Bengaluru NewsKarnataka News

ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಬಾಕಿ ಹಣದಲ್ಲಿ ಒಂದು ಕಂತು ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣದ ಕುರಿತಾಗಿ ಸರ್ಕಾರ ಕೇವಲ ಒಂದು ತಿಂಗಳ ಹಣವಷ್ಟೇ ಬಿಡುಗಡೆ ಮಾಡಿದ್ದು, ಫಲಾನುಭವಿ ಮಹಿಳೆಯರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

Publisher: Kannada News Today (Digital Media)

  • ಸದ್ಯಕ್ಕೆ ಕೇವಲ ₹2,000 ದಂತೆ ಒಂದು ಕಂತು ಬಿಡುಗಡೆ
  • ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ಷಮತೆಗೆ ಪ್ರಶ್ನಾರ್ಥಕ ಚಿಹ್ನೆ
  • ಬಾಕಿ ಹಣ ಬಂದಿಲ್ಲ: ಮಹಿಳೆಯರಿಂದ ಗಂಭೀರ ಪ್ರತಿಕ್ರಿಯೆ

ಬೆಂಗಳೂರು (Bengaluru): ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಸಾಧನಾ ಸಮಾವೇಶ ಕಾರ್ಯಕ್ರಮದ ಭಾಗವಾಗಿ, ರಾಜ್ಯ ಸರ್ಕಾರ ತನ್ನ ಗೃಹಲಕ್ಷ್ಮಿ ಯೋಜನೆy (Gruha lakshmi Scheme) ಫಲಾನುಭವಿ ಮಹಿಳೆಯರ ಖಾತೆಗೆ ಕೇವಲ ಒಂದು ತಿಂಗಳ ಹಣವಷ್ಟೇ ಜಮಾ ಮಾಡಿದೆ.

ಈ ಹಣವು ಮೇ 19ರಂದು, ₹2,000 ರೂಪಾಯಿ ರೂಪದಲ್ಲಿ ಫಲಾನುಭವಿಗಳ ಖಾತೆಗೆ (Bank Account) ವರ್ಗಾಯಿಸಲಾಗಿದೆ. ಆದರೆ ಈ ಹಿಂದೆ ಸರಕಾರವು ಮೂರು ತಿಂಗಳ ಬಾಕಿ ಹಣ ಒಟ್ಟಿಗೆ ಜಮಾ ಮಾಡಲಾಗುತ್ತದೆ ಎಂಬ ಭರವಸೆ ನೀಡಿತ್ತು.

ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಬಾಕಿ ಹಣದಲ್ಲಿ ಒಂದು ಕಂತು ಬಿಡುಗಡೆ

ಹಣ ಬಿಡುಗಡೆಗೆ ತೊಂದರೆ, ನಿರಂತರವಾಗಿ ಯೋಜನೆಯಡಿ ಹಣ ನೀಡುವಲ್ಲಿ ವಿಳಂಬ ಆಗುತ್ತಿರುವುದು, ತಾಂತ್ರಿಕ ದೋಷಗಳು ಮತ್ತು ಬ್ಯಾಂಕ್ ಖಾತೆಗಳ ಸಮಸ್ಯೆಗಳು (bank account errors) ಮುಖ್ಯ ಕಾರಣಗಳಾಗಿ ಸರ್ಕಾರ ಗುರುತಿಸಿದೆ.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಮಿನಿ ಟ್ರ್ಯಾಕ್ಟರ್‌ ಸೇರಿದಂತೆ ಬಂಪರ್ ಸಬ್ಸಿಡಿ ಯೋಜನೆಗಳು

ಹಲವಾರು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ತಮ್ಮ ದಿನನಿತ್ಯದ ಖರ್ಚನ್ನು ನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚಿನ ಹಣ ವಿಳಂಬದಿಂದ ಅವರಿಗೆ ಸಮಸ್ಯೆಯಾಗಿದೆ.

2023ರ ಆಗಸ್ಟ್ ತಿಂಗಳಿನಿಂದ ಯೋಜನೆ ಜಾರಿಗೆ ಬಂದಿದ್ದು, ಈಗಾಗಲೇ ಸುಮಾರು 1.28 ಕೋಟಿ ಮಹಿಳೆಯರಿಗೆ ₹50,000 ಕೋಟಿ ಹಣವನ್ನು ಒದಗಿಸಲಾಗಿದೆ. ಆದರೆ, ನಿರಂತರತೆ ಕೊರತೆಯೇ ಪ್ರಮುಖ ತೊಂದರೆಯಾಗಿದೆ.

Lakshmi Hebbalkar

ಈ ಯೋಜನೆ ರಾಜ್ಯದ (Karnataka) ಮಹಿಳೆಯರನ್ನು ಆರ್ಥಿಕವಾಗಿ ಉತ್ತೇಜಿಸಲು ರೂಪುಗೊಂಡಿದ್ದು, ಈಗ ಹಣ ಪಾವತಿಯಲ್ಲಿ ವಿಳಂಬ ಪ್ರಶ್ನೆಗೆ ಒಳಗಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar), ಈ ಹಿಂದೆ “ಒಟ್ಟಿಗೆ ಮೂರು ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡಲಾಗುವುದು” ಎಂದು ಹೇಳಿದ್ದರು. ಆದರೆ ಕೇವಲ ಒಂದು ಕಂತಿನ ಹಣವಷ್ಟೇ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಇಂತಹವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್! ಗೃಹಲಕ್ಷ್ಮಿ ಹಣಕ್ಕೂ ಕಂಟಕ

ಇದರಿಂದ ಹಲವಾರು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಸಾಧನಾ ಸಮಾವೇಶದ ನಂತರ ಉಳಿದ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ ಮಾತ್ರ ಉಳಿದಿದೆ.

Gruha Lakshmi Scheme

ಮಹಿಳೆಯರ ದಿನನಿತ್ಯದ ಖರ್ಚುಗಳಿಗೆ ನೆರವಾಗುವಂತೆ ಈ ಯೋಜನೆ ರೂಪಿತವಾಗಿದ್ದು, ಇದೀಗ ಅದರ ಭದ್ರತೆ ಮತ್ತು ನಂಬಿಕೆ ಮೇಲೆ ಗಂಭೀರ ಪ್ರಶ್ನೆಗಳು ಉದಯವಾಗುತ್ತಿವೆ.

ಇದನ್ನೂ ಓದಿ: 2 ಸಾವಿರದ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಪ್ಲಾನ್! ಸರ್ಫ್ರೈಸ್ ತಯಾರಿ

ಇನ್ನೂ ಯಾರಿಗೆಲ್ಲಾ ಯೋಜನೆಯ ಹಣ ತಲುಪಿಲ್ಲವೋ ಅವರು ಈ ತಿಂಗಳ ಕೊನೆಯ ತನಕ ಕಾಯಬೇಕಾಗುತ್ತದೆ, ಕಾರಣ ಸರ್ಕಾರ ಪಾವತಿಯನ್ನು ಹಂತ ಹಂತವಾಗಿ ಪೂರ್ಣಗೊಳಿಸುತ್ತದೆ.

Only One Installment Released in Gruha lakshmi Scheme

English Summary

Related Stories