ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗದೆ ಇರಲು ಈ ನಿಮ್ಮ ತಪ್ಪುಗಳೇ ಕಾರಣ!
ಗೃಹಲಕ್ಷ್ಮಿ ಯೋಜನೆ ಒಂದು ಮಹತ್ವದ ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ಅವರ ಖಾತೆಗೆ ನೇರವಾಗಿ 2000 ರೂಪಾಯಿಗಳು ಜಮಾ ಆಗಲಿದೆ.
ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲೂ ಮೊದಲ ಆದ್ಯತೆ ನೀಡುತ್ತಿದೆ. ಮಹಿಳಾ ಸಬಲೀಕರಣ ಕಾಂಗ್ರೆಸ್ ಪಕ್ಷದ ಮೊದಲ ಆದ್ಯತೆಯಾಗಿದೆ. ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಈಗಾಗಲೇ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದೆ.
ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಕಾಂಗ್ರೆಸ್ ಸರ್ಕಾರವು ತಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ಪ್ರಯತ್ನಕ್ಕೆ ಸಾರ್ವಜನಿಕರು ಸಹ ಕೈಜೋಡಿಸಿದ್ದಾರೆ.
ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.
ಯಾವುದೇ ವಾಹನ ಕೊಳ್ಳುವುದಿದ್ರು ಸರ್ಕಾರದಿಂದ ಪಡೆಯಿರಿ ಮೂರು ಲಕ್ಷ ರೂಪಾಯಿ ಸಹಾಯಧನ!
ಇನ್ನು ಯೋಚನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಒಂದು ಮಹತ್ವದ ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ಅವರ ಖಾತೆಗೆ (Bank Account) ನೇರವಾಗಿ 2000 ರೂಪಾಯಿಗಳು ಜಮಾ ಆಗಲಿದೆ.
ಇನ್ನು ಯೋಜನೆಯ ಲಾಭವನ್ನು ರಾಜ್ಯದ ಪ್ರತಿಯೊಬ್ಬ ಮಹಿಳೆಯು ಪಡೆಯಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಇನ್ನು ಅದರಂತೆ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ 1.28 ಕೋಟಿಗೂ ಅಧಿಕ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಇನ್ನು ಈ ಅರ್ಜಿಗಳನ್ನು ಪರಿಶೀಲಿಸಿ, ಸರ್ಕಾರವು ಇದೆ ಆಗಸ್ಟ್ 30 ರಂದು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ 2000 ಹಣ ಜಮಾ ಮಾಡಿದೆ.
ಆಗಸ್ಟ್ 30 ರಂದು ಮಹಾಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ಸರ್ಕಾರವು ಚಾಲನೆ ನೀಡಿತ್ತು. ಇನ್ನು ಈಗಾಗಲೇ ಲಕ್ಷಗಳಲ್ಲಿ ಮಹಿಳಾ ಫಲಾನುಭವಿಗಳು ತಮ್ಮ ಖಾತೆಗೆ ಜಮಾ ಆಗಿರುವುದರಿಂದ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ಹಸು, ಕುರಿ, ಕೋಳಿ ಸಾಕುವವರಿಗೆ ಸಿಗುತ್ತೆ ಸರ್ಕಾರದಿಂದ ಸುಲಭ ಸಾಲ, ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ
ಆದರೆ ಇನ್ನೂ ಸಾಕಷ್ಟು ಮಹಿಳಾ ಫಲಾನುಭವಿಗಳಿಗೆ 2000 ರೂಪಾಯಿಗಳು ತಮ್ಮ ಬ್ಯಾಂಕಿನ ಖಾತೆಗೆ (Bank Account) ಜಮಾ ಆಗದೇ ಇರುವುದರಿಂದ ಅವರು ಬೇಸರಗೊಂಡಿದ್ದಾರೆ. ಇಂದು ನಮ್ಮ ಈ ಪುಟದಲ್ಲಿ ಯಾವ ಕಾರಣದಿಂದ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ನೀವು ಪಡೆಯಲಾಗುತ್ತಿಲ್ಲ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತೇವೆ ಬನ್ನಿ…
೧). ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗದೆ ಇರುವ ಕಾರಣ ಸರ್ಕಾರ ಹಣ ಜಮಾ ಮಾಡಿದ್ದರು ಸಹ ನಿಮ್ಮ ಖಾತೆಗೆ ಹಣ ಬಂದಿಲ್ಲ.
೨). ಇನ್ನು ಅನೇಕರು ತಮ್ಮ ಪಡಿತರ ಚೀಟಿಯಲ್ಲಿ (Ration Card) ಮಹಿಳಾ ಯಜಮಾನಿ ಇರುವ ಬದಲು ಪುರುಷ ಯಜಮಾನ ಇರುವ ಕಾರಣ ಇಂಥವರಿಗೋಸ್ಕರ ಗೃಹಲಕ್ಷ್ಮಿ ಯೋಜನೆ ಲಾಭ ಇನ್ನು ದೊರಕಿಲ್ಲ.
೩). ಹಲವು ಮಹಿಳೆಯರ ಬ್ಯಾಂಕ್ ಅಕೌಂಟ್ ಚಾಲ್ತಿಯಲ್ಲಿಲ್ಲ (Bank Account Not Active), ವಹಿವಾಟು ನಡಸದೇ ಇರುವುದರಿಂದ ಅಕೌಂಟ್ ಸಮಸ್ಯೆ ಎದುರಿಸುತ್ತಿದ್ದಾರೆ.
ರಾಜ್ಯದ ಎಲ್ಲಾ ಬ್ಯಾಂಕ್ಗಳಲ್ಲಿ ಇನ್ನು ಕನ್ನಡ ಬಳಕೆ ಕಡ್ಡಾಯ! ಕನ್ನಡ ಗೊತ್ತಿಲ್ಲ ಅನ್ನೊಂಗಿಲ್ಲ
೪). ಆಧಾರ್ ಸಿಡಿಂಗ್ (Aadhaar Seeding) ಆಗದೇ ಇರುವುದು ಸಹ ಹಲವು ಮಹಿಳೆಯರಿಗೆ ಸಮಸ್ಯೆ ಆಗಿದೆ.
೫). ಇನ್ನೂ ಕೆಲವರ ರೇಷನ್ ಕಾರ್ಡ್ ಸರಿಯಾಗಿ ಅಪ್ಡೇಟ್ (Ration Card Update) ಆಗದೆ ಇದ್ದುದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಇನ್ನು ನೀವು ಗೃಹಲಕ್ಷ್ಮಿ ಯೋಜನೆಯ ಸಾವಿರ ರೂಪಾಯಿಗಳನ್ನು ಪಡೆಯಬೇಕಾದರೆ ಮೊದಲು ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಈ ತಪ್ಪುಗಳನ್ನು ಸರಿಪಡಿಸಿಕೊಂಡ ನಂತರ ನಿಮ್ಮ ಖಾತೆಗೆ ಮುಂದಿನ ತಿಂಗಳಿನಿಂದ ಹಣ ಜಮಾ ಆಗಲು ಶುರುವಾಗುತ್ತದೆ.
Reasons for why Gruha Lakshmi Yojana money is not credited to your Bank account