Bangalore NewsKarnataka News

ಸಿಹಿ ಸುದ್ದಿ, ರೈತರಿಗಾಗಿ ಹೊಸ ಯೋಜನೆ ಜಾರಿಗೆ ತರಲು ಮುಂದಾದ ಸರ್ಕಾರ! ಹೊಸ ಆದೇಶ

ನಮ್ಮ ರಾಜ್ಯದಲ್ಲಿ ರೈತರಿಗೆ (Farmer Schemes) ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರವು ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸರಿಯಾದ ಸಮಯಕ್ಕೆ ಮಳೆ ಬೆಳೆ ಆಗದೇ ರೈತರು ಕಷ್ಟಪಡಬಾರದು, ಕೃಷಿಗೆ ಹಾಗೂ ಬೆಳೆಯುವ ಬೆಳೆಯಿಂದ ನಷ್ಟ ಆಗದೆ ಇರುವ ಹಾಗೆ ಮತ್ತು ಕೃಷಿ ಕೆಲಸಗಳನ್ನು (Agriculture) ಯಾವುದೇ ಸಮಸ್ಯೆ ಇಲ್ಲದೇ ನಿರ್ವಹಿಸುವ ಸಲುವಾಗಿ ರೈತರಿಗೆ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈಗಾಗಲೇ ಇರುವ ಯೋಜನೆಗಳ ಜೊತೆಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಸರ್ಕಾರ.

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಈ ಜಿಲ್ಲೆಯ ಮಹಿಳೆಯರ ಖಾತೆಗೆ ಮೊದಲು

New scheme for farmer women of agricultural family, loans at low interest

ರೈತರಿಗಾಗಿ ಹೊಸ ಯೋಜನೆ

ಇದೀಗ ರಾಜ್ಯ ಸರ್ಕಾರವು ರೈತರಿಗೆ ಹಣಕಾಸಿನ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ಸಪೋರ್ಟ್ ಮಾಡುವ ಸಲುವಾಗಿ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದ್ದು, ನಮ್ಮ ರಾಜ್ಯಕ್ಕೆ ಸೇರಿದ ಎಲ್ಲಾ ರೈತರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ರೈತರಿಗೆ ಅನುಕೂಲ ಸಿಗುತ್ತದೆ, ಹೆಚ್ಚಿನ ಚಿಂತೆ ಇಲ್ಲದೇ ವ್ಯವಸಾಯ ಮಾಡಿಕೊಂಡು ಹೋಗಬಹುದು.

ರೈತರ ಅನುಕೂಲಕ್ಕೆ ಸರ್ಕಾರದಿಂದ ಹೊಸ ನಿರ್ಧಾರ

Siddaramaiahನಮ್ಮ ರಾಜ್ಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ರೈತರಿಗೆ ಅನುಕೂಲ ಆಗಬೇಕು, ರೈತರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎನ್ನುವ ಕಾರಣದಿಂದ ಹೊಸದೊಂದು ನಿಯಮವನ್ನು ಜಾರಿಗೆ ತಂದಿದ್ದು, ಇನ್ನುಮುಂದೆ ಪ್ರತಿ ಸೋಮವಾರ ಖಡಾಖಂಡಿತವಾಗಿ ಎಲ್ಲಾ ಆಡಳಿತಾಧಿಕಾರಿಗಳು ಮತ್ತು ಕೆಲಸಗಾರರು ಕಚೇರಿಗೆ ಬರಲೇಬೇಕು ಎಂದು ಆದೇಶ ನೀಡಿದ್ದಾರೆ. ಈ ಬಗ್ಗೆ ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಬಿ ಅವರು ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಕಚೇರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಇಂತಹ ಜನರಿಗೆ ಸುಲಭವಾಗಿ ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್! ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಸೋಮವಾರ ಕೃಷಿ ಕಚೇರಿಗಳಲ್ಲಿ ಅಧಿಕಾರಿಗಳು ಇರಲೇಬೇಕು!

ನಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ವಾರದ ಸೋಮವಾರದ ದಿನದಂದು ಎಲ್ಲಾ ರೈತರು ತಮ್ಮ ಕೆಲಸದಿಂದ ಒಂದು ದಿವಸ ಬಿಡುವು ತೆಗೆದುಕೊಂಡು, ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆಫೀಸ್ ಗಳಿಗೆ ಹೋಗಿ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಳ್ಳುವುದು, ವ್ಯವಸಾಯಕ್ಕೆ ಸಂಬಂಧಿಸಿದ ಹಾಗೆ ಏನಾದರೂ ತರುವುದು ಇದ್ದರೆ, ತೆಗೆದುಕೊಂಡು ಬರುವುದು ಇದನ್ನೆಲ್ಲ ಮಾಡುತ್ತಾರೆ.

Farmerಈ ಕಾರಣಕ್ಕೆ ಸೋಮವಾರದ ದಿವಸ ಕಚೇರಿಗಳಿಗೆ ರೈತರು ಬರುವ ಕಾರಣಕ್ಕೆ ತಾಲ್ಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳಲ್ಲಿ ಸೋಮವಾರದ ದಿವಸ ಅಧಿಕಾರಿಗಳು ಕಚೇರಿಗೆ ಬಂದು ರೈತರ ಕೆಲಸಗಳನ್ನು ಮಾಡಿಕೊಡುತ್ತಿದ್ದರು.

ಗೃಹಜ್ಯೋತಿ ಯೋಜನೆ ಇದ್ರೂ ಕರೆಂಟ್ ಬಿಲ್ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!

ಹಾಗಾಗಿ ಇನ್ನುಮುಂದೆ ಕೂಡ ಈ ಒಂದು ಕೆಲಸ ತಪ್ಪದೇ ನಡೆಯಬೇಕು, ರೈತರಿಗೆ ಅನುಕೂಲ ಮಾಡಿಕೊಡಬೇಕು, ಅವರ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡಬೇಕು, ಸೋಮವಾರದ ದಿವಸ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಇರಬೇಕು ಎಂದು MLC ಹೆಚ್.ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದು, ಸಿಎಂ ಅವರು ಇದಕ್ಕೆ ಪಾಸಿಟಿವ್ ಆಗಿಯೇ ಸ್ಪಂದಿಸಿದ್ದಾರೆ. ಹಾಗಾಗಿ ರೈತರಿಗೆ ಸಹಾಯ ಆಗುವ ಹೊಸ ಆದೇಶವನ್ನು ಹೊರಡಿಸಲಾಗಿದೆ.

The state government new Order for farmers

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories