ಸ್ವಂತ ಜಮೀನು, ಆಸ್ತಿ ದಾಖಲೆಗಳನ್ನು ಪಡೆಯುವುದು ಇನ್ನು ಸುಲಭ, ಮೊಬೈಲ್ ನಲ್ಲೇ ಎಲ್ಲಾ!

ಭೂಮಿ ದಾಖಲೆಗಳಿಗೆ (Property Documents) ಸಂಬಂಧಿಸಿದ ಹಾಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ ರಾಜ್ಯ ಸರ್ಕಾರ. ಹೆಚ್ಚುತ್ತಿರುವ ಸ್ಕ್ಯಾಮ್ ಗಳು ಕೂಡ ಇದರಿಂದ ಕಡಿಮೆ ಆಗಲಿದೆ.

ಪ್ರತಿದಿನ ಮಾಧ್ಯಮಗಳಲ್ಲಿ ನೋಡಿದರೆ ಆಸ್ತಿ (Property), ಜಾಗ ಇವುಗಳಿಗೆ ಸಂಬಂಧಿಸಿದ ಹಾಗೆ ಮೋಸದ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ನಕಲಿ ದಾಖಲೆಗಳನ್ನು ಬಳಸಿ ಮೋಸ ಮಾಡುತ್ತಾರೆ. ಇಂಥ ಪ್ರಕರಣಗಳನ್ನು ಕಡಿಮೆ ಮಾಡಲು ಭೂಮಿ ದಾಖಲೆಗಳಿಗೆ (Property Documents) ಸಂಬಂಧಿಸಿದ ಹಾಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ ರಾಜ್ಯ ಸರ್ಕಾರ. ಹೆಚ್ಚುತ್ತಿರುವ ಸ್ಕ್ಯಾಮ್ ಗಳು ಕೂಡ ಇದರಿಂದ ಕಡಿಮೆ ಆಗಲಿದೆ.

ಸಿಹಿ ಸುದ್ದಿ, ರೈತರಿಗಾಗಿ ಹೊಸ ಯೋಜನೆ ಜಾರಿಗೆ ತರಲು ಮುಂದಾದ ಸರ್ಕಾರ! ಹೊಸ ಆದೇಶ

ಸರ್ಕಾರದಿಂದ ಹೊಸ ವ್ಯವಸ್ಥೆ

ಕೆಲವು ಕ್ರಿಮಿನಲ್ ಗಳು ಭೂಮಿಗೆ (Land) ಸಂಬಂಧಿಸಿದ ಹಾಗೆ ಸುಳ್ಳು ಡಾಕ್ಯುಮೆಂಟ್ ಗಳನ್ನು ಸೃಷ್ಟಿಸಿ, ಜಾಗ ಖರೀದಿ ಮಾಡಲು ಬಯಸುವ ಅಮಾಯಕರನ್ನು ನಂಬಿಸಿ, ಅವರಿಂದ ಲಕ್ಷಗಟ್ಟಲೆ ಹಣ ಪಡೆದು ಮೋಸ ಮಾಡುತ್ತಾರೆ. ಇಂಥ ಪ್ರಕರಣಗಳು ಕಡಿಮೆ ಆಗಲಿ ಎಂದು ಸರ್ಕಾರವು ಮುಖ್ಯ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದು ಸ್ವಂತ ಭೂಮಿ ಹೊಂದಿರುವ ಎಲ್ಲರಿಗೂ ಹೊಸ ಅಪ್ಡೇಟ್ ಆಗಿದೆ. ಇದು ಸರ್ಕಾರ ತರುತ್ತಿರುವ ಹೊಸ ರೀತಿಯ ವ್ಯವಸ್ಥೆ ಎಂದು ಹೇಳಿದರು ಸಹ ತಪ್ಪಲ್ಲ.

type="adsense" data-ad-client="ca-pub-4577160196132345" data-ad-slot="4977565719" data-auto-format="rspv" data-full-width="">
Kannada News

Property Documentsಆಸ್ತಿ ದಾಖಲೆ ಡಿಜಿಟಲೀಕರಣ ಇನ್ನಷ್ಟು ಫಾಸ್ಟ್!

