ಬೆಂಗಳೂರಿನಲ್ಲಿ ಮನೆ ಖರೀದಿ ಪ್ಲಾನ್ ಇದ್ರೆ ಈ ಭಾಗದಲ್ಲಿ ಖರೀದಿ ಮಾಡಿದ್ರೆ ಹೆಚ್ಚು ಲಾಭ
ಸಾಮಾನ್ಯವಾಗಿ ಬೆಂಗಳೂರಿನಲ್ಲಿ (Bengaluru) ತಮ್ಮ ಜೀವನ ಕಟ್ಟಿಕೊಳ್ಳಲು ಬೇರೆ ಬೇರೆ ಪ್ರದೇಶದಿಂದ ಬಂದು ಇಲ್ಲಿಯೇ ವಾಸಿಸಿ ಕೊನೆಗೆ ಇಲ್ಲಿಯೇ ಒಂದು ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳಬೇಕು ಎಂದು ಹಲವರು ಬಯಸುತ್ತಾರೆ
ಹಾಗೆ ಬೆಂಗಳೂರಿನಲ್ಲಿ ವಾಸಿಸುವವರಿಗೆ ಮನೆ ಖರೀದಿ (House Purchase) ಮಾಡುವುದು ಸುಲಭವಲ್ಲ, ಯಾಕೆಂದರೆ ಇಂದು ಭೂಮಿಯ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ, ಹಾಗಾಗಿ ಬೆಂಗಳೂರಿನಲ್ಲಿ ಫ್ಲಾಟ್ ಖರೀದಿ (flat purchase) ಮಾಡುವುದಿದ್ದರೂ ಕೂಡ ದುಬಾರಿಯಾಗಿದೆ.
ಆದರೆ ಬೆಂಗಳೂರಿನ ಕೆಲವು ಭಾಗದಲ್ಲಿ ನೀವು ಮನೆ ಖರೀದಿ ಮಾಡುವುದಿದ್ದರೆ ಕೈಗೆಟುಕುವ ದರದಲ್ಲಿಯೂ ಲಭ್ಯವಿದೆ ಎಂದು ತಜ್ಞರು ತಿಳಿಸುತ್ತಾರೆ. ಹಾಗೆ ನಿಮಗೇನಾದರೂ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗಾಗಿ ಈ ಲೇಖನ, ಎಲ್ಲಿ ಮನೆ ಖರೀದಿ ಮಾಡಿದರೆ ಬೆಸ್ಟ್ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಈ 5 ಆದಾಯ ಮೂಲಗಳಿಗೆ ಇನ್ಮುಂದೆ ಟ್ಯಾಕ್ಸ್ ಪಾವತಿ ಮಾಡೋದೇ ಬೇಡ! ಹೊಸ ರೂಲ್ಸ್
ಮೈಸೂರು ರಸ್ತೆಯಲ್ಲಿ ಹೆಚ್ಚಿದ ರಿಯಲ್ ಎಸ್ಟೇಟ್ ಬಿಸಿನೆಸ್ (Mysore road real estate business)
ಬೆಂಗಳೂರಿನ ನೈರುತ್ಯದಲ್ಲಿ ಮೈಸೂರು, ಮಂಡ್ಯ ರಾಮನಗರಕ್ಕೇ ಕೊಂಡಿಯಾಗಿರುವ ಮೈಸೂರು ರಸ್ತೆ ಭಾಗದಲ್ಲಿ ಇತ್ತೀಚಿಗೆ ರಿಯಲ್ ಎಸ್ಟೇಟ್ ಉದ್ಯಮ ಬಹಳ ಬಿರುಸಿನಿಂದ ಸಾಗಿದೆ ಎನ್ನಬಹುದು.
