ಬೆಂಗಳೂರು ಬಂದ್ ಎಫೆಕ್ಟ್, ಇವತ್ತು ಏನಿರುತ್ತೆ ಏನಿರಲ್ಲ ಗೊತ್ತೇ? ಅಷ್ಟಕ್ಕೂ ಬಂದ್ ನಿಜವಾದ ಕಾರಣವೇನು

Story Highlights

ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಬೆಂಗಳೂರಿನ ಟ್ಯಾಕ್ಸಿ ಮತ್ತು ಬಸ್ ಅಸೋಸಿಯೇಷನ್ (Taxi and bus association) ಗಳು ಇಂದು ಅಂದರೆ ಸೆಪ್ಟೆಂಬರ್ 11 2023ರಂದು ಬೆಂಗಳೂರಿನಲ್ಲಿ ಮುಷ್ಕರ (strike) ಘೋಷಣೆ ಮಾಡಿವೆ.

Bengaluru Bandh Today : ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಶಕ್ತಿ ಯೋಜನೆ (Shakti Scheme), ಆಗಸ್ಟ್ 19ನೇ ತಾರೀಖಿನಿಂದ ಜಾರಿಗೆ ಬಂದಿದೆ, ಆದರೆ ಶಕ್ತಿ ಯೋಜನೆಯ ಆರಂಭವಾದ ಬಳಿಕ ಖಾಸಗಿ ಸಂಸ್ಥೆಯ ವಾಹನಗಳಿಗೆ (Private Vehicles) ಆದಾಯ ಕಡಿಮೆ ಆಗಿದೆ

ಉಚಿತ ಬಸ್ ನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಂದಾಗಿ ಖಾಸಗಿ ವಾಹನಗಳಾದ ಬಸ್, ಟ್ಯಾಕ್ಸಿ, ಆಟೋ ಮೊದಲಾದವು ಆದಾಯವಿಲ್ಲದೆ ನಷ್ಟ ಅನುಭವಿಸುವಂತೆ ಆಗಿದೆ.

ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಬೆಂಗಳೂರಿನ ಟ್ಯಾಕ್ಸಿ ಮತ್ತು ಬಸ್ ಅಸೋಸಿಯೇಷನ್ (Taxi and bus association) ಗಳು ಇಂದು ಅಂದರೆ ಸೆಪ್ಟೆಂಬರ್ 11 2023ರಂದು ಬೆಂಗಳೂರಿನಲ್ಲಿ ಮುಷ್ಕರ (strike) ಘೋಷಣೆ ಮಾಡಿವೆ.

ಫ್ರೀ ಬಸ್! ಶಕ್ತಿ ಯೋಜನೆ ಕುರಿತು ಮಹತ್ವದ ನಿರ್ಧಾರ, ಹಣ ಕಟ್ಟಿ ಪ್ರಯಾಣ ಮಾಡುವಂತೆ ಆದೇಶ

ಬಂದ್ ನಿಂದಾಗಿ ಏನಿರುತ್ತೆ ಏನಿಲ್ಲ?

ಬೆಂಗಳೂರಿನ ಖಾಸಗಿ ಟ್ಯಾಕ್ಸಿ ಮತ್ತು ಬಸ್ ಅಸೋಸಿಯೇಷನ್ ನವರು ಈ ದಿನ ಮುಷ್ಕರ ಘೋಷಣೆ ಮಾಡಿದ್ದಾರೆ, ಇದರಿಂದಾಗಿ ಇಂದು ಹೆಚ್ಚಿನ ಖಾಸಗಿ ಸಾರಿಗೆಗಳು ಮುಚ್ಚಿರುವ ಸಾಧ್ಯತೆ ಇದೆ. ಇನ್ನು ಸೋಮವಾರದ ದಿನ ಐಟಿ ಉದ್ಯೋಗಿಗಳು ಅಥವಾ ಇತರ ಪ್ರಯಾಣಿಕರಿಗೆ ಖಾಸಗಿ ವಾಹನಗಳು ಸಿಗದೆ ಇರುವ ಕಾರಣ ಬೇಡಿಕೆ ಪೂರೈಸಲು ಬಿಎಂಟಿಸಿ ಹೆಚ್ಚುವರಿ ಬಸ್ (BMTC Bus) ಓಡಿಸಲಿದೆ.

ರಾಜ್ಯದಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ ಹಲವರಿಗೆ ಸಮಸ್ಯೆ ಆಗಿದೆ. ಈಗಾಗಲೇ ಬಸ್ಸುಗಳಲ್ಲಿ ನೂಕು ನುಗ್ಗಲು ಉಂಟಾಗಿರುವ ಬಗ್ಗೆ ಹಲವು ವರದಿಯನ್ನು ನೀವು ನೋಡಿರಬಹುದು

ಇದರ ಜೊತೆಗೆ ಖಾಸಗಿ ಉದ್ಯಮಿಗಳು ತಮಗೆ ಆದಾಯ ಬರುತ್ತಿಲ್ಲ ಎಂದು ಶಕ್ತಿ ಯೋಚನೆಗೆ ಸಿಗುವಂತೆ ತಮಗೂ ಕೂಡ ವಿಶೇಷ ಸೌಲಭ್ಯ ಕೊಡಬೇಕು ನಮ್ಮ ನಷ್ಟವನ್ನು ಬರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಜನರ ಇಷ್ಟದಂತೆ ನಡೆದುಕೊಳ್ಳಲು ನಿರ್ಧರಿಸಿದ ಸರ್ಕಾರ

