Home Loan : ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಮಾತನ್ನು ಹಿರಿಯರು ಸುಖಾ ಸುಮ್ಮನೆ ಹೇಳಿಲ್ಲ. ಒಂದು ಮದುವೆ ಮಾಡುವುದು ಹಾಗೂ ಒಂದು ಮನೆ ಕಟ್ಟುವುದು ಕೂಡ ಬಹಳ ಕಷ್ಟದ ಕೆಲಸ
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದುಬಾರಿ ದುನಿಯಾದಲ್ಲಿ ಪ್ರತಿಯೊಂದು ವಸ್ತುಗಳು ಕೂಡ ದುಬಾರಿಯಾಗಿವೆ. ಹಾಗಾಗಿ ಮನೆ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ.
ಆದರೆ ಒಂದು ಮನೆಯನ್ನು ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಕಟ್ಟಿಸಬೇಕು ಎನ್ನುವುದು ಪ್ರತಿಯೊಬ್ಬ ಮಧ್ಯಮ ವರ್ಗದ (middle class family) ಕುಟುಂಬದವರ ಕನಸು.
ಇದಕ್ಕಾಗಿ ಜೀವನಪರ್ಯಂತ ದುಡಿಯುತ್ತಾರೆ, ಎಷ್ಟೋ ಬಾರಿ ತಾವು ದುಡಿದ ಹಣ ದೈನಂದಿನ ಖರ್ಚಿಗೆ ಸರಿ ಹೋಗುತ್ತದೆಯೇ ಹೊರತು ಮನೆ ನಿರ್ಮಾಣ (house built) ಮಾಡಲು ಸಾಧ್ಯವಿಲ್ಲ, ಇಂತಹ ಸಂದರ್ಭದಲ್ಲಿ ಮನೆ ನಿರ್ಮಾಣ ಮಾಡುವ ಕನಸನ್ನು ನನಸಾಗಿಸಿಕೊಳ್ಳಲು ಸಹಾಯ ಮಾಡುವುದೇ ಗೃಹ ಸಾಲಗಳು (Home Loan).
ತಪ್ಪಾಗಿ ಬೇರೆಯವರ ಫೋನ್‌ಪೇ ನಂಬರ್ಗೆ ಹಣ ಹಾಕಿದಾಗ, ವಾಪಸ್ ಪಡೆಯಲು ಹೀಗೆ ಮಾಡಿ
ಬ್ಯಾಂಕ್ ನಲ್ಲಿ ಸಿಗುತ್ತೆ ಗೃಹ ಸಾಲ (Home loan by banks)
20 ಅಥವಾ 30 ವರ್ಷಗಳ ಅವಧಿಯಲ್ಲಿ ಹಿಂತಿರುಗಿಸಬಹುದಾದ ಗೃಹ ಸಾಲ ಯೋಜನೆಯನ್ನು ಸಾಕಷ್ಟು ಜನ ಆಯ್ದುಕೊಂಡು ಆ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳುತ್ತಾರೆ, ಬೇರೆ ಬೇರೆ ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯ ಬಡ್ಡಿ ದರವನ್ನು (interest Rates) ಗೃಹ ಸಾಲಕ್ಕೆ ನಿಗದಿಪಡಿಸಿಡಲಾಗುತ್ತದೆ.
ಗೃಹ ಸಾಲ (Home loan) ಪಡೆದುಕೊಳ್ಳುವ ವ್ಯಕ್ತಿ ತನ್ನ ಯಾವುದೇ ಚಿರಾಸ್ತಿ ಪತ್ರವನ್ನು ಅಡವಿಡಬೇಕು. (Property documents for guarantee) ಅಂದರೆ ಬ್ಯಾಂಕ್ ಗ್ಯಾರಂಟಿಗೋಸ್ಕರ ಅಡಮಾನ ಇರಿಸಿಕೊಳ್ಳುತ್ತದೆ, ಯಾವಾಗ ವ್ಯಕ್ತಿ ಬ್ಯಾಂಕ್ ಸಾಲವನ್ನು ತೀರಿಸುತ್ತಾನೋ ಆಗ ಆತನ ಆಸ್ತಿ ಪತ್ರವನ್ನು ಹಿಂತಿರುಗಿಸಲಾಗುತ್ತದೆ.
ಸಾಲ ತೆಗೆದುಕೊಂಡ ವ್ಯಕ್ತಿಯ ಹಠಾತ್ ಮರಣ!
ಬಹುತೇಕ ಜನರಲ್ಲಿ ಈ ಪ್ರಶ್ನೆ ಇದ್ದೇ ಇರುತ್ತದೆ ಒಂದು ವೇಳೆ ನಾನು ಸಾಲ ತೆಗೆದುಕೊಂಡು ಅರ್ಥದಲ್ಲಿಯೇ ಮರಣ ಹೊಂದಿದರೆ ನನ್ನ ಮನೆಯವರೇ ಇದಕ್ಕೆ ಜವಾಬ್ದಾರರಾಗುತ್ತಾರೆ ಎನ್ನುವ ಆತಂಕ ಇರಬಹುದು. ಆದರೆ ಇದಕ್ಕೆ ಬ್ಯಾಂಕ್ ಪೂರ್ವಸಿದ್ಧತೆ ಮಾಡಿಕೊಂಡಿರುತ್ತದೆ ಎಂಬುದನ್ನು ನೀವು ಗಮನಿಸಬೇಕು.
ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಈ ಸೇವೆ ಸಂಪೂರ್ಣ ಉಚಿತ! ಡಿ.14 ರವರೆಗೆ ಮಾತ್ರ ಸೌಲಭ್ಯ
ಗೃಹ ಸಾಲಕ್ಕೆ ವಿಮೆ (Home loan insurance)
ಯಾವುದೇ ಬ್ಯಾಂಕ್ ಗ್ರಾಹಕರಿಗೆ ಗೃಹ ಸಾಲವನ್ನು ನೀಡುವುದಕ್ಕೂ ಮೊದಲು, ವಿಮೆ ಮಾಡಿಸಿಕೊಳ್ಳುತ್ತದೆ. ಮುಂಬರುವ ಅಪಾಯವನ್ನ ತಗ್ಗಿಸಲು ಬ್ಯಾಂಕ್ ಹೋಂ ಲೋನ್ ಇನ್ಸೂರೆನ್ಸ್ (home loan insurance) ಅಥವಾ ಹೋಂ ಲೋನ್ ಪ್ರೊಟೆಕ್ಷನ್ ಪ್ಲಾನ್ (HLPP) (home loan protection plan) ಅನ್ನು ಪ್ರತಿ ಗ್ರಾಹಕರಿಗೆ ಮಾಡಿಸುತ್ತದೆ
ಈ ರೀತಿ ಮಾಡಿದಾಗ ವ್ಯಕ್ತಿ ಮರಣ ಹೊಂದಿದ ನಂತರ ಇನ್ಸೂರೆನ್ಸ್ ಮೂಲಕ ಗೃಹ ಸಾಲವನ್ನು ಬ್ಯಾಂಕ್ ಹಿಂಪಡೆಯುತ್ತದೆ. ಈ ಇನ್ಸೂರೆನ್ಸ್ ಮೊತ್ತವನ್ನು ಬ್ಯಾಂಕ್ ಇನ್ಸೂರೆನ್ಸ್ ಕಂಪನಿಯಿಂದ ತೆಗೆದುಕೊಳ್ಳುತ್ತದೆ.
ಗೃಹ ಸಾಲ ಮಾಡಿದ ವ್ಯಕ್ತಿ ಮರಣ ಹೊಂದಿದರೆ ಆತನ ಮನೆಯವರು ಗೃಹ ಸಾಲವನ್ನು ತೀರಿಸಬಹುದು, ಇದಕ್ಕಾಗಿ ಬ್ಯಾಂಕ್ ಮನೆಯವರನ್ನು ಕೂಡ ಸಂಪರ್ಕಿಸುತ್ತದೆ. ಒಂದು ವೇಳೆ ಆತನ ಕುಟುಂಬದವರು ಗೃಹ ಸಾಲ ತೀರಿಸಲು ಸಮರ್ಥರಾಗಿಲ್ಲದೆ ಇದ್ದಲ್ಲಿ ಇನ್ಸೂರೆನ್ಸ್ ಹಣವನ್ನು ಬಳಸಿಕೊಳ್ಳಲಾಗುತ್ತದೆ.
ಆಸ್ತಿ ಖರೀದಿಗೂ ಮುನ್ನ ದಾಖಲೆ ಅಸಲಿಯೋ ನಕಲಿಯೋ ಈ ರೀತಿ ಸುಲಭವಾಗಿ ಪರಿಶೀಲಿಸಿ
HLPP ಉಪಯೋಗ
ನಿರ್ದಿಷ್ಟವಾಗಿ ಗೃಹ ಸಾಲಕ್ಕಾಗಿ ವಿನ್ಯಾಸಗೊಂಡಿರುವ ಇನ್ಸೂರೆನ್ಸ್ ಪ್ಲಾನ್ ಇದಾಗಿದೆ. ಇದು ಟರ್ಮ್ ಇನ್ಸೂರೆನ್ಸ್ (term insurance) ಪಾಲಿಸಿಯಲ್ಲಿಯೂ ಅಳವಡಿಸಲಾಗಿದೆ. ಟರ್ಮ್ ಇನ್ಸೂರೆನ್ಸ್ ಪಾಲಿಸಿ ತೆಗೆದುಕೊಂಡಾಗ ಹೆಚ್ಚು ಹೆಚ್ಚು ಪ್ರೀಮಿಯಂ ಮೊತ್ತ (premium amount) ವನ್ನು ಪಾವತಿಸುವುದರ ಮೂಲಕ ಗೃಹ ಸಾಲದ ಇನ್ಸೂರೆನ್ಸ್ ಆಗಿ ಪಡೆದುಕೊಳ್ಳಬಹುದು.
