ಇಂತಹವರಿಗೆ ಅನ್ನಭಾಗ್ಯ ಯೋಜನೆಯ ಹಣ ಬರಲ್ಲ, ಇಲ್ಲಿದೆ ಕಾರಣ! ಮೊದಲು ಈ ಕೆಲಸ ಮಾಡಿ
ಈ ಒಂದು ಮುಖ್ಯವಾದ ಕೆಲಸವನ್ನು ನೀವು ಮಾಡಿಲ್ಲ ಎಂದರೆ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಬರುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಉಚಿತ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ (Annabhagya Scheme) ಪ್ರಮುಖವಾದದ್ದು ಎಂದರೆ ತಪ್ಪಲ್ಲ. ಈ ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್ (BPL Ration Card) ಹೊಂದಿರುವ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಸಹ, ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿರುವ ಅಷ್ಟು ವ್ಯಕ್ತಿಗಳಿಗೆ 5 ಕೆಜಿ ಅಕ್ಕಿಯ ಜೊತೆಗೆ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಸರ್ಕಾರ ವರ್ಗಾವಣೆ ಮಾಡುತ್ತಾ ಬರುತ್ತಿದೆ.
ಈ ಕೆಲಸ ಮಾಡಿಲ್ಲ ಅಂದ್ರೆ ಅನ್ನಭಾಗ್ಯ ಯೋಜನೆ ಹಣ ಬರಲ್ಲ!
ಈಗಾಗಲೇ 8 ತಿಂಗಳಿಗಿಂತ ಹೆಚ್ಚಿನ ಸಮಯದಿಂದ ಅನ್ನಭಾಗ್ಯ ಯೋಜನೆಯ ಹಣ ಜನರನ್ನು ತಲುಪುತ್ತಿದೆ. ಆದರೆ ಈ ಒಂದು ಮುಖ್ಯವಾದ ಕೆಲಸವನ್ನು ನೀವು ಮಾಡಿಲ್ಲ ಎಂದರೆ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಬರುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ ಒಂದು ವೇಳೆ ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ಬರುವ ಹಾಗೆ ಹೇಗೆ ಮಾಡಿಕೊಳ್ಳುವುದು ಹೇಗೆ ಎಂದು ಕೂಡ ಇಂದು ತಿಳಿದುಕೊಳ್ಳೋಣ..
ವಿದ್ಯಾರ್ಥಿಗಳೇ ಉಚಿತ ಬಸ್ ಪಾಸ್ ಪಡೆಯಲು ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ
ಪ್ರತಿ ವ್ಯಕ್ತಿಗೆ ಸಿಗುತ್ತಿದೆ ₹170 ರೂಪಾಯಿ
ಅನ್ನಭಾಗ್ಯ ಯೋಜನೆಯ ಬಗ್ಗೆ ಮೊದಲಿಗೆ ಸರ್ಕಾರ ತಿಳಿಸಿದ್ದು, ಬಿಪಿಎಲ್ ರೇಷನ್ ಕಾರ್ಡ್ (Ration Card) ಹಾಗೂ ಅಂತ್ಯೋದಯ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡಲಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದೇ 5ಕೆಜಿ ಅಕ್ಕಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿಗಳನ್ನು ಪ್ರತಿ ವ್ಯಕ್ತಿಗೆ ಕೊಡಲಾಗುತ್ತಿದೆ. ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ (Bank Account) ಈ ಹಣ ವರ್ಗಾವಣೆ ಆಗುತ್ತಿದೆ.
ಉಚಿತವಾಗಿ ಪಡೆಯಿರಿ ಸೋಲಾರ್ ಪಂಪ್ ಸೆಟ್! ರೈತರಿಗೆ ಬಂಪರ್ ಅವಕಾಶ; ಅರ್ಜಿ ಸಲ್ಲಿಸಿ
ಅನ್ನಭಾಗ್ಯ ಹಣ ಪಡೆಯಲು ಹೀಗೆ ಮಾಡಿ!
ಇನ್ನು ಕೂಡ ಹಲವು ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಬರದೇ ಇರುವುದಕ್ಕೆ ಕೆಲವು ಪ್ರಮುಖ ಕಾರಣವಿದೆ. ಒಂದು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇರುವುದು., ಬ್ಯಾಂಕ್ ಅಕೌಂಟ್ ನಿಷ್ಕ್ರಿಯ ಆಗಿರುವುದು ಅಥವಾ ಮನೆಯಲ್ಲಿ ಯಜಮಾನ ಇಲ್ಲದೇ ಇರುವುದು. ಈ ಮೂರು ಪ್ರಮುಖ ಕಾರಣಗಳಿಂದ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ಇದೆಲ್ಲವನ್ನು ಚೆಕ್ ಮಾಡಿ, ಸರಿಪಡಿಸಿಕೊಳ್ಳಿ..
ಇಂತಹವರ ರೇಷನ್ ಕಾರ್ಡ್ ರದ್ದು! ರಾತ್ರೋ-ರಾತ್ರಿ ಸರ್ಕಾರ ಖಡಕ್ ನಿರ್ಧಾರ; ಇಲ್ಲಿದೆ ಮಾಹಿತಿ
ಅನ್ನಭಾಗ್ಯ ಯೋಜನೆಯ ಹಣದ ವಿವರ
ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 5ಕೆಜಿ ಅಕ್ಕಿಗೆ 170 ರೂಪಾಯಿ ಹಣ ಪ್ರತಿ ವ್ಯಕ್ತಿಗೆ ಹಣ ಸಿಗಲಿದೆ. ಲೋಕಸಭಾ ಚುನಾವಣೆ ಇದ್ದ ಕಾರಣ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಬರುವುದು ತಡವಾಗಿತ್ತು, ಆದರೆ ಮೇ 31ರ ನಂತರ ಸರಿಯಾದ ಸಮಯಕ್ಕೆ ಹಣ ಬರುತ್ತದೆ ಎಂದು ಹೇಳಲಾಗುತ್ತಿದೆ.
Such people do not get Annabhagya Yojana money, here is the reason