ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಈ ಸೇವೆ ಸಂಪೂರ್ಣ ಉಚಿತ! ಡಿ.14 ರವರೆಗೆ ಮಾತ್ರ ಸೌಲಭ್ಯ

ಆಧಾರ್ ಕಾರ್ಡ್ ತಪ್ಪುಗಳನ್ನು ತಿದ್ದುಪಡಿ (Aadhaar Card update) ಮಾಡಿಕೊಳ್ಳಲು ಕೂಡ ಅವಕಾಶ ನೀಡಲಾಗಿದ್ದು ತಕ್ಷಣವೇ ಆ ಕೆಲಸವನ್ನು ಮಾಡಿಕೊಳ್ಳಿ.

ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾಗಿರುವ ದಾಖಲೆಯಾಗಿರುವುದರಿಂದ ನೀವು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ ಈ ಯಾವುದೇ ವಿಚಾರದಲ್ಲಿ ಸ್ವಲ್ಪ ತಪ್ಪಿರದಂತೆ ನೋಡಿಕೊಳ್ಳಬೇಕು

ಇದಕ್ಕಾಗಿ ಆಧಾರ್ ಕಾರ್ಡ್ ತಪ್ಪುಗಳನ್ನು ತಿದ್ದುಪಡಿ (Aadhaar Card update) ಮಾಡಿಕೊಳ್ಳಲು ಕೂಡ ಅವಕಾಶ ನೀಡಲಾಗಿದ್ದು ತಕ್ಷಣವೇ ಆ ಕೆಲಸವನ್ನು ಮಾಡಿಕೊಳ್ಳಿ.

ಪ್ಯಾನ್ ಕಾರ್ಡ್ ಕುರಿತಂತೆ ರಾತ್ರೋರಾತ್ರಿ ಮಹತ್ವದ ಬದಲಾವಣೆ; ನಿಯಮಗಳ ಸರಳೀಕರಣ

ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಈ ಸೇವೆ ಸಂಪೂರ್ಣ ಉಚಿತ! ಡಿ.14 ರವರೆಗೆ ಮಾತ್ರ ಸೌಲಭ್ಯ - Kannada News

ಆಧಾರ್ ತಿದ್ದುಪಡಿ ಮಾಡುವುದು ಹೇಗೆ? (How to do Aadhaar Card update)

ತಿದ್ದುಪಡಿಯಲ್ಲಿ ಬೇಕಾಗಿರುವ ಬದಲಾವಣೆಗಳನ್ನು ಮಾಡಲು ನೀವು ಯಾವುದೇ ಆಧಾರ್ ಕೇಂದ್ರಗಳಿಗೆ ಹೋಗಿ ಸಮಯ ವ್ಯರ್ಥ ಮಾಡಬೇಕಿಲ್ಲ. ಯು ಐ ಡಿ ಎ ಐ ನ (UIDAI) ಅಧಿಕೃತ ವೆಬ್ಸೈಟ್ನಲ್ಲಿ ಬೇಕಾಗಿರುವ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ

ಇದನ್ನು ಹೊರತುಪಡಿಸಿ ಆಧಾರ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಯಾವುದೇ ಬದಲಾವಣೆಗಳು ಅಥವಾ ಆಧಾರ್ ಕಾರ್ಡ್ ಬಗ್ಗೆ ನಿಮಗಿರುವ ಸಂಶಯಗಳನ್ನು ಕೂಡ ನಿವಾರಿಸಿಕೊಳ್ಳಲು ಯುಐಡಿಎಐ ಒಂದು ಪ್ರಮುಖ ಟೋಲ್ ಫ್ರೀ ಸಂಖ್ಯೆಯನ್ನು (toll free number) ನೀಡಿದೆ. ಇದರ ಮೂಲಕ ನೀವು ಸುಲಭವಾಗಿ ನಿಮ್ಮ ಯಾವುದೇ ಪ್ರಶ್ನೆಗಳಿದ್ದರೂ ಕೇಳಿ ಪರಿಹರಿಸಿಕೊಳ್ಳಬಹುದು.

