ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಅಂತ ತಿಳ್ಕೋಬೇಕಾ? ಸರ್ವೇ ನಂಬರ್ ಇದ್ರೆ ಸಾಕು ಚೆಕ್ ಮಾಡಿ

ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆ ಹೇಗೆ ಎಂದು ತಿಳಿಯೋಣ.

Bengaluru, Karnataka, India
Edited By: Satish Raj Goravigere

ರೈತರು ಹಲವು ಕಾರಣಕ್ಕೆ ಸರ್ಕಾರದಿಂದ ಅಥವಾ ಬ್ಯಾಂಕ್ ಇಂದ ಸಾಲ (Bank Loan) ಪಡೆಯುತ್ತಾರೆ. ಹೌದು, ವ್ಯವಸಾಯ ಮಾಡುವುದೇನು ಸುಲಭ ಅಲ್ಲ. ಅದಕ್ಕಾಗಿ ಬಹಳಷ್ಟು ಹಣ ಖರ್ಚಾಗುತ್ತದೆ. ಹಾಗೆಯೇ ಕುಟುಂಬದ ಅಗತ್ಯತೆಗಳನ್ನು ಪೂರೈಸುವ ಪರಿಸ್ಥಿತಿ ಕೂಡ ಬರುತ್ತದೆ.

ಇಂಥ ಸಂದರ್ಭಗಳಲ್ಲಿ ರೈತರು ಸಾಲ (Loan) ಪಡೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ತಮ್ಮ ಜಮೀನನ್ನು ಅಡ ಇಟ್ಟು ಸಾಲ ಪಡೆದಿರುತ್ತಾರೆ. ಹಾಗಿದ್ದಲ್ಲಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ (Property Loan) ಇದೆ ಎಂದು ತಿಳಿಯೋದು ಮುಖ್ಯ ಅಲ್ವಾ?

Want to know how much debt you have on your land

ಹೌದು, ನಿಮ್ಮ ಬಳಿ ಜಮೀನು ಇದೆ ಎಂದರೆ, ಅದರ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯುವುದು ಬಹಳ ಮುಖ್ಯ. ಈ ಒಂದು ಕೆಲಸವನ್ನ ನೀವು ಬಹಳ ಸುಲಭವಾಗಿ ಮಾಡಬಹುದು. ರೈತರ ಬಳಿ ಅವರ ಜಮೀನಿನ ಸರ್ವೇ ನಂಬರ್ ಇರಬೇಕು, ಇದು ಕಡ್ಡಾಯ ಆಗಿರುತ್ತದೆ.

ಇದರ ಜೊತೆಗೆ ಸ್ಮಾರ್ಟ್ ಫೋನ್ ಇರಬೇಕು. ಇವೆರಡು ನಿಮ್ಮ ಹತ್ತಿರ ಇದ್ದರೆ, ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆ ಹೇಗೆ ಎಂದು ತಿಳಿಯೋಣ.

ಗೃಹಜ್ಯೋತಿ ಫ್ರೀ ಕರೆಂಟ್ ಬೇಕಾದ್ರೆ ಮೊದಲು ಡಿ-ಲಿಂಕ್ ಮಾಡಿಸಿ ಮತ್ತೆ ಅರ್ಜಿ ಸಲ್ಲಿಸಿ! ಬಿಗ್ ಅಪ್ಡೇಟ್

ಸಾಲದ ಮಾಹಿತಿ ಚೆಕ್ ಮಾಡುವ ವಿಧಾನ:

*ನಿಮ್ಮ ಫೋನ್ ಇಂದ ಸಾಲದ ಬಗ್ಗೆ ತಿಳಿಯಲು ಮೊದಲಿಗೆ ನೀವು
https://landrecords.karnataka.gov.in/Service2/ ಈ ಲಿಂಕ್ ಗೆ ಭೇಟಿ ನೀಡಿ
*ಈಗ ಹೋಮ್ ಪೇಜ್ ಓಪನ್ ಆಗುತ್ತದೆ.
*ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಇದಿಷ್ಟು ಮಾಹಿತಿಯನ್ನು ಹಾಕಿ, ನಂತರ ಸರ್ವೇ ನಂಬರ್ ಅನ್ನು ಹಾಕಿ, ಬಳಿಕ Go ಎನ್ನುವ ಆಪ್ಶನ್ ಕ್ಲಿಕ್ ಮಾಡಿ.
*ಈಗ ನೀವು ಇನ್ನಷ್ಟು ಮಾಹಿತಿಗಳನ್ನು ನೀಡಬೇಕಾಗುತ್ತದೆ.

*Surnoc, Hissa number, Period, Year ಇದಿಷ್ಟು ಪ್ರಮುಖ ಮಾಹಿತಿಗಳನ್ನು ವೆಬ್ಸೈಟ್ ನಲ್ಲಿ ಕೇಳುತ್ತದೆ. ಅವುಗಳನ್ನು ಸರಿಯಾಗಿ ನಮೂದಿಸಿ.

*ಬಳಿಕ View ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಇದಿಷ್ಟು ಕೆಲಸವಾದ ನಂತರ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ಕಾಣಸಿಗುತ್ತದೆ. ಇದರ ಮೂಲಕ ನಿಮ್ಮ ಜಮೀನಿನ ಮೇಲೆ ಎಷ್ಟು ಮೊತ್ತ ಸಾಲ ಇದೆ ಎನ್ನುವುದನ್ನು ನೀವು ವಿವರವಾಗಿ ತಿಳಿದುಕೊಳ್ಳಬಹುದು.

ನಿಮ್ಮ ಗ್ರಾಮಕ್ಕೆ ರಸ್ತೆ, ನಿಮ್ಮ ಜಮೀನಿಗೆ ದಾರಿ ಇರುವ ಗ್ರಾಮನಕ್ಷೆ ಬಿಡುಗಡೆ, ಡೌನ್ಲೋಡ್ ಮಾಡಿಕೊಳ್ಳಿ!

ಈ ರೀತಿಯಾಗಿ ಮಾಹಿತಿ ಪಡೆದು, ಹುಷಾರಾಗಿರಿ.

ಮೊದಲ ಕಾಲಂ ನಲ್ಲಿ ಜಮೀನಿನ ಓನರ್ ಹೆಸರು ಇರುತ್ತದೆ, ಸರ್ವೇ ನಂಬರ್ ನಲ್ಲಿ ಇರುವ ಹಾಗೆ ಇರುತ್ತದೆ. ಎರಡನೇ ಕಲಾಂ ನಲ್ಲಿ ಸರ್ವೇ ನಂಬರ್, ಕರಾಬು ಜಮೀನು ಕಂದಾಯದ ಮಾಹಿತಿ, ಆ ಜಮೀನಿನ ಮಣ್ಣಿನ ನಮೂನೆ ಎಂಥದ್ದು ಎಂದು ಮಾಹಿತಿ ಕಾಣುತ್ತದೆ.

ಹಾಗೆಯೇ ಸರ್ವೇ ನಂಬರ್ ನ ಅನುಸಾರ ಯಾವ ಮಾಲೀಕರ ಹೆಸರಿನಲ್ಲಿ ಎಷ್ಟು ಜಮೀನು ಇದೆ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ಸ್ವಾಧೀನದಾರರ ಹೆಸರು ಹಾಗೂ ಅವರ ಬಗ್ಗೆ ಕೂಡ ಮಾಹಿತಿ ಇರುತ್ತದೆ..ಇದು ಬಹಳ ಮುಖ್ಯವಾದ ಮಾಹಿತಿ ಆಗಿದ್ದು, ರೈತರಿಗೆ ಗೊತ್ತಿರುವುದು ಒಳ್ಳೆಯದು.

20 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಲು ಮುಂದಾದ ರಾಜ್ಯ ಸರ್ಕಾರ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ?

Want to know how much debt you have on your land