ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಈ ಜಿಲ್ಲೆಯ ಮಹಿಳೆಯರ ಖಾತೆಗೆ ಮೊದಲು
ಈ ಯೋಜನೆಯ ಮೂಲಕ ಮನೆಯ ಮುಖ್ಯ ಸದಸ್ಯೆಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ಸರ್ಕಾರ ವರ್ಗಾವಣೆ (Money Transfer) ಮಾಡುತ್ತಿದೆ.
ರಾಜ್ಯ ಸರ್ಕಾರವು ನಮ್ಮ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಆಗಿದೆ. ಈ ಯೋಜನೆಯ ಮೂಲಕ ಮನೆಯ ಮುಖ್ಯ ಸದಸ್ಯೆಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ಸರ್ಕಾರ ವರ್ಗಾವಣೆ (Money Transfer) ಮಾಡುತ್ತಿದೆ. ಈಗಾಗಲೇ 10 ಕಂತುಗಳ ಹಣ ಬಹುತೇಕ ಎಲ್ಲಾ ಮಹಿಳೆಯರನ್ನು ತಲುಪಿದೆ.
ಇಂತಹ ಜನರಿಗೆ ಸುಲಭವಾಗಿ ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್! ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಯಾರಿಗೆಲ್ಲಾ ಸಿಗುತ್ತಿದೆ ಗೃಹಲಕ್ಷ್ಮಿ ಯೋಜನೆಯ ಹಣ?
ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ನಮ್ಮ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಯಿತು. ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಕುಟುಂಬಗಳಲ್ಲಿ, ಆ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆ ಎಂದು ಹೆಸರು ಇರುವ ಮಹಿಳೆಗೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ನೀಡಿ, ಪ್ರತಿ ತಿಂಗಳು ₹2000 ರೂಪಾಯಿಯನ್ನು ವರ್ಗಾವಣೆ ಮಾಡುತ್ತಿದೆ. ಅರ್ಜಿ ಸಲ್ಲಿಸಿರುವ ಬಹುತೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವೂ ಸಿಗುತ್ತಿದೆ.
11ನೇ ಕಂತಿನ ಗೃಹಲಕ್ಷ್ಮಿ ಹಣ ಬರೋದು ಯಾವಾಗ?
ಈಗಾಗಲೇ 10 ಕಂತುಗಳ ಹಣ ಬಂದಿದ್ದು, ಈ ತಿಂಗಳ ಆರಂಭದಲ್ಲಿ ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಜೂನ್ 15ರ ಒಳಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ಕೂಡ ಹೇಳಲಾಗುತ್ತಿದೆ. ಇದು ಬಹುತೇಕ ಖಚಿತ ಮಾಹಿತಿ ಆಗಿದೆ.
ಗೃಹಜ್ಯೋತಿ ಯೋಜನೆ ಇದ್ರೂ ಕರೆಂಟ್ ಬಿಲ್ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!
ಯಾವ ಜಿಲ್ಲೆಯ ಮಹಿಳೆಯರಿಗೆ ಸಿಗಲಿದೆ 11ನೇ ಕಂತಿನ ಹಣ?
ಬೆಳಗಾವಿ, ಬೀದರ್, ಕಲಬುರ್ಗಿ, ವಿಜಯಪುರ, ಗದಗ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿ, ಹಾವೇರಿ, ಬಾಗಲಕೋಟೆ ಇಷ್ಟು ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಹಣ ಪಡೆಯುವುದಕ್ಕೆ ಈ ಕೆಲಸ ಮಾಡಿ!
ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೆ ಸಮಸ್ಯೆ ಆಗಿದೆ ಎಂದರೆ, ಮೊದಲು ರೇಷನ್ ಕಾರ್ಡ್ ಅಪ್ಡೇಟ್ ಆಗಿದ್ಯಾ ಎಂದು ಚೆಕ್ ಮಾಡಿ. ಹಾಗೆಯೇ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ನಲ್ಲಿ ನಿಮ್ಮ ಬಗ್ಗೆ ಇರುವ ಮಾಹಿತಿ ಸರಿ ಇದೆಯಾ ಎಂದು ಚೆಕ್ ಮಾಡಿ. ಅಕಸ್ಮಾತ್ ತಪ್ಪಿದ್ದರೆ, ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಿ. ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ಲದೇ ಇದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಸಿಗುವುದಿಲ್ಲ. ಬ್ಯಾಂಕ್ ಅಕೌಂಟ್ ಅನ್ನು ಕೂಡ ಅಪ್ಡೇಟ್ ಮಾಡಿ.
ಇಂತಹವರಿಗೆ ಅನ್ನಭಾಗ್ಯ ಯೋಜನೆಯ ಹಣ ಬರಲ್ಲ, ಇಲ್ಲಿದೆ ಕಾರಣ! ಮೊದಲು ಈ ಕೆಲಸ ಮಾಡಿ
ಸುಳ್ಳು ಮಾಹಿತಿ ಕೊಡುವ ಹಾಗಿಲ್ಲ!
ಒಂದು ವೇಳೆ ಯಾರಾದರು ಸಹ ಗೃಹಲಕ್ಷ್ಮಿ ಯೋಜನೆಯ ಹೆಸರಲ್ಲಿ ಮಹಿಳೆಯರಿಗೆ ಮೋಸ ಮಾಡುವ ಪ್ರಯತ್ನ ಮಾಡಿದರೆ, ಅಂಥವರ ಬಗ್ಗೆ ನೀವು ದೂರು ಕೊಡಬಹುದು, ಯಾರು ಕೂಡ ಮಹಿಳೆಯರಿಗೆ ಮೋಸ ಮಾಡುವ ಹಾಗಿಲ್ಲ. ಟ್ಯಾಕ್ಸ್ ಕಟ್ಟುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಒಂದು ವೇಳೆ ಮಹಿಳೆಯರು ಇನ್ನು ಅರ್ಜಿ ಸಲ್ಲಿಸಿಲ್ಲ ಎಂದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು, ಆದರೆ ಸುಳ್ಳು ಮಾಹಿತಿ ನೀಡುವಂತಿಲ್ಲ
ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳ ಹಣಕ್ಕೆ ಈ ಕೆಲಸ ಮಾಡುವುದು ಕಡ್ಡಾಯ
11th and 12th Gruha Lakshmi Yojana Money released for this district