Business News

ಆಸ್ತಿ ಖರೀದಿಗೂ ಮುನ್ನ ದಾಖಲೆ ಅಸಲಿಯೋ ನಕಲಿಯೋ ಈ ರೀತಿ ಸುಲಭವಾಗಿ ಪರಿಶೀಲಿಸಿ

ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಮಾಡುವುದಿದ್ದರೆ (investment on property) ಹಣವನ್ನು ಚಿನ್ನದ ಮೇಲೆ (investment on gold) ಆಸ್ತಿ ಖರೀದಿಯ ಮೇಲೆ ಹೂಡಿಕೆ ಮಾಡಬಹುದು ಅಥವಾ ಬ್ಯಾಂಕ್ ನಲ್ಲಿ ಎಫ್ ಡಿ (Fixed Deposit) ಇಡಬಹುದು

ಆದರೆ ನಿಜವಾಗಿ ಉತ್ತಮ ವಿಧಾನ ಅಂದರೆ ಆಸ್ತಿ ಖರೀದಿ (Property Purchase) ಮಾಡುವುದು, ಯಾಕೆಂದರೆ ನೀವು ಒಮ್ಮೆ ಆಸ್ತಿ ಖರೀದಿ ಮಾಡಿದರೆ ಅದನ್ನ ಮಾರಾಟ ಮಾಡುವುದಿದ್ದರೆ ಅದಕ್ಕೆ ದುಪ್ಪಟ್ಟು ಹಣವನ್ನು ಹಿಂಪಡೆಯಬಹುದು.

Henceforth, no house, site or anything can be bought without these documents

ಹಾಗಾಗಿ ಹಣ ಉಳಿತಾಯ (Savings) ಮಾಡಲು ಅಥವಾ ನೀವು ದುಡಿದ ಹಣವನ್ನು ಆಸ್ತಿ ಖರೀದಿಗಾಗಿ ಖರ್ಚು ಮಾಡಿದರೆ ಅದರಿಂದ ನಿಮಗೆ ಲಾಭವೇ ಹೆಚ್ಚು.

ಆಸ್ತಿ ಖರೀದಿ ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆಯನ್ನ ಪಡೆದುಕೊಳ್ಳುತ್ತಿದೆ, ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಆಸ್ತಿಯ ಬೆಲೆ (property cost) ಕೂಡ ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ಬಳಿ ಇರುವ ಜಮೀನು ಮಾರಾಟ (Land Sale) ಮಾಡಲು ಬಯಸಿದರೆ ಅದಕ್ಕೆ ಮೂರು ಪಟ್ಟು ಹೆಚ್ಚು ಹಣವನ್ನು ಕೊಟ್ಟು ಖರೀದಿ ಮಾಡುವವರು ಇದ್ದಾರೆ.

ದುಡ್ಡಿದೆ ಅಂತ ಇದಕ್ಕಿಂತ ಹೆಚ್ಚು ಆಸ್ತಿ, ಜಮೀನು ಖರೀದಿ ಮಾಡುವಂತಿಲ್ಲ! ಇಲ್ಲಿದೆ ಮಾಹಿತಿ

ಆಸ್ತಿ ಖರೀದಿ ಮುನ್ನ ಎಚ್ಚರಿಕೆ ವಹಿಸಿ (careful while purchase a property)

ಆಸ್ತಿ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಎಲ್ಲಿ ಸಿಗುತ್ತೋ ಅಲ್ಲಿ ಆಸ್ತಿ ಖರೀದಿ ಮಾಡಲು ಜನ ಮುಗಿಬೀಳುತ್ತಾರೆ, ಆದರೆ ಇಂತಹ ಸಂದರ್ಭದಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತದೆ. ಹಾಗಾಗಿ ಆಸ್ತಿ ಖರೀದಿಗೂ ಮುನ್ನ ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಆಸ್ತಿ ಖರೀದಿ ಮಾಡುವಾಗ ಆಸ್ತಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು (Property Documents) ಸರಿಯಾಗಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ ಗೊತ್ತಿದ್ದವರ ಬಳಿ ಆಸ್ತಿ ಪತ್ರವನ್ನು ಕೊಟ್ಟು ಅದು ನಕಲಿಯೋ ಅಥವಾ ಅಸಲಿ ಆಸ್ತಿ (fake and real property papers) ಪತ್ರವೋ ಎಂಬುದನ್ನು ತಿಳಿದುಕೊಳ್ಳಿ.

ಡಿ.14ರ ಒಳಗೆ ಈ ಕೆಲಸ ಮಾಡದೆ ಇದ್ರೆ ಆಧಾರ್ ಕಾರ್ಡ್ ಬಳಕೆ ಮಾಡಲು ಸಾಧ್ಯವಿಲ್ಲ

ಆಸ್ತಿ ದಾಖಲೆ ಪರಿಶೀಲಿಸುವುದು

Property Documentsನೀವು ಖರೀದಿಸಲು ಬಯಸುವ ಭೂಮಿ ಅಥವಾ ಆಸ್ತಿ ಅಸಲಿ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ, ಅದಕ್ಕಾಗಿ  registered ದಾಖಲೆಗಳನ್ನು ಪರಿಶೀಲಿಸಬೇಕು.