ಕೆಂಗೇರಿ (Kengeri) ಭಾಗದ ವರೆಗೂ ನಮ್ಮ ಮೆಟ್ರೋ (namma metro) ವಿಸ್ತರಣೆ ಆಗಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿಯೂ ಕೂಡ ಮನೆ ದರ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಆದರೂ ಕೂಡ ನೀವು ಬೆಂಗಳೂರಿನ ಸುಂದರವಾಗಿರುವ ಪ್ರದೇಶದಲ್ಲಿ ಮನೆ ಖರೀದಿ ಮಾಡಬೇಕು ಅಂದ್ರೆ ಕೈಗೆಟ್ಟುವ ದರದಲ್ಲಿಯೂ ಕೂಡ ಲಭ್ಯವಿದೆ.
ಮನೆ ಕಟ್ಟೋಕೆ ಬ್ಯಾಂಕ್ ಸಾಲ ಮಾಡಿದ ವ್ಯಕ್ತಿ ಮೃತಪಟ್ಟರೆ ಸಾಲ ತೀರಿಸೋ ಹೊಣೆ ಯಾರದ್ದು?
ಮೂಲ ಸೌಕರ್ಯಗಳ ಅಭಿವೃದ್ಧಿ (infrastructure development)
ಒಂದು ಫ್ಲಾಟ್ ಅಥವಾ ಸೈಟ್ ಖರೀದಿಗೂ (Flat or Site Purchase) ಮುನ್ನ ಅಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಆಗಿದೆಯೋ ಅಥವಾ ಇಲ್ಲವೋ, ಎಷ್ಟು ವರ್ಷಗಳಲ್ಲಿ ಆಗಬಹುದು ಎಂಬುದನ್ನು ಪರಿಶೀಲನೆ ಮಾಡಿ ನಂತರ ಖರೀದಿ ಮಾಡುತ್ತಾರೆ
ಇಂತಹ ಸಂದರ್ಭದಲ್ಲಿ ಮೈಸೂರು ರಸ್ತೆ ವಿಭಾಗದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು (Development) ನೋಡಿದರೆ ಇಲ್ಲಿ ನಿವೇಶನ ಅಥವಾ ಮನೆ ಖರೀದಿ ಮಾಡುವುದು ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ.
ಬೆಂಗಳೂರು ನಗರ ಕೇಂದ್ರ ಭಾಗಕ್ಕೆ ಹತ್ತಿರದಲ್ಲಿ ಇರುವ ಸ್ಥಳ ಮೈಸೂರು ರಸ್ತೆಯಾಗಿದೆ ಇಲ್ಲಿ ಹತ್ತು ಹಲವು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೈಸೂರು ಬೆಂಗಳೂರು ನಡುವಿನ ಅಷ್ಟಪಥ ರಸ್ತೆ (Bangalore Mysore ashtapath road) ಅಭಿವೃದ್ಧಿಯಾಗುತ್ತಿದೆ. ಬೆಂಗಳೂರಿನ ಯಾವುದೇ ಭಾಗಕ್ಕೆ ಸಂಪರ್ಕಿಸುವಂತಹ ಕನೆಕ್ಟಿವಿಟಿ (road connectivity) ಇದೆ, ಜೊತೆಗೆ ನಮ್ಮ ಮೆಟ್ರೋ ಕೂಡ ಸಂಪರ್ಕಕ್ಕೆ ಸಿಗಲಿದ್ದು ಈ ಭಾಗ ಸಂಪೂರ್ಣ ಅಭಿವೃದ್ಧಿಯಾಗಿದೆ
ತಪ್ಪಾಗಿ ಬೇರೆಯವರ ಫೋನ್‌ಪೇ ನಂಬರ್ಗೆ ಹಣ ಹಾಕಿದಾಗ, ವಾಪಸ್ ಪಡೆಯಲು ಹೀಗೆ ಮಾಡಿ
ವಾಸಕ್ಕೆ ಯೋಗ್ಯ ವಾತಾವರಣ!
