ಗೃಹಜ್ಯೋತಿ ಯೋಜನೆ ಇದ್ರೂ ಕರೆಂಟ್ ಬಿಲ್ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರ ಈಗ ಜನರ ಹೊರೆಯನ್ನು ಕಡಿಮೆ ಮಾಡಲು ಮನೆಗಳಲ್ಲಿ 4G Smart Meter ಅಳವಡಿಸಲು ನಿರ್ಧಾರ ಮಾಡಿದೆ.

ಕೇಂದ್ರ ಸರ್ಕಾರಕ್ಕೆ ಈಗ ಹೊಸ ಹುರುಪು ಬಂದಿದೆ. ಲೋಕಸಭಾ ಚುನಾವಣೆ ಮುಗಿದು, ಇತ್ತೀಚೆಗೆ ಫಲಿತಾಂಶ ಪ್ರಕಟವಾಯಿತು. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದು ಆಗಿದೆ.

ಇನ್ನು ನಮ್ಮ ದೇಶದ ಜನರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಪ್ರತಿ ತಿಂಗಳು ವಿದ್ಯುತ್ ಬಿಲ್ (Electricity Bill) ಕಟ್ಟಲು ಕಷ್ಟಪಡುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಕೇಂದ್ರ ಸರ್ಕಾರವು ಜನರಿಗಾಗಿ ಒಂದು ಗುಡ್ ನ್ಯೂಸ್ ನೀಡಿದೆ.

ಇಂತಹವರಿಗೆ ಅನ್ನಭಾಗ್ಯ ಯೋಜನೆಯ ಹಣ ಬರಲ್ಲ, ಇಲ್ಲಿದೆ ಕಾರಣ! ಮೊದಲು ಈ ಕೆಲಸ ಮಾಡಿ

Kannada News

4G Smart Meter ಅಳವಡಿಕೆ

ಕೇಂದ್ರ ಸರ್ಕಾರ ಈಗ ಜನರ ಹೊರೆಯನ್ನು ಕಡಿಮೆ ಮಾಡಲು ಮನೆಗಳಲ್ಲಿ 4G Smart Meter ಅಳವಡಿಸಲು ನಿರ್ಧಾರ ಮಾಡಿದೆ. ಹೌದು, 4ಜಿ ಸ್ಮಾರ್ಟ್ ಮೀಟರ್ ಗಳನ್ನು ಮನೆಗಳಲ್ಲಿ ಅಳವಡಿಸಿದರೆ ಕರೆಂಟ್ ಕಳ್ಳತನ ಆಗುವ ಪ್ರಕರಣಗಳು ಕಡಿಮೆ ಆಗುತ್ತದೆ.

ಕರೆಂಟ್ ಕಳ್ಳತನ ಮಾಡುವವರಿಗೆ ಇದೊಂದು ರೀತಿ ವಾರ್ನಿಂಗ್ ಆಗುತ್ತದೆ ಜೊತೆಗೆ ವಿದ್ಯುತ್ ಕಳ್ಳತನ ನಡೆಯುವುದು ತಪ್ಪುತ್ತದೆ. ಈ ಕಾರಣಕ್ಕೆ 4ಜಿ ಸ್ಮಾರ್ಟ್ ಮೀಟರ್ ಗಳನ್ನು ಪ್ರತಿಯೊಂದು ಮನೆಯಲ್ಲಿ ಅಳವಡಿಸಬೇಕು ಎಂದು ನಿರ್ಧಾರ ಮಾಡಲಾಗಿದೆ..

