ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಇಲ್ಲ! ಲಕ್ಷಾಂತರ ಕಾರ್ಡ್ ಕ್ಯಾನ್ಸಲ್

ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ವಿತರಣೆಯಲ್ಲಿ ದೊಡ್ಡ ಏರಿಳಿತ ಕಂಡುಬಂದಿದೆ. ಬಡ ಕುಟುಂಬಗಳಿಗೆ ನಿಗದಿಯಾಗಬೇಕಾದ ಕಾರ್ಡ್‌ಗಳು ಅನರ್ಹರಿಗೆ ನೀಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

  • ಅನರ್ಹರಿಗೆ ನೀಡಲಾದ ಬಿಪಿಎಲ್ ಕಾರ್ಡ್‌ಗಳ ಪರಿಣಾಮ ಸರ್ಕಾರಕ್ಕೆ ಆರ್ಥಿಕ ಹೊಡೆತ
  • ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶೇ.80% ಗಿಂತಲೂ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆ
  • ಕಾರ್ಡ್ ರದ್ದತಿಗೆ ಆಹಾರ ಇಲಾಖೆಯಿಂದ ವಿಶೇಷ ಪರಿಶೀಲನಾ ಅಭಿಯಾನ

ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಅವ್ಯವಸ್ಥೆ – ಅನರ್ಹರಿಗೆ ಬಿಗಿಯಾದ ಕ್ರಮ?

ಬೆಂಗಳೂರು (Bengaluru): ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Ration Card) ಹಂಚಿಕೆ ಸಂಬಂಧ ಬಿಗುವಿನ ನಿರ್ಧಾರ ಕೈಗೊಳ್ಳಲಾಗಿದೆ. ಬಡತನರೇಖೆ (Poverty Line) ಒಳಗಿನವರಿಗೆ ಈ ಕಾರ್ಡ್ ದೊರಕಬೇಕಾದರೆ, ಪ್ರತಿಯಾಗಿ ಅನರ್ಹರಿಗೆ ಬಿಎಪಿಎಲ್‌ ಕಾರ್ಡ್ ಹಂಚುವ ಅವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದೆ. ಈ ರೀತಿ ಹಂಚಿಕೆಯಿಂದ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿದೆ.

ಜಿಲ್ಲಾವಾರು ಪರಿಶೀಲನೆಯಾಗುತ್ತಿದ್ದಂತೆ ಆಘಾತಕಾರಿ ಅಂಕಿ ಅಂಶಗಳು ಹೊರಬಿದ್ದಿವೆ. ಶೇ.1% ರಿಂದ 5% ಬಡತನ ಪ್ರಮಾಣವಿರುವ ಜಿಲ್ಲೆಗಳಲ್ಲಿ ಶೇ.80% ಗಿಂತಲೂ ಹೆಚ್ಚು ಬಿಪಿಎಲ್ ಕಾರ್ಡ್ (BPL Card) ವಿತರಣೆ ಆಗಿರುವುದು ಗಂಭೀರ ಪ್ರಶ್ನೆ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆಗೆ ಮುಂದಾಗಿದೆ.

ಇದನ್ನೂ ಓದಿ: ಈ ತಾಲೂಕುಗಳಿಗೆ 2 ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್

ಇದೀಗ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿಗಳ ಪರಿಶೀಲನೆ ಹೆಸರಿನಲ್ಲಿ ಭಾರೀ ಅಭಿಯಾನ ಆರಂಭವಾಗಲಿದೆ. ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಹಚ್ಚಿ ಅದನ್ನು ತಕ್ಷಣವೇ ರದ್ದುಪಡಿಸುವ ನಿರ್ಧಾರ ಸರ್ಕಾರ ಕೈಗೊಂಡಿದೆ.

ಈ ಕುರಿತು ಮಾಹಿತಿ ನೀಡಿದ ಉನ್ನತ ಮೂಲಗಳು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಭಾರೀ ಅವ್ಯವಸ್ಥೆ ನಡೆದಿದೆ ಎಂಬುದನ್ನು ದೃಢಪಡಿಸಿವೆ. ಶೀಘ್ರವೇ ಪಂಚಾಯಿತಿ ಮಟ್ಟದಲ್ಲಿ ಪರಿಶೀಲನೆ ನಡೆಸಿ ಅಂತಹ ಕಾರ್ಡುಗಳನ್ನು ರದ್ದು ಮಾಡಲು ಮುಂದಾಗಿದೆ.

ಇನ್ನು ಕೆಲವೊಂದು ಮನೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಹೊಂದಿದ್ದು ಅಂತಹವರಿಗೆ ದಂಡದ ಜೊತೆ ಕಾರ್ಡ್ ಕೂಡ ರದ್ದಾಗಲಿದೆ, ಕಾರ್ಡ್ ಇರುವುದು ಬಡವರ ಅನುಕೂಲಕ್ಕಾಗಿ ಅತ್ತೆಗೊಂದು ಸೊಸೆಗೊಂದು ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ (Karnataka Government) ಖಡಕ್ ವಾರ್ನಿಗ್ ಕೊಟ್ಟಿದೆ.

ಇದನ್ನೂ ಓದಿ: ಅನ್ನಭಾಗ್ಯ ಹಣ ಬಂತಾ ಇಲ್ವಾ! ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿಕೊಳ್ಳಿ

BPL Ration Card Karnataka

ಇದನ್ನೂ ಓದಿ: ಅನರ್ಹರ ಬಿಪಿಎಲ್ ಕಾರ್ಡ್ ಪತ್ತೆಕಾರ್ಯ ಶುರು, ಮುಲಾಜಿಲ್ಲದೆ ಕ್ಯಾನ್ಸಲ್! ಖಡಕ್ ವಾರ್ನಿಂಗ್

ಜಿಲ್ಲಾವಾರು ಬಿಪಿಎಲ್ ಕಾರ್ಡ್ ಹಂಚಿಕೆ ಅಂಕಿ-ಅಂಶಗಳು:

ಜಿಲ್ಲೆ ಜನಸಂಖ್ಯೆ ಬಿಪಿಎಲ್ ಕಾರ್ಡ್ (ಶೇ.) ಬಡತನ ಪ್ರಮಾಣ (ಶೇ.)
ಮಂಡ್ಯ 16.92 ಲಕ್ಷ 15.33 ಲಕ್ಷ (90.6%) 2.47%
ರಾಮನಗರ 10.49 ಲಕ್ಷ 9.29 ಲಕ್ಷ (88.6%) 0.88%
ಹಾಸನ 16.82 ಲಕ್ಷ 14.61 ಲಕ್ಷ (86.9%) 2.43%
ಚಾಮರಾಜನಗರ 9.97 ಲಕ್ಷ 8.66 ಲಕ್ಷ (86.8%) 5.15%
ತುಮಕೂರು 25.51 ಲಕ್ಷ 21.88 ಲಕ್ಷ (85.6%) 4.69%
ಹಾವೇರಿ 16.63 ಲಕ್ಷ 14.05 ಲಕ್ಷ (84.5%) 11.38%
ಚಿಕ್ಕಮಗಳೂರು 10.31 ಲಕ್ಷ 8.41 ಲಕ್ಷ (81.6%) 3.74%
ಚಿತ್ರದುರ್ಗ 16.94 ಲಕ್ಷ 13.77 ಲಕ್ಷ (81.3%) 5.84%
ಚಿಕ್ಕಬಳ್ಳಾಪುರ 12.79 ಲಕ್ಷ 10.17 ಲಕ್ಷ (79.5%) 3.39%
ದಾವಣಗೆರೆ 16.50 ಲಕ್ಷ 13.03 ಲಕ್ಷ (79%) 5.95%

Karnataka BPL Card Misuse, Strict Action Soon

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories