ಪ್ಯಾನ್ ಕಾರ್ಡ್ ಕುರಿತಂತೆ ರಾತ್ರೋರಾತ್ರಿ ಮಹತ್ವದ ಬದಲಾವಣೆ; ನಿಯಮಗಳ ಸರಳೀಕರಣ

ಆಧಾರ್ ಕಾರ್ಡ್ (Aadhaar Card) ನಂತೆ ಪ್ಯಾನ್ ಕಾರ್ಡ್ (PAN Card) ಕೂಡ ಬಹಳ ಮಹತ್ವದ ದಾಖಲೆಯಾಗಿದೆ, ಸರ್ಕಾರಿ ಹಾಗೂ ಸರಕಾರದ ಕೆಲಸಕ್ಕೆ ಪ್ಯಾನ್ ಕಾರ್ಡ್ ಅಗತ್ಯವಾಗಿ ಬೇಕು

ಆಧಾರ್ ಕಾರ್ಡ್ (Aadhaar Card) ನಂತೆ ಪ್ಯಾನ್ ಕಾರ್ಡ್ (PAN Card) ಕೂಡ ಬಹಳ ಮಹತ್ವದ ದಾಖಲೆಯಾಗಿದೆ, ಸರ್ಕಾರಿ ಹಾಗೂ ಸರಕಾರದ ಕೆಲಸಕ್ಕೆ ಪ್ಯಾನ್ ಕಾರ್ಡ್ ಅಗತ್ಯವಾಗಿ ಬೇಕು

ಅದರಲ್ಲೂ ಯಾವುದೇ ರೀತಿಯ ಆದಾಯ ತೆರಿಗೆ ಪಾವತಿ ಮಾಡಲು ಹಾಗೂ ಇತರ ಹಣಕಾಸಿನ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ನೀಡದೆ ಇದ್ದಲ್ಲಿ ಯಾವ ವ್ಯವಹಾರವನ್ನು ಮಾಡಲು ಸಾಧ್ಯವಿಲ್ಲ.

ಪ್ಯಾನ್ ಕಾರ್ಡ್ ಬಳಕೆಯ ಬಗ್ಗೆ ಅದರದ್ದೇ ನಿಯಮಗಳು ಇವೆ. ಈಗ ಈ ನಿಯಮಗಳಲ್ಲಿ ಸಣ್ಣ ಬದಲಾವಣೆಗಳನ್ನು ತರಲಾಗಿದ್ದು ಇದರಿಂದ ಜನರಿಗೆ ವ್ಯವಹಾರ ಮಾಡಲು ಇನ್ನಷ್ಟು ಸುಲಭವಾಗಿದೆ ಎನ್ನಬಹುದು.

Central government has implemented new rules on PAN card

ಆಸ್ತಿ ಖರೀದಿಗೂ ಮುನ್ನ ದಾಖಲೆ ಅಸಲಿಯೋ ನಕಲಿಯೋ ಈ ರೀತಿ ಸುಲಭವಾಗಿ ಪರಿಶೀಲಿಸಿ

ನಿಯಮ ಬದಲಾಯಿಸಿದ SEBI!

ಷೇರು ಮಾರುಕಟ್ಟೆಗಳನ್ನು (stock market) ನಿಯಂತ್ರಿಸುವ ಸಂಸ್ಥೆ ಸೆಬಿ. (Securities and Exchange Board of India (SEBI) ಷೇರು ಮಾರುಕಟ್ಟೆಯ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.

ಕಾಗದದ ರೂಪದಲ್ಲಿ ಶೇರು ಭದ್ರತೆ ಹೊಂದಿರುವವರಿಗೆ ನಿಯಮ ಬದಲಾವಣೆ ಮಾಡಲಾಗಿದೆ, ಪ್ಯಾನ್ ಕಾರ್ಡ್ ಕೆ ವೈ ಸಿ (EKYC) ಇಲ್ಲದೆ ಇರುವ ಭದ್ರತೆಗಳನ್ನು ನಿಷೇಧಿಸಲಾಗುವುದು ಎನ್ನುವ ನಿಯಮವನ್ನು ಸೆಬಿ ಹಿಂಪಡೆದಿದೆ.

