ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಅನೇಕ ಜನರಿಗೆ ಸಹಾಯ ಆಗುತ್ತಿದೆ. ವಿದ್ಯುತ್ ಬಿಲ್ (Electricity Bill) ಕಟ್ಟುವ ಸಮಸ್ಯೆ ಇಲ್ಲದೇ ಹಲವರು ಉಚಿತ ವಿದ್ಯುತ್ (Free Electricity) ಬಳಕೆ ಮಾಡುತ್ತಿದ್ದಾರೆ. ಜನರಿಗೆ ಪ್ರತಿ ತಿಂಗಳು ಕೂಡ 200 ಯೂನಿಟ್ ವರೆಗು ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿದೆ.
ಕಳೆದ 1 ವರ್ಷದಿಂದ ಎಷ್ಟು ವಿದ್ಯುತ್ ಬಳಕೆ ಮಾಡಿರುತ್ತಾರೋ, ಅದರ ಆವರೇಜ್ ನಷ್ಟು ವಿದ್ಯುತ್ ಅನ್ನು ಜನರು ಉಚಿತವಾಗಿ ಬಳಸಬಹುದು, ಅದರ ಜೊತೆಗೆ 10% ಹೆಚ್ಚುವರಿ ವಿದ್ಯುತ್ ಕೂಡ ಬಳಕೆ ಮಾಡಬಹುದು.
ಇದು ಸರ್ಕಾರ ಗೃಹಜ್ಯೋತಿ ಫಲಾನುಭವಿಗಳಿಗೆ ನೀಡುತ್ತಿರುವ ಕೊಡುಗೆ ಆಗಿದೆ. ಗೃಹಜ್ಯೋತಿ ಯೋಜನೆ ಶುರುವಾಗಿ 1 ವರ್ಷ ತುಂಬುತ್ತಿರುವ ಈ ಸಮಯದಲ್ಲಿ ಇದೀಗ ಸರ್ಕಾರವು ಜನರಿಗಾಗಿ ಮತ್ತೊಂದು ಹೊಸ ಸೇವೆಯನ್ನು ಜಾರಿಗೆ ತಂದಿದೆ.
ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಅಂತ ತಿಳ್ಕೋಬೇಕಾ? ಸರ್ವೇ ನಂಬರ್ ಇದ್ರೆ ಸಾಕು ಚೆಕ್ ಮಾಡಿ
ಇದರ ಮೂಲಕ ಗೃಹಜ್ಯೋತಿ ಯೋಜನೆಯ ವಿಚಾರದಲ್ಲಿ ಇದ್ದ ಒಂದು ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅಷ್ಟಕ್ಕೂ ಈ ಸೇವೆ ಯಾವುದು? ಇದರಿಂದ ಯಾವ ರೀತಿಯ ಪ್ರಯೋಜನ ಇದೆ? ಪೂರ್ತಿಯಾಗಿ ತಿಳಿದುಕೊಳ್ಳೋಣ..
ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರು ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ನಿಮ್ಮ ಮನೆಯ RR ನಂಬರ್ ಅನ್ನು ಡಿಲಿಂಕ್ ಮಾಡಿ, ಹೊಸ ಮನೆಯ RR ನಂಬರ್ ಅನ್ನು ಲಿಂಕ್ ಮಾಡುವ ಮೂಲಕ ಮನೆ ಬದಲಾವಣೆ ಆದರೂ ಕೂಡ ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಬಹುದು. ಇದು ಸರ್ಕಾರದ ಹೊಸ ವ್ಯವಸ್ಥೆ ಆಗಿದ್ದು, ಈ ಪ್ರಕ್ರಿಯೆ ಮಾಡುವುದು ಹೇಗೆ ಎಂದು ಪ್ರೊಸಿಜರ್ ತಿಳಿಯೋಣ…
ಗೃಹಜ್ಯೋತಿ ಫ್ರೀ ಕರೆಂಟ್ ಬೇಕಾದ್ರೆ ಮೊದಲು ಡಿ-ಲಿಂಕ್ ಮಾಡಿಸಿ ಮತ್ತೆ ಅರ್ಜಿ ಸಲ್ಲಿಸಿ! ಬಿಗ್ ಅಪ್ಡೇಟ್
RR ನಂಬರ್ ಡಿಲಿಂಕ್ ಮಾಡುವ ಪ್ರಕ್ರಿಯೆ:
*RR ನಂಬರ್ ಡೀಲಿಂಕ್ ಮಾಡುವ ಕೆಲಸವನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಮಾಡಬೇಕಾಗುತ್ತದೆ.
https://sevasindhu.karnataka.gov.in/ ಈ ಲಿಂಕ್ ಗೆ ಮೊದಲು ಭೇಟಿ ನೀಡಿ.
*ಇಲ್ಲಿ ನೀವು ನಿಮ್ಮ ಮನೆಯ ಗೃಹಜ್ಯೋತಿ ಯೋಜನೆಗೆ ಲಿಂಕ್ ಮಾಡಿರುವ ಆಧಾರ್ ನಂಬರ್ ಎಂಟರ್ ಮಾಡಿ, Get Details ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಈಗ ನೀವು ಆಧಾರ್ ಕಾರ್ಡ್ ದೃಢೀಕರಿಸಲು ಓಟಿಪಿ ಪರಿಶೀಲಿಸಿ, ಅದನ್ನು ನಮೂದಿಸಿ, ದೃಡೀಕರಿಸಿ.
*ಇದೆಲ್ಲವೂ ಮುಗಿದ ನಂತರ ನಿಮ್ಮ ಹಳೆಯ RR ನಂಬರ್ ಡೀಲಿಂಕ್ ಮಾಡಿ, ಹಾಗೆಯೇ ಹೊಸ RR ನಂಬರ್ ಲಿಂಕ್ ಮಾಡಿ.
ಗೃಹಜ್ಯೋತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದು 1 ವರ್ಷ ಕಳೆಯುತ್ತಿದೆ. ಈ ವೇಳೆ ರಾಜ್ಯದ ಸುಮಾರು 1.65 ಕೋಟಿ ಜನರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡು, ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.
ನಿಮ್ಮ ಗ್ರಾಮಕ್ಕೆ ರಸ್ತೆ, ನಿಮ್ಮ ಜಮೀನಿಗೆ ದಾರಿ ಇರುವ ಗ್ರಾಮನಕ್ಷೆ ಬಿಡುಗಡೆ, ಡೌನ್ಲೋಡ್ ಮಾಡಿಕೊಳ್ಳಿ!
ಇದರಿಂದ ಬಡವರ್ಗದ ಹಾಗೂ ಮಧ್ಯಮ ವರ್ಗದ ಜನರಿಗೆ ಬಹಳ ಸಹಾಯ ಆಗುತ್ತಿದೆ ಎಂದು ತಿಳಿದುಬಂದಿದ್ದು, ಇದರ ಬಗ್ಗೆ ಸಚಿವರಾದ ಕೆ.ಜೆ. ಜಾರ್ಜ್ ಅವರಿ ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನರಿಗೆ ನೆರವು ನೀಡುತ್ತಿದೆ.
New rule to get free electricity for rent House beneficiaries
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.