ಮೆಟ್ರೋ ಪೊಲಿಟಿನ್ ಸಿಟಿ (metropolitan city) ಬೆಂಗಳೂರು ಇದೀಗ ಮಾಲಿನ್ಯದಿಂದ (pollution) ತುಂಬಿದೆ. ಬೆಂಗಳೂರಿನ ನಗರ ಪ್ರದೇಶದಲ್ಲಿ ವಾಹನ ದಟ್ಟಣೆಗಳಿಂದಾಗಿ ಸಂಚಾರಕ್ಕೂ ಕೂಡ ಕಷ್ಟ ಪಡುವಂತಾಗಿದೆ ಆದರೆ ಮೈಸೂರು ರಸ್ತೆ ಭಾಗದಲ್ಲಿ ಇಂದಿಗೂ ಹಸಿರು ಉಳಿದುಕೊಂಡಿದ್ದು ಶಾಂತವಾಗಿ ಜೀವನ ನಡೆಸಲು ಬಯಸುವವರು ಇಲ್ಲಿ ಪ್ರಾಪರ್ಟಿ ಖರೀದಿ (property ) ಮಾಡುವುದು ಉತ್ತಮ.
ಅಷ್ಟೇ ಅಲ್ಲದೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ ನೀರಿನ ಸಮಸ್ಯೆಯೂ ಕೂಡ ಇದೆ ಆದರೆ ಮೈಸೂರು ರಸ್ತೆ ಭಾಗದಲ್ಲಿ ಇಂತಹ ಸಮಸ್ಯೆಗಳಿಂದ ಮುಕ್ತವಾಗಿದ್ದು ಕೇವಲ 30 ರಿಂದ 50 ಲಕ್ಷ ವೆಚ್ಚದಲ್ಲಿ ಮನೆ ಖರೀದಿ ಮಾಡಬಹುದು ಎಂದಿದ್ದಾರೆ.
ಪ್ರಾಪರ್ಟಿಗೆ ಹೆಚ್ಚುತ್ತಿರುವ ಬೆಲೆ
ಕಳೆದ ಎರಡು ವರ್ಷಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೆ ಈಗ ಮೈಸೂರು ರಸ್ತೆ ವಿಭಾಗದಲ್ಲಿ ಇರುವ ಪ್ರಾಪರ್ಟಿ ಬೆಲೆ ದುಪ್ಪಟ್ಟಾಗಿದೆ ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇವೆ, ಇದಕ್ಕೆ ಮುಖ್ಯ ಕಾರಣ ಈ ಭಾಗದಲ್ಲಿ ರಸ್ತೆ ಸಾರಿಗೆ ಕನೆಕ್ಟಿವಿಟಿ ಉತ್ತಮವಾಗಿದೆ
ಬೆಂಗಳೂರು ಕೇಂದ್ರ ಭಾಗಗಳಿಗೆ ಹೋಗಿ ಕೆಲಸ ಮಾಡುವವರಿಗೆ ನಿತ್ಯವೂ ಪ್ರಯಾಣಿಸಲು ಅನುಕೂಲವಾದ ರಸ್ತೆ ಸಾರಿಗೆ ಹಾಗೂ ಮೆಟ್ರೋ ಕೂಡ ಲಭ್ಯವಿದೆ ಅಷ್ಟೇ ಅಲ್ಲದೆ ಹತ್ತಿರದಲ್ಲಿ ಶಾಲಾ ಕಾಲೇಜುಗಳು ಕೂಡ ಇದ್ದು ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡಲಾಗಿದೆ
ಈ ಹಿನ್ನೆಲೆಯಲ್ಲಿ ಮೈಸೂರು ರಸ್ತೆ ಭಾಗದಲ್ಲಿ ಮನೆ ಖರೀದಿ ಮಾಡಲು ಇದು ಬೆಸ್ಟ್ ಸಮಯ ಎನ್ನಬಹುದು, ಅದರಲ್ಲೂ ಹೂಡಿಕೆಯ ದೃಷ್ಟಿಯಿಂದ ನಿವೇಶನ ಅಥವಾ ಮನೆ ಖರೀದಿ ಮಾಡಲು ಬಯಸುವವರಿಗೆ ಮೈಸೂರು ರಸ್ತೆ ಭಾಗದಲ್ಲಿ ಖರೀದಿ ಮಾಡುವುದು ಹೆಚ್ಚು ಉತ್ತಮ ಆಯ್ಕೆಯಾಗಿದೆ.
If there is a plan to buy a house in Bangalore, buying in this part is more profitable