ಯಾವುದೇ ವಾಹನ ಕೊಳ್ಳುವುದಿದ್ರು ಸರ್ಕಾರದಿಂದ ಪಡೆಯಿರಿ ಮೂರು ಲಕ್ಷ ರೂಪಾಯಿ ಸಹಾಯಧನ!

ಯಾವುದೇ ಬ್ಯಾಂಕ್ (Bank Loan) ನಲ್ಲಿ ಈ ಒಂದು ಸಾಲ ಸೌಲಭ್ಯ ಮಂಜೂರು ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ನೀವು ಖರೀದಿಸುವ ವಾಹನದ (Vehicle) ಮೇಲೆ 50% ನಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ಸರ್ಕಾರ ಕೊಡುತ್ತದೆ.

ವಾಹನ ಚಾಲಕರಾಗಲು(Driving Vehicle) ಬಯಸಿದರೆ ಅಥವಾ ನಿಮ್ಮದೇ ಆಗಿರುವ ವಾಹನ ಖರೀದಿ ಮಾಡಿ ಅದನ್ನು ಟ್ಯಾಕ್ಸಿ (Taxi) ಯಾಗಿ ಓಡಿಸಲು ಬಯಸಿದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ.

ನೀವು ಸರ್ಕಾರದ ಸಹಾಯದಿಂದ ನೀವು ಖರೀದಿಸುವ ಮೊತ್ತದ ಅರ್ಧದಷ್ಟು ಹಣವನ್ನು ಸರ್ಕಾರದಿಂದಲೇ ಪಡೆಯಬಹುದು, ಇನ್ನು ಅರ್ಧದಷ್ಟು ಹಣವನ್ನು ಮಾತ್ರ ನೀವು ಪಾವತಿಸಿದರೆ ಆಯ್ತು.

ದಾಖಲೆಗಳು ಕೂಡ ನೀವು ಕೊಡಬೇಕಾಗಿಲ್ಲ ಯಾವುದೇ ಬ್ಯಾಂಕ್ (Bank Loan) ನಲ್ಲಿ ಈ ಒಂದು ಸಾಲ ಸೌಲಭ್ಯ ಮಂಜೂರು ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ನೀವು ಖರೀದಿಸುವ ವಾಹನದ (Vehicle) ಮೇಲೆ 50% ನಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ಸರ್ಕಾರ ಕೊಡುತ್ತದೆ.

ಯಾವುದೇ ವಾಹನ ಕೊಳ್ಳುವುದಿದ್ರು ಸರ್ಕಾರದಿಂದ ಪಡೆಯಿರಿ ಮೂರು ಲಕ್ಷ ರೂಪಾಯಿ ಸಹಾಯಧನ! - Kannada News

ಹಸು, ಕುರಿ, ಕೋಳಿ ಸಾಕುವವರಿಗೆ ಸಿಗುತ್ತೆ ಸರ್ಕಾರದಿಂದ ಸುಲಭ ಸಾಲ, ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ

ಸರ್ಕಾರದ ಹೊಸ ಯೋಜನೆ ಸ್ವಾವಲಂಬಿ ಸಾರಥಿ: (Swavalambi Sarathi Scheme)

ನಿಮಗೆ 18ರಿಂದ 55 ವರ್ಷ ವಯಸ್ಸಾಗಿದ್ದರೆ ನೀವು ಗಾಡಿ ಓಡಿಸಲು ಡ್ರೈವಿಂಗ್ ಲೈಸೆನ್ಸ್ (Driving Licence) ಹೊಂದಿದ್ದರೆ ಈ ಯೋಜನೆಯ ಫಲಾನುಭವಿಗಳಾಗಬಹುದು.

ರಾಜ್ಯ ಸರ್ಕಾರದ ಅತ್ಯುತ್ತಮ ಯೋಜನೆಗಲ್ಲಿ ಒಂದಾಗಿರುವ ಸ್ವಾವಲಂಬಿ ಸಾರಥಿ ಯೋಜನೆಯ ಮೂಲಕ ಟ್ಯಾಕ್ಸಿ, ಆಟೋರಿಕ್ಷಾ ಅಥವಾ ಸರಕು ವಾಹನಗಳನ್ನು ಖರೀದಿ ಮಾಡಲು ಬಯಸುವವರು ಅರ್ಧ ಹಣವನ್ನು ಸರ್ಕಾರದಿಂದಲೇ ಉಚಿತವಾಗಿ ಪಡೆಯಬಹುದಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆಗೆ ಬೇಕಾಗಿರುವ ದಾಖಲೆಗಳು

Swavalambi Sarathi Scheme

ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸರ್ಕಾರ ಕೊಡುತ್ತೆ 10 ಸಾವಿರ! ಎಷ್ಟೋ ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತಿಲ್ಲ

ಸಕ್ಷಮ ಪ್ರಾಧಿಕಾರದಿಂದ ಜಾತಿ ಪ್ರಮಾಣ ಪತ್ರ (Caste Certificate) ಪಡೆದಿರಬೇಕು

ಅದೇ ರೀತಿ ಆದಾಯ ಪ್ರಮಾಣ ಪತ್ರ (Income Certificate) ಕೂಡ ಹೊಂದಿರಬೇಕು.