ನಮ್ಮ ರಾಜ್ಯದಲ್ಲಿ ಈಗ ನಡೆಯುತ್ತಿರುವ ಆಸ್ತಿಗೆ ಸಂಬಂಧಿಸಿದ ಮೋಸದ ಜಾಲದ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದು, ಎಲ್ಲಾ ಭೂದಾಖಲೆಗಳನ್ನು ಡಿಜಿಟಲ್ ಮಾಡಲಾಗುತ್ತಿದೆ. ಈ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಈಗ ಬಹಳ ಸ್ಪೀಡ್ ಆಗಿ ಸಾಗುತ್ತಿದೆ.

ಮೊದಲಿಗೆ ಆಕಾರ್ ಬಂಡ್ ದಾಖಲೆಗಳ ಡಿಜಿಟಲೀಕರಣ ಶುರುವಾಗಿದ್ದು, ಇದು 95% ಮುಕ್ತಾಯವಾಗಿದೆ. ಮೋಸ ಹೋಗುವ ಸಂಭವ ಕಡಿಮೆಯಾಗಿ, ಜನರಿಗೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಸುಲಭವಾಗಿ ಬೇಗ ಸಿಗಲಿ ಎಂದು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಈ ಜಿಲ್ಲೆಯ ಮಹಿಳೆಯರ ಖಾತೆಗೆ ಮೊದಲು

ಆನ್ಲೈನ್ ನಲ್ಲೇ ಕಂದಾಯ ದಾಖಲೆ ಪಡೆಯಿರಿ

Property Rulesರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿರುವ ADLR ಆಫೀಸ್ ಗಳಲ್ಲಿ ಇರುವ ಎಲ್ಲಾ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಭೂಮಿಯ ಮಾಲೀಕರ ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಲಿಂಕ್ ಮಾಡುವ ಕೆಲಸ ಈಗ ನಡೆಯುತ್ತಿದೆ. 2012 ರಿಂದ 2021ರ ವರೆಗೂ 10 ವರ್ಷಗಳ ಅವಧಿಯಲ್ಲಿ ರಿಜಿಸ್ಟರ್ ಆಗಿರುವ 2ಕೋಟಿ ಆಸ್ತಿಯ ಡಾಕ್ಯುಮೆಂಟ್ ಗಳ ಸ್ಕ್ಯಾನ್ ನಡೆದು, ಡಿಜಿಟಲೀಕರಣ ಈಗಾಗಲೇ ಆಗಿದೆ.

ಇನ್ನು ಒಂದು ವರ್ಷದ ಅವಧಿಯಲ್ಲಿ ಅಂದರೆ 2025ರ ಸಮಯಕ್ಕೆ ತಾಲ್ಲೂಕು ಮಟ್ಟದ ಎಲ್ಲಾ ಕಚೇರಿಗಳಲ್ಲಿ ಡಾಕ್ಯುಮೆಂಟ್ ಗಳ ಹಾರ್ಡ್ ಕಾಪಿ ಇಲ್ಲದೇ ಡಿಜಿಟಲ್ ಆಗಿಯೇ ಎಲ್ಲಾ ವ್ಯವಹಾರಗಳನ್ನು ನಡೆಸಬೇಕು ಎನ್ನುವ ಗುರಿಯನ್ನು ಸರ್ಕಾರ ಹೊಂದಿದೆ.

ಇಂತಹ ಜನರಿಗೆ ಸುಲಭವಾಗಿ ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್! ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಭೂಮಿಯ ದಾಖಲೆಗಳ ಡೇಟಾಬೇಸ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ, ಜನರು ಭೂಮಿಗೆ ಸಂಬಂಧಪಟ್ಟ ದಾಖಲೆಗಳನ್ನು ಸುಲಭವಾಗಿ ಆನ್ಲೈನ್ ಮೂಲಕವೇ ಪಡೆದುಕೊಳ್ಳಬಹುದು. ಈ ವ್ಯವಸ್ಥೆ ಇಂದ ಜನರು ಪದೇ ಪದೇ ಕಂದಾಯ ಇಲಾಖೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ..

It’s easy to get your own land, property documents, all on mobile

Follow us On

FaceBook Google News