ಸಾಕಷ್ಟು ಹೂಡಿಕೆದಾರರ (investors), ಭಾರತೀಯ ರಿಜಿಸ್ಟ್ರಾರ್ ಅಸೋಸಿಯೇಷನ್ (Indian register association) ಮನವಿಯ ಆಧಾರದ ಮೇಲೆ ಸೆಬಿ ಈ ನಿರ್ಧಾರವನ್ನು ಕೈಗೊಂಡಿದೆ. ಈ ಹಿಂದೆ ಯಾವುದೇ ಕಾಗದ ರೂಪದ ಶೇರು ಹೊಂದಿರುವವರು ತಿಂಗಳಿನ ಒಳಗೆ ಡಿಮ್ಯಾಟ್ ಮಾಡಿಸಿಕೊಳ್ಳಬೇಕು ಎಂದು ಸೆಬಿ ಆದೇಶ ಹೊರಡಿಸಿತು ಈಗ ನಿರ್ಧಾರವನ್ನ ಕೈ ಬಿಡಲಾಗಿದೆ.

ದುಡ್ಡಿದೆ ಅಂತ ಇದಕ್ಕಿಂತ ಹೆಚ್ಚು ಆಸ್ತಿ, ಜಮೀನು ಖರೀದಿ ಮಾಡುವಂತಿಲ್ಲ! ಇಲ್ಲಿದೆ ಮಾಹಿತಿ

ಪೋಲಿಯೋ ಸಂಖ್ಯೆಗೆ ಸಹಿ ಕಡ್ಡಾಯ!

Pan Cardಸೆಬಿಯ ನಿಯಮದ ಪ್ರಕಾರ ಇನ್ನು ಮುಂದೆ ಯಾವುದೇ ನಾಮ ನಿರ್ದೇಶನಗಳು ಪಾನ್ ಕಾರ್ಡ್, ಸಂಪರ್ಕ ವಿವರಗಳು ಬ್ಯಾಂಕ್ ಖಾತೆಗಳು (Bank Account) ಮೊದಲಾದ ನಿರ್ವಹಣೆಗೆ ‘ಪೋಲಿಯೋ’ ಸಂಖ್ಯೆಗೆ ಸಹಿ (signature mandatory) ಮಾಡುವುದು ಕಡ್ಡಾಯ ಎಂದು ಹೇಳಲಾಗಿದೆ.

ಆಂಟಿ ಮನಿ ಲ್ಯಾಂಡರಿಂಗ್ ಕಾಯ್ದೆ (anti money laundering act) ಅಥವಾ ಬೇನಾಮಿ ವಹಿವಾಟು ಕಾಯ್ದೆ 1988, ಅಡಿಯಲ್ಲಿ ವಿಧಿಸಲಾದ ಷೇರು ಮೇಲಿನ ನಿಷೇಧವನ್ನು ಹೂಡಿಕೆದಾರರು ಹಾಗೂ ಭಾರತೀಯ ರಿಜಿಸ್ಟ್ರಾರ್ ಅಸೋಸಿಯೇಷನ್ ನಿಂದ ಮಾಹಿತಿ ಪಡೆದ ಬಳಿಕ ತೆಗೆದುಹಾಕಲಾಗಿದೆ ಎಂದು ಸೆಬಿ ಸ್ಪಷ್ಟನೆ ನೀಡಿದೆ ಇದರಿಂದ ಹೂಡಿಕೆದಾರರಿಗೆ ಶೇರು ವಿಚಾರದಲ್ಲಿ ಇನ್ನಷ್ಟು ಸಡಿಲಿಕೆ ಸಿಕ್ಕಂತಾಗಿದೆ.

ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ

Significant changes regarding PAN card, Simplification of rules

Related Stories