ಇನ್ನು ಖಾಸಗಿ ವಾಹನ ಅಸೋಸಿಯೇಷನ್ ನ ಬೇಡಿಕೆ ಏನೆಂದರೆ

Bengaluru Bandh Today• ಪ್ರತಿ ಚಾಲಕನಿಗೆ 10 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಬೇಕು
• ಬೈಕ್ ಟ್ಯಾಕ್ಸಿಗಳ ನಿಷೇಧ ಮಾಡಬೇಕು
• ಅಪ್ಲಿಕೇಶನ್ ಆಧಾರಿತ ಅಗ್ರಿಗೆಟರ್ ಗಳನ್ನೂ ನಿಷೇಧ ಮಾಡಬೇಕು
• ಖಾಸಗಿ ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಕಡಿಮೆ ಬಡ್ಡಿ ದರದಲ್ಲಿ ಸಾಲಗಳು ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕು
• ಅಸಂಘಟಿತ ವಾಣಿಜ್ಯ ಚಾಲಕರನ್ನು ಬೆಂಬಲಿಸುವುದಕ್ಕಾಗಿ ನಿಗಮ ಸ್ಥಾಪನೆ ಮಾಡಬೇಕು

ಇಷ್ಟು ಖಾಸಗಿದಾರರ ಬೇಡಿಕೆಗಳು…

ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗದೆ ಇರಲು ಈ ನಿಮ್ಮ ತಪ್ಪುಗಳೇ ಕಾರಣ!

ರಾಜ್ಯ ಸರ್ಕಾರದ ಜೊತೆಗೆ ಈಗಾಗಲೇ ಖಾಸಗಿ ಸಾರಿಗೆ ಅಸೋಸಿಯೇಷನ್ ಸದಸ್ಯರು ಮಾತನಾಡಿದ್ದು ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಹಾಗಾಗಿ ಮುಷ್ಕರವನ್ನು ಮುಂದೂಡಲಾಗಿತ್ತು. ಸಚಿವ ರಾಮಲಿಂಗಾ ರೆಡ್ಡಿ ತಮ್ಮ 30 ಬೇಡಿಕೆಗಳಲ್ಲಿ 28 ಬೇಡಿಕೆಗಳನ್ನು ಭರವಸೆ ಕೊಟ್ಟಿದ್ದರು

ಆದರೆ ತಿಂಗಳು ಕಳೆಯುತ್ತಾ ಬಂದರೂ ಯಾವುದೇ ರೀತಿಯ ಚರ್ಚೆ ಮಾಡದೇ ಇರುವುದಕ್ಕಾಗಿ ಈ ದಿನ ಮುಷ್ಕರ ನಡೆಸುತ್ತಿದ್ದೇವೆ ಎಂದು ಫೆಡರೇಷನ್ ಆಫ್ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘದ ಅಧಿಕಾರಿ ತಿಳಿಸಿದ್ದಾರೆ.

ಇಂದು ಈ ಸೌಲಭ್ಯಗಳು ಇರುವುದಿಲ್ಲ

ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಟ್ಯಾಕ್ಸಿ ಸೌಲಭ್ಯ ಇರುವುದಿಲ್ಲ ಹಾಗಾಗಿ ಬಿಎಂಟಿಸಿ ವಾಯು ವಜ್ರ ಬಸ್ ಅಥವಾ ಸ್ವಂತ ವಾಹನದಲ್ಲಿಯೇ ಹೋಗಬೇಕು. ಓಲಾ, ಉಬರ್ ಇತರ ಖಾಸಗಿ ಕ್ಯಾಬ್ ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದೆ

ಹಾಗಾಗಿ ಇಂತಹ ಟ್ಯಾಕ್ಸಿಗಳು ಕೂಡ ಲಭ್ಯ ಇರುವುದಿಲ್ಲ. ಆಟೋರಿಕ್ಷಾ ಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು ಇವತ್ತು ಆಟೋರಿಕ್ಷಗಳು (Auto rickshaw) ಲಭ್ಯವಿಲ್ಲ, ಖಾಸಗಿ ಬಸ್ಸುಗಳು ಬೆಂಗಳೂರಿನಿಂದ ಹೊರಗೆ ಹೋಗುವುದು ಅಥವಾ ಬೇರೆ ರಾಜ್ಯದಿಂದ ಬೆಂಗಳೂರಿಗೆ ಬರುವಂತಿಲ್ಲ.

ಇವು ತೆರೆದಿರುತ್ತವೆ:

ಎಲ್ಲಿ ಎಂತಹ ಮುಷ್ಕರವಾಗಿದ್ದರು ತುರ್ತು ಸೇವೆಗಳನ್ನು ನೀಡಲಾಗುತ್ತದೆ ಹಾಗಾಗಿ ಆಂಬುಲೆನ್ಸ್, ಔಷಧಗಳು ಹಾಗೂ ಪ್ರಮುಖ ಸರಕುಗಳನ್ನು ಸಾಗಿಸುವ ವಾಹನಗಳು ಚಲಾವಣೆಯಲ್ಲಿ ಇರುತ್ತವೆ. ಆಹಾರ ದಿನಸಿ ದೈನಂದಿನ ಅಗತ್ಯ ಸಾರಿಗೆಗಳು ರಸ್ತೆಯಲ್ಲಿ ಓಡಾಡುತ್ತವೆ.

ಬಿಎಂಟಿಸಿ ಬಸ್ ಗಳು ಮೆಟ್ರೋ ರೈಲ್ ಸೇರಿದಂತೆ ಸಾರ್ವಜನಿಕ ಸಾರಿಗೆ ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಇಂದು ಬಿಎಂಟಿಸಿ ಹೆಚ್ಚುವರಿ ಬಸ್ ಓಡಿಸುವ ಸಾಧ್ಯತೆ ಇದೆ.

Outrage Against Free Bus Shakti Yojana, Bengaluru Bandh Today