ಮೃತರ ಹೆಸರಲ್ಲಿ ಜಮೀನು ಇದ್ರೆ, ಯಾವುದೇ ಸರ್ಕಾರಿ ನೆರವು, ಕೃಷಿ ಸಬ್ಸಿಡಿ ಸಿಗಲ್ಲ!
ರಾಜ್ಯದಲ್ಲಿ ಮೃತರ ಹೆಸರಿನಲ್ಲಿರುವ ಲಕ್ಷಾಂತರ ಜಮೀನುಗಳಿಗೆ ಸರ್ಕಾರದಿಂದ ಸೌಲಭ್ಯ ಸಿಗುವುದಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಾರಸುದಾರರಿಗೆ ಹೆಸರಿನ ಬದಲಾವಣೆ ಅಗತ್ಯವಿದೆ ಎಂದು ತಿಳಿಸಿದರು.

- ಮೃತರ ಹೆಸರಲ್ಲಿ ಜಮೀನು ಇದ್ದರೆ ಕಿಸಾನ್ ಸಮ್ಮಾನ, ಕೃಷಿ ಸಬ್ಸಿಡಿ ಸಿಗದು
- ಪೌತಿ ಖಾತೆ ಅಭಿಯಾನ ಮೂಲಕ ವಾರಸುದಾರರ ಹೆಸರು ಸೇರಿಸಲಾಗುತ್ತಿದೆ
- ಭೂ ಸುರಕ್ಷೆ ಯೋಜನೆ ಮೂಲಕ 150 ವರ್ಷಗಳ ದಾಖಲೆಗಳು ಆನ್‌ಲೈನ್
ಬೆಂಗಳೂರು (Bengaluru): ಮೃತರ ಹೆಸರಿನಲ್ಲಿರುವ ಜಮೀನಿಗೆ (Property) ಯಾವುದೇ ಸರ್ಕಾರಿ ನೆರವು ಸಿಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ. ಕಿಸಾನ್ ಸಮ್ಮಾನ, ಪ್ರವಾಹ ಪರಿಹಾರ, ಕೃಷಿ ಸಬ್ಸಿಡಿ (Agriculture Subsidy) ಸೇರಿ ಯಾವುದೇ ನೆರವು ಪಡೆಯಲು ವಾರಸುದಾರರ ಹೆಸರಿನಲ್ಲೇ ದಾಖಲೆ ಇರಬೇಕು.
ರಾಜ್ಯದಲ್ಲಿ ಒಟ್ಟು 52.56 ಲಕ್ಷ ಜಮೀನು ಇನ್ನೂ ಮೃತರ ಹೆಸರಿನಲ್ಲೇ ದಾಖಲಾಗಿವೆ. ಇವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ 1.90 ಲಕ್ಷ ಜಮೀನು ಮೃತರ ಹೆಸರಿನಲ್ಲಿ ಇದೆ. ಇದರಲ್ಲಿ 57 ಸಾವಿರ ಜಮೀನು ರೈತರದ್ದು. ಇದನ್ನು ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕುಟುಂಬಗಳು ಸಹಕರಿಸದಿದ್ದಲ್ಲಿ ಆಸ್ತಿ ವರ್ಗಾವಣೆ ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಿಹಿ ಸುದ್ದಿ! ಸರ್ಕಾರಿ ಭೂಮಿಯ ಸಾಗುವಳಿ ರೈತರಿಗೆ ಶೀಘ್ರವೇ ಜಮೀನು ಮಂಜೂರು
ಜನರಿಗೆ ಆನ್‌ಲೈನ್ ಮೂಲಕ ಸುಲಭವಾಗಿ ಆಸ್ತಿ ದಾಖಲೆ (Property Documents) ನೀಡಲು ‘ಭೂ ಸುರಕ್ಷೆ’ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ 150 ವರ್ಷಗಳಷ್ಟು ಹಳೆಯ ದಾಖಲೆಗಳಿದ್ದು, ಅವು ಕಳೆದುಹೋಗಬಾರದು ಎಂಬ ಕಾರಣಕ್ಕೆ ಸ್ಕ್ಯಾನಿಂಗ್ ಕಾರ್ಯ ನಡೆಯುತ್ತಿದೆ. ಈಗಾಗಲೇ 100 ಕೋಟಿಗಿಂತ ಹೆಚ್ಚು ಪುಟಗಳಲ್ಲಿ ಶೇಕಡಾ 33ರಷ್ಟು ಡಿಜಿಟಲೀಕರಣವಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮನೆ ಇಲ್ಲದವರಿಗೆ 40 ಸಾವಿರ ಮನೆ ಹಂಚಿಕೆ! ನೀವೂ ಅರ್ಜಿ ಹಾಕಿದ್ರಾ
ಈ ಯೋಜನೆ ಪೂರ್ಣಗೊಂಡ ಬಳಿಕ ಜನರು ಮನೆಯಲ್ಲಿಯೇ ಕುಳಿತು ಆಸ್ತಿ ದಾಖಲೆ ಪಡೆದುಕೊಳ್ಳಬಹುದಾಗಿದೆ. ತಿಳಿಯದೇ ಇರುವವರು ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಪಡೆಯಬಹುದು. ಮುಂದಿನ ದಿನಗಳಲ್ಲಿ ಬಾಪೂಜಿ ಕೇಂದ್ರಗಳಲ್ಲಿಯೂ ಈ ಸೇವೆ ನೀಡುವ ಬಗ್ಗೆ ಸರ್ಕಾರ ಯೋಚಿಸಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಂತಾ, ಇಲ್ವಾ? ಎಷ್ಟು ಬಂದಿದೆ ಅಂತ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ
ಇದೆ ಸಂದರ್ಭದಲ್ಲಿ, ಪೌತಿ ಖಾತೆ ಅಭಿಯಾನ ಮುಗಿದ ನಂತರ, “ಪೋಡಿ ಮುಕ್ತ ಗ್ರಾಮ” ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಜೊತೆಗೆ, ಹಿಂದಿನ ಸರ್ಕಾರ ಬಾಕಿ ಇಟ್ಟಿದ್ದ ಸಾವಿರಾರು ಪ್ರಕರಣಗಳನ್ನು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮಟ್ಟದಲ್ಲಿ ತೀರ್ಮಾನಿಸಲಾಗಿದೆ ಎಂದರು.
No Subsidy if Land is in Dead Person’s Name




