ತಪ್ಪಾಗಿ ಬೇರೆಯವರ ಫೋನ್‌ಪೇ ನಂಬರ್ಗೆ ಹಣ ಹಾಕಿದಾಗ, ವಾಪಸ್ ಪಡೆಯಲು ಹೀಗೆ ಮಾಡಿ
ಯುಪಿಐ ಪೇಮೆಂಟ್ (UPI payment) ಎನ್ನುವುದು ಇಂದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ, ಡಿಜಿಟಲ್ (digital) ಯುಗದಲ್ಲಿ ನಾವು ಅತ್ಯಂತ ಸುಲಭವಾಗಿ ಬ್ಯಾಂಕ್ (Bank) ಹೋಗದೆ ನಿಂತ ಜಾಗದಲ್ಲಿ ಯುಪಿಐ ಮೂಲಕ ಯಾವುದೇ ರೀತಿಯ ಪಾವತಿ ಮಾಡಬಹುದು
ಕ್ಷೀಪ್ರಗತಿಯಲ್ಲಿ ತಂತ್ರಜ್ಞಾನ (technology) ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕೇವಲ ನಗರದಲ್ಲಿ ಮಾತ್ರವಲ್ಲದೆ ಹಳ್ಳಿಯಲ್ಲಿಯೂ ಕೂಡ ಯುಪಿಐ ಮೂಲಕ ಸುಲಭವಾಗಿ ಪೇಮೆಂಟ್ ಮಾಡಿಕೊಳ್ಳಬಹುದಾಗಿದೆ.

ಒಂದು ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿಯೂ ಕೂಡ ನೀವು ಯಾವುದೇ ವಸ್ತು ಖರೀದಿ ಮಾಡಿದ್ರೆ ಕ್ಷಣ ಮಾತ್ರದಲ್ಲಿ ಪೇಮೆಂಟ್ (payment) ಮಾಡಬಹುದು
ಈಗಂತೂ ಯುಪಿಐ ಪೇಮೆಂಟ್ (UPI payment) ಮಾದರಿಯನ್ನು ಇನ್ನಷ್ಟು ಸುಲಭಗೊಳಿಸಿದೆ. ಇಂಟರ್ನೆಟ್ ಇಲ್ಲದೆ, ಪಿನ್ ಬಳಸದೆ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ (QR code scan) ಮಾಡುವ ಮೂಲಕ ಪೇಮೆಂಟ್ ಮಾಡಿ ಮುಗಿಸಬಹುದು.
ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಈ ಸೇವೆ ಸಂಪೂರ್ಣ ಉಚಿತ! ಡಿ.14 ರವರೆಗೆ ಮಾತ್ರ ಸೌಲಭ್ಯ
ಯುಪಿಐ ಪೇಮೆಂಟ್ ಬೇರೆಯವರ ಖಾತೆಗೆ ಹೋಗಬಹುದು ಎಚ್ಚರ!
ಇಂದಿಗೂ ಕೂಡ ಸಾಕಷ್ಟು ಜನರಿಗೆ ಯುಪಿಐ ಮೂಲಕ ಹಣ ಪೇಮೆಂಟ್ ಮಾಡಲು ಭಯವಾಗುತ್ತದೆ. ಇದಕ್ಕೆ ಮುಖ್ಯವಾದ ಕಾರಣ ಕೆಲವೊಮ್ಮೆ ನಾವು ಯಾರಿಗೋ ಹಣ ಹಾಕಲು ಹೋಗಿ ಇನ್ಯಾರಿಗೂ ಹಣ ವರ್ಗಾವಣೆ ಆಗುತ್ತದೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಇಷ್ಟು ಸಮಸ್ಯೆ ಇರುವುದಿಲ್ಲ.