ಆಸ್ತಿ ಖರೀದಿಗೂ ಮುನ್ನ ದಾಖಲೆ ಅಸಲಿಯೋ ನಕಲಿಯೋ ಈ ರೀತಿ ಸುಲಭವಾಗಿ ಪರಿಶೀಲಿಸಿ

12 ಭಾಷೆಗಳಲ್ಲಿ ಮಾಹಿತಿ ಲಭ್ಯ

Aadhaar Card
Image Source: Mint

ಯು ಐ ಡಿ ಎ ಐ ಉಚಿತ ಸಹಾಯವಾಣಿ ಸಂಖ್ಯೆ 1947. ಇದಕ್ಕೆ ಕರೆ ಮಾಡಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದು

ಪ್ರಮುಖ 12 ಭಾಷೆಗಳಲ್ಲಿ ನಿಮಗೆ ಮಾಹಿತಿಯನ್ನು ನೀಡಲಾಗುತ್ತದೆ. ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಉರ್ದು, ಮಲಯಾಳಂ, ಪಂಜಾಬಿ, ಗುಜರಾತಿ, ಬೆಂಗಾಲಿ, ಅಸ್ಸಾಮಿ, ಒರಿಯಾ ಹೀಗೆ 12 ಭಾಷೆಗಳಲ್ಲಿ ಪ್ರತಿನಿಧಿಗಳು ನಿಮ್ಮೊಂದಿಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿ ನೀಡಲು ಮಾತನಾಡುತ್ತಾರೆ.

ದುಡ್ಡಿದೆ ಅಂತ ಇದಕ್ಕಿಂತ ಹೆಚ್ಚು ಆಸ್ತಿ, ಜಮೀನು ಖರೀದಿ ಮಾಡುವಂತಿಲ್ಲ! ಇಲ್ಲಿದೆ ಮಾಹಿತಿ

ಹತ್ತಿರದ ಆಧಾರ್ ಕೇಂದ್ರಗಳು, ಆಧಾರ್ ಕಾರ್ಡ್ ನ ನೋಂದಣಿ ಸ್ಥಿತಿ, ಆಧಾರ್ ಕಾರ್ಡ್ ವಿತರಣಾ ಸ್ಥಿತಿ ಹೀಗೆ ಬೇಕಾಗಿರುವ ಎಲ್ಲಾ ಮಾಹಿತಿಗಳನ್ನು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿನಿಧಿಗಳು ನಿಮ್ಮೊಂದಿಗೆ ಮಾಹಿತಿ ನೀಡಲು ಲಭ್ಯವಿರುತ್ತಾರೆ. ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ರ ವರೆಗೆ ಕಸ್ಟಮರ್ ಕೇಂದ್ರಗಳು ತೆರೆದಿದ್ದು ಭಾನುವಾರವೂ ಕೂಡ ನೀವು ಆಧಾರಿತ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಮೈ ಆಧಾರ್ ವೆಬ್ಸೈಟ್! (My Aadhaar website)

ಅಷ್ಟೇ ಅಲ್ದೆ ಆಧಾರ್ ಸಂಬಂಧಪಟ್ಟ ಹಾಗೆ ಯಾವುದೇ ಕಂಪ್ಲೇಂಟ್ ಇದ್ದರೂ ಕೂಡ ಮೈ ಆಧಾರ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ನೀವು ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಜೊತೆಗೆ ಆಧಾರ್ ಕಾರ್ಡ್ ನ ನವೀಕರಣವನ್ನು ಮಾಡಿಕೊಳ್ಳಬಹುದಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆಧಾರ್ ಕಾರ್ಡ್ ನವೀಕರಣಕ್ಕೆ ಡಿಸೆಂಬರ್ 14 ಕೊನೆಯ ದಿನಾಂಕವಾಗಿದ್ದು ಬೇಗ ಈ ಕೆಲಸವನ್ನು ಮಾಡಿಕೊಳ್ಳಿ ಎಂದು ಸರ್ಕಾರ ತಿಳಿಸಿದೆ.

ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ

this service is completely free for Aadhaar card Holders

Follow us On

FaceBook Google News

this service is completely free for Aadhaar card Holders