HLPP ಎಲ್ಲಿ ಅವಧಿಯ ನಂತರದ ಹಣವನ್ನು ಕುಟುಂಬದವರಿಗೆ ನೀಡಲಾಗುತ್ತದೆ ಅವರು ಅದನ್ನು ಗೃಹ ಸಾಲಕ್ಕೆ ಜಮಾ ಮಾಡಬಹುದು. ಎಚ್ ಎಲ್ ಪಿ ಪಿ ಇಂದ ಯಾವುದೇ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ.
ಟರ್ಮ್ ಇನ್ಸೂರೆನ್ಸ್ ಆಫ್ ಪಾಲಿಸಿ ಪ್ರೀಮಿಯಂ ಅನ್ನು ಪ್ರತಿ ತಿಂಗಳು ಪಾವತಿ ಮಾಡಬಹುದು, ಆದರೆ ಹೆಚ್ ಎಲ್ ಪಿ ಪಿ ಪ್ರೀಮಿಯಂ ಅನ್ನು ಒಂದೇ ಬಾರಿ ಪಾವತಿ ಮಾಡಬೇಕಾಗುತ್ತದೆ. ಟರ್ಮ್ ಇನ್ಸೂರೆನ್ಸ್ ಪಾಲಿಸಿ ಮಾಡಿದರೆ ವ್ಯಕ್ತಿಯ ಮರಣದ ನಂತರ ಅದನ್ನು ಗೃಹ ಸಾಲಕ್ಕೆ ಜಮಾ ಮಾಡಲಾಗುತ್ತದೆ ಅಷ್ಟೇ ಅಲ್ಲದೆ ಇದು ಕುಟುಂಬದವರ ಆರ್ಥಿಕ ಭದ್ರತೆಯನ್ನು ಕೂಡ ಒದಗಿಸುತ್ತದೆ.
ದುಡ್ಡಿದೆ ಅಂತ ಇದಕ್ಕಿಂತ ಹೆಚ್ಚು ಆಸ್ತಿ, ಜಮೀನು ಖರೀದಿ ಮಾಡುವಂತಿಲ್ಲ! ಇಲ್ಲಿದೆ ಮಾಹಿತಿ
ದೈಹಿಕವಾಗಿ ಸಮಸ್ಯೆ ಆದರೆ ಆಕಸ್ಮಿಕ ಅಪಘಾತಗಳಾದರೆ, ಮಾರಣಾಂತಿಕ ಕಾಯಿಲೆಗಳು, ಬೆಂಕಿ ಅವಘಡ, ಮಾನವ ನಿರ್ಮಿತ ಅಪಘಾತಗಳು ಮೊದಲಾದವುಗಳಿಗೆ HLPP ಆಡ್ ಆನ್ ಪಾಲಿಸಿ ಖರೀದಿ ನೆರವಾಗುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿ ಮಾಡಿದರೆ ಆರೋಗ್ಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಟರ್ಮ್ ಇನ್ಸೂರೆನ್ಸ್ ಪಾಲಿಸಿಯನ್ನು ಬಳಸಿಕೊಳ್ಳಬಹುದಾಗಿದೆ.
ಪ್ರತಿಯೊಂದು ಬ್ಯಾಂಕುಗಳು (Banks) ಕೂಡ ಸೆಕ್ಯೂರಿಟಿ ಸಲುವಾಗಿ ಆಸ್ತಿ ಪತ್ರವನ್ನು (Property Documents) ಅಡವಿಟ್ಟುಕೊಳ್ಳುವಂತೆ ಇನ್ಸೂರೆನ್ಸ್ ಕೂಡ ಗ್ರಾಹಕರಿಂದ ಮಾಡಿಸುತ್ತವೆ. ದೊಡ್ಡ ಮೊತ್ತದ ಇನ್ಸೂರೆನ್ಸ್ ಆಗಿದ್ದರೆ ನೀವು ಪಾವತಿಸಬೇಕಾದ ಪ್ರೀಮಿಯಂ ಮೊತ್ತವು ಜಾಸ್ತಿ ಇರುತ್ತದೆ.
ಇಂತಹ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಗೃಹ ಸಾಲವನ್ನು ಪಡೆದುಕೊಂಡು ಆ ಸಾಲ ತೀರುವುದರ ಒಳಗೆ ಮರಣ ಹೊಂದಿದರೆ ಮನೆಯವರು ಜವಾಬ್ದಾರರಾಗಿದ್ದರೂ ಕೂಡ ಇನ್ಸೂರೆನ್ಸ್ ಹಣದ ಮೂಲಕ ಗೃಹ ಸಾಲವನ್ನು ತೀರಿಸಿಕೊಳ್ಳಬಹುದಾಗಿದೆ.
If the person who Took the Home Loan dies, who is responsible for paying the loan
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.