸ ಮನೆಯಲ್ಲೂ ಸೌಲಭ್ಯ ಪಡೆಯುವುದಕ್ಕಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಬಾಡಿಗೆ ಮನೆ ಬದಲಾಯಿಸುವವರು ನಿಮ್ಮ ಒಂದು ಮನೆಯ ಗೃಹಜ್ಯೋತಿ ಯೋಜನೆಗಾಗಿ ಮನೆಯ RR ನಂಬರ್ ಅನ್ನು ಡಿಲಿಂಕ್ ಮಾಡಿ, ಹೊಸ ಮನೆಯ RR ನಂಬರ್ ಅನ್ನು ಮತ್ತೆ ಲಿಂಕ್ ಮಾಡಬಹುದು. ಈ ರೀತಿಯಾಗಿ ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಡಿ ಲಿಂಕ್ ಮಾಡುವ ಪ್ರಕ್ರಿಯೆ ಹೇಗೆ ಎಂದು ತಿಳಿಯೋಣ…

ಆನ್ಲೈನ್ ಡಿ ಲಿಂಕ್ ಮಾಡಬಹುದು:

https://sevasindhu.karnataka.gov.in/GruhaJyothi_Delink/GetAadhaarData.aspx ಈ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಡಿ ಲಿಂಕ್ ಮಾಡಬಹುದು. ಈ ಲಿಂಕ್ ಓಪನ್ ಮಾಡಿ, ರಿಜಿಸ್ಟರ್ ಮಾಡಿ, Cache Memory Clear ಎನ್ನುವ ಆಪ್ಶನ್ ಬಳಸಿ, ಮೆಮೊರಿ ಕ್ಲಿಯರ್ ಮಾಡಿ.

ಬಳಿಕ ಪೋರ್ಟಲ್ ಲಿಂಕ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಲಿಂಕ್ ಮಾಡಬಹುದು. ನೀವು ಮನೆ ಚೇಂಜ್ ಮಾಡುವ ವೇಳೆ, ಆಧಾರ್ ಜೊತೆಗೆ RR ನಂಬರ್ ಲಿಂಕ್ ಆಗಿರುತ್ತದೆ, ಇದನ್ನು ಚೆಕ್ ಮಾಡಿ ಡಿ ಲಿಂಕ್ ಮಾಡಬಹುದು.

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮತ್ತೆ ಅವಕಾಶ, ಏನೆಲ್ಲಾ ಬದಲಾವಣೆ ಮಾಡಬಹುದು? ಇಲ್ಲಿದೆ ಮಾಹಿತಿ

ನೀವು ಬೇರೆ ಮನೆಗೆ ಶಿಫ್ಟ್ ಆದಾಗ, ಆಧಾರ್ ಜೊತೆಗೆ ಲಿಂಕ್ ಆಗದೆ ಇರುವ RR ನಂಬರ್ ಜೊತೆಗೆ ಲಿಂಕ್ ಮಾಡಬಹುದು. ಆದರೆ ಮೊದಲಿಗೆ ಇದ್ದ ಮನೆಯ RR ನಂಬರ್ ಡೀಲಿಂಕ್ ಆಗಿರುವುದನ್ನು ಚೆಕ್ ಮಾಡಿಕೊಳ್ಳಬೇಕು.

ಗೃಹಜ್ಯೋತಿ ಯೋಜನೆಗೆ ಈಗ 1 ವರ್ಷ ತುಂಬಿದ್ದು, ಎಷ್ಟು ಜನ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ನೋಡುವುದಾದರೆ.. 1.67 ಕೋಟಿ ಜನರು ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ದಾರೆ, 1.56 ಕೋಟಿ ಜನರು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.

ಇನ್ನು ಈ ಯೋಜನೆಗೆ 2023ರ ಆಗಸ್ಟ್ ಇಂದ 2024ರ ಜೂನ್ ವರೆಗು ಸುಮಾರು ₹8,237 ಕೋಟಿ ರೂಪಾಯಿ ಖರ್ಚಾಗಿದೆ. ಮಧ್ಯಮ ವರ್ಗದ ಜನರಿಗೆ ಈ ಒಂದು ಯೋಜನೆಯ ಲಾಭ ಸಿಗುತ್ತಿದೆ.

How to get Gruha Jyothi free current Scheme again when changing house by D-Link