ಆದರೆ ನೀವು ಮೊಬೈಲ್ ನಂಬರ್ (mobile number) ಹಾಕಿ ಪೇಮೆಂಟ್ ಮಾಡುವಾಗ ಒಂದು ಸಂಖ್ಯೆ ತಪ್ಪಾದರೂ ಬೇರೆಯವರ ಖಾತೆಗೆ (Bank Account) ಹಣ ವರ್ಗಾವಣೆ ಆಗಬಹುದು
ಹಾಗೆ ಒಂದು ವೇಳೆ ತಪ್ಪಾಗಿ ಬೇರೆಯವರ ಖಾತೆಗೆ ಹಣ ಹೋದರೆ ಅಯ್ಯೋ ಹಣ ಹೋಯಿತಲ್ಲ ಅಂತ ಚಿಂತೆ ಮಾಡುವ ಅಗತ್ಯವಿಲ್ಲ ತಕ್ಷಣವೇ ನೀವು ಕೆಲವು ಪ್ರಮುಖ ಹಂತಗಳ ಮೂಲಕ ನಿಮ್ಮ ಹಣ ವಾಪಸ್ ಬರುವಂತೆ ಮಾಡಿಕೊಳ್ಳಬಹುದು.
ದುಡ್ಡಿದೆ ಅಂತ ಇದಕ್ಕಿಂತ ಹೆಚ್ಚು ಆಸ್ತಿ, ಜಮೀನು ಖರೀದಿ ಮಾಡುವಂತಿಲ್ಲ! ಇಲ್ಲಿದೆ ಮಾಹಿತಿ
ಬೇರೆಯವರ ಖಾತೆಗೆ ಹಣ ಹೋದರೆ ಹಿಂಪಡೆಯುವುದು ಹೇಗೆ?
ಒಂದು ವೇಳೆ ನೀವು ಪಾವತಿ ಮಾಡುವಾಗ ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಹಣ ಹೋದರೆ ಮೊಟ್ಟ ಮೊದಲಿಗೆ ಮಾಡಬೇಕಾದ ಕೆಲಸ, ನೀವು ಯಾವ ಬ್ಯಾಂಕ್ ನ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತೀರೋ ಆ ಬ್ಯಾಂಕ್ ನ ಕಸ್ಟಮರ್ ಕೇರ್ (Bank customer care) ಗೆ ಮಾಹಿತಿ ನೀಡಬೇಕು ಅಥವಾ ಯುಪಿಐ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬಹುದು.
ಈ ಬಗ್ಗೆ ಆರ್ ಬಿ ಐ (RBI) ಮಹತ್ವದ ಸೂಚನೆ ನೀಡಿದ್ದು ನಿಮ್ಮ ಹಣ ಬೇರೆಯವರ ಖಾತೆಗೆ ಹೋದಾಗ ತಕ್ಷಣ ಯುಪಿಐ ಸೇವಾ ಕೇಂದ್ರವನ್ನು ಸಂಪರ್ಕಿಸಿ ಅವರಿಗೆ ಯಾವ ರೀತಿ ತಪ್ಪಾಗಿ ಹಣ ವರ್ಗಾವಣೆ ಆಗಿದೆ ಎಂಬ ಮಾಹಿತಿ ನೀಡಬೇಕು.
ಇಷ್ಟೇ ಅಲ್ಲದೆ ನೀವು NPCI ಅಧಿಕೃತ ವೆಬ್ಸೈಟ್ಗೆ ಹೋಗಿ ದೂರು ನೀಡಬಹುದು. ನಿಮ್ಮ ಹೆಸರು ಮೊಬೈಲ್ ಸಂಖ್ಯೆ, UPI ID, ಬ್ಯಾಂಕ್ ಖಾತೆ ಸಂಖ್ಯೆ, ಯಾರ ಖಾತೆಗೆ ಹಣ ಹೋಗಿದೆ, ಎಷ್ಟು ಹಣ ವರ್ಗಾವಣೆ ಆಗಿದೆ ಎಂಬ ಎಲ್ಲ ಮಾಹಿತಿಗಳನ್ನು ನೀಡಬೇಕು.
ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ
ನೀವು ತಪ್ಪಾಗಿ ಹಣಕಾಸಿನ ವ್ಯವಹಾರ ಮಾಡಿದ ಮೂರು ದಿನಗಳ ಒಳಗೆ ದೂರು ಸಲ್ಲಿಕೆ ಮಾಡಬೇಕು. ಹೀಗೆ ಮಾಡಿದರೆ ಕೇವಲ 30 ದಿನಗಳಲ್ಲಿ ನಿಮ್ಮ ಹಣ ನಿಮ್ಮ ಖಾತೆಗೆ ಹಿಂತಿರುಗುತ್ತದೆ.
ಇಷ್ಟು ಪ್ರಯತ್ನ ಮಾಡಿಯೂ ಹಣ ಪಡೆಯಲು ಸಾಧ್ಯವಾಗದೆ ಇದ್ದರೆ ನೇರವಾಗಿ ಬ್ಯಾಂಕ್ ಮ್ಯಾನೇಜರ್ (bank manager) ಅನ್ನು ಸಂಪರ್ಕಿಸಬಹುದು. ಬ್ಯಾಂಕ್ ನಲ್ಲಿ ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿರುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು.
ಯಾವ ಸಂಖ್ಯೆಗೆ ನೀವು ಹಣ ವರ್ಗಾವಣೆ ಮಾಡಿದ್ದೀರಿ ಎಂಬುದನ್ನು ಲಿಖಿತ ರೂಪದಲ್ಲಿ ತಿಳಿಸಿದರೆ ತಕ್ಷಣವೇ ಕಾರ್ಯ ಪ್ರವೃತ್ತವಾಗುವ ಬ್ಯಾಂಕ್ ನಿಮ್ಮ ಖಾತೆಯಿಂದ ಹೋಗಿರುವ ಹಣವನ್ನು ವಾಪಸ್ ಬರುವಂತೆ ಮಾಡಲು ಸಹಾಯ ಮಾಡುತ್ತದೆ.
ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ (net banking) ಮೂಲಕ ಹಣ ತಪ್ಪಾಗಿ ವರ್ಗಾವಣೆ ಆದರೆ ಬ್ಯಾಂಕಿನ ಟೂಲ್ ಫ್ರೀ ಸಂಖ್ಯೆ 18001201740 ಕರೆ ಮಾಡಿ ದೂರು (complaint) ನೀಡಬಹುದು. ನಿಮ್ಮ ಪಾವತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸರಿಯಾಗಿ ನೀಡಿದರೆ ನಿಮ್ಮ ಹಣ ಹಿಂಪಡೆಯಲು ಸಹಾಯವಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೋ ಇಲ್ವೋ? ಈ ರೀತಿ ಪರಿಶೀಲಿಸಿ
ಈ ಮೇಲಿನ ಯಾವುದೇ ಹಂತದಲ್ಲಿ ನೀವು ನಿಮ್ಮ ಯುಪಿಐ ಪೇಮೆಂಟ್ ಮಿಸ್ ಆಗಿದ್ದರೆ ಪುನಃ ಅದು ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು. ಆದರೂ ಯುಪಿಐ ಪೇಮೆಂಟ್ ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು.
ಈಗ ಕ್ಷಣಮಾತ್ರದಲ್ಲಿ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ತಪ್ಪಾಗಿ ಪೇಮೆಂಟ್ ಆಗುವುದರ ಬಗ್ಗೆ ಗಮನ ಕೊಡುವುದಿಲ್ಲ ಒಂದು ವೇಳೆ ಮೊಬೈಲ್ ಸಂಖ್ಯೆ ತಪ್ಪಾಗಿದ್ದರೆ ಅಥವಾ ಇತರ ಯುಪಿಐ ಐಡಿ ತಪ್ಪಾಗಿದ್ದರೆ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಪೇಮೆಂಟ್ ಮಾಡುವ ಮೊದಲು ಯಾರಿಗೆ ಪೇಮೆಂಟ್ ಮಾಡುತ್ತೀರಿ ಎಂಬುದನ್ನು ಕ್ರಾಸ್ ಚೆಕ್ ಮಾಡಿಕೊಳ್ಳಿ.
When you pay to a wrong phonepe number, here’s how to get Back Your Money