Electricity billಪ್ರತಿ ಮನೆಯಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ

ಮುಂಬರುವ ದಿನಗಳಲ್ಲಿ ಪ್ರತಿ ಮನೆಗಳಲ್ಲಿ 4ಜಿ ವಿದ್ಯುತ್ ಮೀಟರ್ ಅಳವಡಿಸುವ ಪ್ಲಾನ್ ಹೊಂದಿದೆ ಕೇಂದ್ರ ಸರ್ಕಾರ. ಎಲ್ಲಾ ಮನೆಗಳಲ್ಲಿ ವಿದ್ಯುತ್ 4ಜಿ ಸ್ಮಾರ್ಟ್ ಮೀಟರ್ ಹಾಕುವುದರಿಂದ ವಿದ್ಯುತ್ ಕಳ್ಳತನ ನಡೆಯುವುದನ್ನು ಕಡಿಮೆ ಮಾಡುವುದು ಮುಖ್ಯ ಉದ್ದೇಶ ಆಗಿದ್ದು, ಜೊತೆಗೆ 4ಜಿ ಮೀಟರ್ ನಲ್ಲಿ ನೀವು ನಿಮ್ಮ ಮೊಬೈಲ್ ರೀಚಾರ್ಜ್ ಮಾಡುವ ಹಾಗೆ ವಿದ್ಯುತ್ ಮೀಟರ್ (Electricity Meter) ಅನ್ನು ರೀಚಾರ್ಜ್ ಮಾಡಿಕೊಳ್ಳಬಹುದು. ಇದೆಲ್ಲವು ಜನರಿಗೆ ಅನುಕೂಲವನ್ನೇ ಮಾಡಿಕೊಡಲಿದೆ..

ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳ ಹಣಕ್ಕೆ ಈ ಕೆಲಸ ಮಾಡುವುದು ಕಡ್ಡಾಯ

4ಜಿ ವಿದ್ಯುತ್ ಮೀಟರ್ ಇಂದ ಜನರಿಗೆ ಮತ್ತೊಂದು ಪ್ರಮುಖವಾದ ಉಪಯೋಗ ಇದೆ. ಅದೇನು ಎಂದರೆ, ಈ ಮೀಟರ್ ಅಳವಡಿಸಿದರೆ ನೀವು ಮನೆಯಲ್ಲಿ ಎಷ್ಟು ಯೂನಿಟ್ ವಿದ್ಯುತ್ ಬಳಸಿದ್ದೀರೋ ಅಷ್ಟು ಹಣವನ್ನು ಮಾತ್ರ ಪಾವತಿ ಮಾಡಬಹುದು, ಅದು ಆನ್ಲೈನ್ ಮೂಲಕ, ಈ ರೀತಿಯಾಗಿ ನೀವು ಹೆಚ್ಚು ಹಣ ಕಟ್ಟುವ ಅವಶ್ಯಕತೆ ಸಹ ಇರುವುದಿಲ್ಲ..ಇದೆಲ್ಲವೂ ಜನರಿಗೆ ಉತ್ತಮವಾದ ಸೌಲಭ್ಯ ಆಗಿದ್ದು, ಪ್ರಸ್ತುತ ಉತ್ತರ ಪ್ರದೇಶದಲ್ಲಿ 4ಜಿ ವಿದ್ಯುತ್ ಮೀಟರ್ ಗಳನ್ನು ಅಳವಡಿಸಲಾಗಿದೆ.

4G Smart Meterಮುಂದಿನ ದಿನಗಳಲ್ಲಿ ಭಾರತದ ಎಲ್ಲಾ ರಾಜ್ಯಗಳಲ್ಲಿ 4ಜಿ ವಿದ್ಯುತ್ ಮೀಟರ್ ಗಳನ್ನು ಅಳವಡಿಸುವ ಪ್ಲಾನ್ ಹೊಂದಿದೆ ಕೇಂದ್ರ ಸರ್ಕಾರ. ಈ ಮೀಟರ್ ನಲ್ಲಿ ನೀವು ರೀಚಾರ್ಜ್ ಮಾಡಿದಷ್ಟು ವಿದ್ಯುತ್ ಬಳಕೆ ಮಾಡಬಹುದು, ಅದು ಮುಗಿದ ನಂತರ ವಿದ್ಯುತ್ ನಿಲ್ಲುತ್ತದೆ. ನಂತರ ನೀವು ಮತ್ತೆ ರೀಚಾರ್ಜ್ ಮಾಡಿದಾಗ, ವಿದ್ಯುತ್ ಬಳಸಬಹುದು. ಪ್ರಸ್ತುತ ಉತ್ತರ ಪ್ರದೇಶದಲ್ಲಿ 4ಜಿ ಮೀಟರ್ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಸಹ ಬರಲಿದೆ.

ಇಂತಹವರ ರೇಷನ್ ಕಾರ್ಡ್ ರದ್ದು! ರಾತ್ರೋ-ರಾತ್ರಿ ಸರ್ಕಾರ ಖಡಕ್ ನಿರ್ಧಾರ; ಇಲ್ಲಿದೆ ಮಾಹಿತಿ

The government has given good news to the Electricity bill payers

Follow us On

FaceBook Google News