ಇಂತಹ ಜನರಿಗೆ ಸುಲಭವಾಗಿ ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್! ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

Story Highlights

ಇದೀಗ ಬಿಪಿಎಲ್ ರೇಶನ್ ಕಾರ್ಡ್ ಗಳನ್ನು (Ration Card) ಜನರಿಗೆ ವಿತರಣೆ ಮಾಡುವ ಬಗ್ಗೆ ಸರ್ಕಾರದಿಂದ ಹೊಸ ಮಾಹಿತಿ ಸಿಕ್ಕಿದೆ

ನಮ್ಮ ದೇಶದಲ್ಲಿ ಬಡವರ್ಗದ ಜನತೆಗೆ ಹೆಚ್ಚಿನ ಅನುಕೂಲ ಕೊಡಲು ಸರ್ಕಾರ ಜಾರಿಗೆ ತಂದಿರುವ ಸೌಲಭ್ಯ BPL Ration Card ಸೌಲಭ್ಯ ಆಗಿದೆ. ಬಡವರ್ಗಕ್ಕಿಂತ ಕೆಳಗಿರುವ ಜನರಿಗೆ ಬಿಪಿಎಲ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ.

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರವು ಅನೇಕ ಸೌಲಭ್ಯ ಕೊಡುತ್ತದೆ, ಅದರಲ್ಲಿ ಪ್ರಮುಖವಾದದ್ದು ಉಚಿತವಾಗಿ ನೀಡುವ ಆಹಾರ ಧಾನ್ಯ ವಿತರಣೆಯ ಸೌಲಭ್ಯ ಸಹ ಆಗಿದೆ. ಅದರ ಜೊತೆಗೆ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಸಹ ಜಾರಿಗೆ ತಂದಿದೆ.

ನಮ್ಮ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಸಹ, 5ಕೆಜಿ ಅಕ್ಕಿಯ ಜೊತೆಗೆ ಇನ್ನು 5 ಕೆಜಿಯ ಬದಲಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಯಾವುದೇ ಸೌಲಭ್ಯಗಳು, ಯೋಜನೆಗಳ ಮೂಲಕ ಧನ ಸಹಾಯ ಸಿಗಬೇಕು ಎಂದರೆ ಜನರ ಬಳಿ ಬಿಪಿಎಲ್ ಕಾರ್ಡ್ ಇರಲೇಬೇಕು. ಇದೀಗ ಬಿಪಿಎಲ್ ರೇಶನ್ ಕಾರ್ಡ್ ಗಳನ್ನು (Ration Card) ಜನರಿಗೆ ವಿತರಣೆ ಮಾಡುವ ಬಗ್ಗೆ ಸರ್ಕಾರದಿಂದ ಹೊಸ ಮಾಹಿತಿ ಸಿಕ್ಕಿದೆ..

ಗೃಹಜ್ಯೋತಿ ಯೋಜನೆ ಇದ್ರೂ ಕರೆಂಟ್ ಬಿಲ್ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!

ಇವರಿಗೆ ಶೀಘ್ರದಲ್ಲೇ ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್

BPL Ration Cardಬಿಪಿಎಲ್ ರೇಶನ್ ಕಾರ್ಡ್ ಹೊಂದಿರುವವರಿಗೆ ಆಹಾರ ಸೌಲಭ್ಯ ಮಾತ್ರವಲ್ಲ ಆರೋಗ್ಯ ಸೌಲಭ್ಯ ಸೇರಿದಂತೆ ಇನ್ನು ಅನೇಕ ಸೌಲಭ್ಯಗಳನ್ನು ಕೊಡಲಾಗುತ್ತಿದೆ. 3 ವರ್ಷಗಳಿಂದ ಅನೇಕ ಜನರು ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರ ಪೈಕಿ ಕ್ಯಾನ್ಸರ್, ಕಿಡ್ನಿ ಪ್ರಾಬ್ಲಮ್, ಹಾರ್ಟ್ ಪ್ರಾಬ್ಲಮ್ ಇರುವವರಿಗೆ ಆದಷ್ಟು ಬೇಗ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಅವರಿಗೆ ಇರುವ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿ, ಉಚಿತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಇಂತಹವರಿಗೆ ಅನ್ನಭಾಗ್ಯ ಯೋಜನೆಯ ಹಣ ಬರಲ್ಲ, ಇಲ್ಲಿದೆ ಕಾರಣ! ಮೊದಲು ಈ ಕೆಲಸ ಮಾಡಿ

ಈ ರೀತಿ ಮಾಡಿದರೆ ಬೇಗ ಸಿಗಲಿದೆ ರೇಷನ್ ಕಾರ್ಡ್

Ration Card*ಆರೋಗ್ಯದಲ್ಲಿ ಸಮಸ್ಯೆ ಇರುವವರು ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ, ಬೇರೆ ಎಲ್ಲಾ ದಾಖಲೆಗಳ ಜೊತೆಗೆ ವೈದ್ಯರಿಂದ ತೆಗೆದುಕೊಂಡ ಪ್ರಮಾಣಪತ್ರವನ್ನು ಕೂಡ ಸಲ್ಲಿಸಬೇಕು.

*ಬೇಗ ರೇಷನ್ ಕಾರ್ಡ್ ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಫುಡ್ ಇನ್ಸ್ಪೆಕ್ಟರ್ ಅವರನ್ನು ಭೇಟಿ ಮಾಡಬಹುದು.

*ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.

*ಫುಡ್ ಇನ್ಸ್ಪೆಕ್ಟರ್ ಅವರು ಯಾರಿಗೆಲ್ಲ ಆರೋಗ್ಯ ಸಮಸ್ಯೆ ಇದೆಯೋ ಅವರ ಮಾಹಿತಿಯನ್ನು ಚೆಕ್ ಮಾಡಿ, ಕನ್ಫರ್ಮ್ ಮಾಡಿಕೊಂಡ ನಂತರ, ಅವರ ಅರ್ಜಿಯನ್ನು ಉಪನಿರ್ದೇಶಕರು ಕಳಿಸಿಕೊಡುತ್ತಾರೆ.

*ಆಗ ಅವರಿಗೆಲ್ಲ ಬೇಗ ರೇಷನ್ ಕಾರ್ಡ್ ವಿತರಿಸಲು ಅನುಮತಿ ಸಿಗುತ್ತದೆ.

*ಹೆಚ್ಚಿನ ಆರೋಗ್ಯ ಸಮಸ್ಯೆ ಇರುವವರು ಮಾತ್ರ ಈ ರೀತಿಯಾಗಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳೇ ಉಚಿತ ಬಸ್ ಪಾಸ್ ಪಡೆಯಲು ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಎಲ್ಲಿ?

ಒಂದು ವೇಳೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಎಂದರೆ, ಸೈಬರ್ ಸೆಂಟರ್ ಗಳಲ್ಲಿ ಸಲ್ಲಿಸುವ ಹಾಗಿಲ್ಲ. ನಿಮ್ಮ ಹತ್ತಿರ ಇರುವ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು.

Such people will get BPL ration card, Good news from the state government

Related Stories