ಆಧಾರ್ ಕಾರ್ಡ್ (Adhaar Card) ಪ್ರತಿ ಕೊಡಬೇಕು

ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು

ಬ್ಯಾಂಕ್ ಪಾಸ್ ಬುಕ್ (Bank Passbook) ಪ್ರತಿ ಕೊಡಬೇಕು

ವಾಹನ ಖರೀದಿಸಲು ಇಚ್ಛೆ ಪಡುವ ವಾಹನದ ಅಂದಾಜು ಮೊತ್ತ ಎಷ್ಟು ಎಂಬುದರ ದರಪಟ್ಟಿ ಸಲ್ಲಿಸಬೇಕು

ಸ್ವಯಂ ಘೋಷಣಾ ಪತ್ರ ಕೊಡಬೇಕು

ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು (Photo) ಸಲ್ಲಿಸಬೇಕು

ಅರ್ಜಿದಾರ ಅಥವಾ ಕುಟುಂಬದ ಸದಸ್ಯರು ವಾಹನ ಖರೀದಿ ಮಾಡುವುದಿದ್ದರೆ ರಾಜ್ಯ ಸರ್ಕಾರದ ಬೇರೆ ಯೋಚನೆ ಅಡಿಯಲ್ಲಿ ಸಾಲ ಪಡೆದುಕೊಂಡಿರಬಾರದು, ಈ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪ್ರಮಾಣ ಪತ್ರ ತರಬೇಕು.

ಯೋಜನೆಯ ಅಡಿಯಲ್ಲಿ ವಾಹನ ಖರೀದಿ ಮಾಡಿ ಅದನ್ನು ಬೇರೆಯವರಿಗೆ ಪರಬಾವೆ (Transfer to others) ಮಾಡುವುದಿಲ್ಲ ಎನ್ನುವ ಬಗ್ಗೆ ದೃಡೀಕರಣ ಪತ್ರವನ್ನು ಕೊಡಬೇಕು.

ಸಣ್ಣ ಜಮೀನು ಇದ್ದರೂ ಸಾಕು, ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ! ಕೇಂದ್ರ ಸರ್ಕಾರದ ಹೊಸ ಯೋಜನೆ

ಅರ್ಜಿ ಸಲ್ಲಿಸುವುದು ಹೇಗೆ

ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ https://kmdconline.karnataka.gov.in/Portal/login ಸಹಾಯದಿಂದ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25 2023.

ಸಾವಲಂಬಿ ಸಾರಥಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು;

ರಾಜ್ಯದಲ್ಲಿ ವಾಸಿಸುವ ಧಾರ್ಮಿಕ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು ( ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಜೈನ, ಬೌದ್ಧ)

ಕರ್ನಾಟಕದ ಶಾಶ್ವತ ನಿವಾಸಿ ಆಗಿರಬೇಕು

18 ರಿಂದ 55 ವರ್ಷಗಳ ನಡುವಿನ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು.

ಕುಟುಂಬಕ್ಕೆ ಒಟ್ಟು ಮೂಲದಿಂದ ಬರುವ ವಾರ್ಷಿಕ ಆದಾಯ 4.50 ಲಕ್ಷ ರೂಪಾಯಿಗಳನ್ನು ಮೀರುವಂತಿಲ್ಲ.

ಕುಟುಂಬದ ಯಾವುದೇ ಸದಸ್ಯರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉದ್ಯೋಗಿ ಆಗಿರಬಾರದು.

ಕುಟುಂಬದ ಸದಸ್ಯರು ಅಥವಾ ಅರ್ಜಿದಾರ ಯಾವುದೇ ಇತರ ಸರ್ಕಾರಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದಿರಬಾರದು.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಈ ಯೋಜನೆಗೆ ಚಾಲನೆ ನೀಡಿದ್ದು, ಸ್ವಾವಲಂಬಿಯಾಗಿ ಬದುಕಲು ಬಯಸುವ ಯುವಕ ಯುವತಿಯರು ವಾಹನ ಖರೀದಿಗೆ 3 ಲಕ್ಷ ರೂಪಾಯಿ ಅಥವಾ ವಾಹನದ ಅರ್ಧದಷ್ಟು ಹಣವನ್ನು ಪಡೆದುಕೊಳ್ಳಬಹುದು.

Get a subsidy of Rs 3 lakh from the government on buying any vehicle

Follow us On

FaceBook Google News

Get a subsidy of Rs 3 lakh from the government on buying any vehicle