ನೀವು ಖರೀದಿಸುವ ಭೂಮಿ ವಂಚನೆಗೆ ಒಳಗಾಗಿದ್ದು ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು, ನಿಮಗೆ ಯಾರು ಆಸ್ತಿಯನ್ನು ಮಾರಾಟ ಮಾಡುತ್ತಾರೆ ಅವರಿಗೆ ಆಸ್ತಿ ಹೇಗೆ ಸಿಕ್ಕಿದ್ದು ಅದರ ಮೂಲ ಮಾಲೀಕರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು.

ಇನ್ನು ಮುಖ್ಯವಾಗಿ ಜಮೀನು ಖರೀದಿಸುವುದಕ್ಕೂ ಮೊದಲು ಆ ಭೂಮಿ ಸರ್ಕಾರಿ ಸ್ವಾಮ್ಯದ್ದೇ ಅಥವಾ ಖಾಸಗಿಯದ್ದೇ ಎಂಬುದನ್ನು ತಿಳಿದುಕೊಳ್ಳಿ ಒಂದು ವೇಳೆ ಸರ್ಕಾರಿ ಸ್ವಾಮ್ಯದ ಆಸ್ತಿಯನ್ನು ಬೇರೆಯವರು ತಮ್ಮದೇ ಎಂದು ಹೇಳಿಕೊಂಡು ಮಾರಾಟ ಮಾಡಲು ಪ್ರಯತ್ನಿಸಿ ನೀವು ಅದನ್ನು ಖರೀದಿ ಮಾಡಿದರೆ ನಂತರ ಸರ್ಕಾರ ಆ ಜಮೀನನ್ನು ಹಿಂಪಡೆಯುವ ಸಾಧ್ಯತೆ ಇರುತ್ತದೆ.

ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟುಕೊಳ್ಳಬಹುದು? ಇದಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ

ಆಗ ನೀವು ಸಂಪೂರ್ಣ ಹಣವನ್ನು ಕಳೆದುಕೊಳ್ಳುತ್ತೀರಿ. 41 45 ಏಕೀಕರಣದ ದಾಖಲೆಗಳ ಮೂಲಕ ಭೂಮಿಯ ವಾಸ್ತವ ಮಾಲೀಕರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ರೈಲ್ವೆ ಇಲಾಖೆಗೆ ಅಥವಾ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಖಾಸಗಿ ಜಮೀನಾಗಿ ಪರಿವರ್ತಿಸಿಕೊಂಡು ಮಾರಾಟ ಮಾಡುವವರು ಸಾಕಷ್ಟು ಜನ ಇದ್ದಾರೆ, ಆದರೆ ಇದರ ಮೂಲ ಮಾಲೀಕ ಸರ್ಕಾರವೇ ಆಗಿರುವುದರಿಂದ ಯಾವಾಗ ಬೇಕಾದರೂ ಆ ಆಸ್ತಿಯನ್ನು ಹಿಂಪಡೆಯಬಹುದು.

ಆಸ್ತಿ ಖರೀದಿಗೂ ಮೊದಲು ಆ ಆಸ್ತಿಯ ಮೇಲೆ ಯಾವುದಾದರೂ ಸಾಲ (Loan on Property) ಅಥವಾ ಕಾನೂನಿಗೆ ಸಂಬಂಧಪಟ್ಟ ಲೇವಾದೇವಿ ವ್ಯವಹಾರ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು.

ವಿವಾದಕ್ಕೆ ಒಳಗಾಗಿರುವ ಆಸ್ತಿಯನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬೇಡಿ ಯಾಕೆಂದರೆ ಖರೀದಿ ಮಾಡಿ ಎಷ್ಟು ವರ್ಷಗಳ ನಂತರವೂ ಕೂಡ ಅದೇ ಜಮೀನಿಗೆ ಮತ್ತೆ ತಕರಾರು ಅರ್ಜಿ ಸಲ್ಲಿಸಿ ನಿಮ್ಮ ಆಸ್ತಿಯನ್ನು ಸಂಬಂಧಪಟ್ಟವರು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ನೀವು ನೂರು ಬಾರಿ ವಿಚಾರ ವಿಮರ್ಶೆ ಮಾಡಿ ಖರೀದಿ ಮಾಡಬೇಕು, ಇಲ್ಲವಾದರೆ ಕೂಡಿಟ್ಟ ಹಣವನ್ನೆಲ್ಲ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.

ನಿಮ್ಮ ಬ್ಯಾಂಕ್ ಖಾತೆ ಆಧಾರ್‌ನೊಂದಿಗೆ ಲಿಂಕ್ ಆಗಿದೆಯೋ ಇಲ್ವೋ? ಈ ರೀತಿ ಪರಿಶೀಲಿಸಿ

Before buying a property, check whether the document is genuine or fake

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories