ಹಸು, ಕುರಿ, ಕೋಳಿ ಸಾಕುವವರಿಗೆ ಸಿಗುತ್ತೆ ಸರ್ಕಾರದಿಂದ ಸುಲಭ ಸಾಲ, ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ

ನಮ್ಮ ರಾಜ್ಯ ಸರ್ಕಾರವು ಕೂಡ ರಿಯಾಯಿತಿ ಬಡ್ಡಿ ದರದಲ್ಲಿ ಪಶು ಸಂಗೋಪನಾ (Animal husbandry) ಚಟುವಟಿಕೆಯನ್ನು ಮುನ್ನಡೆಸಿಕೊಂಡು ಹೋಗಲು ಸಾಲ ಸೌಲಭ್ಯ (Loan Facility) ನೀಡಿ ಪಶು ಸಂಗೋಪನೆಯನ್ನು ಪ್ರೋತ್ಸಾಹಿಸುತ್ತಿದೆ.

ಸರ್ಕಾರ ಹಲವು ಯೋಜನೆಯನ್ನು ಜಾರಿಗೆ ತರುತ್ತದೆ. ಅದರಲ್ಲೂ ರೈತರನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಯೋಜನೆಗಳನ್ನು (Govt Schemes) ಜಾರಿಗೆ ತರಲಾಗಿದೆ. ರೈತರು ನಮ್ಮ ದೇಶದ ಬೆನ್ನೆಲುಬು.

ರೈತರ ಬೆಳೆ ಸರಿಯಾಗಿ ಬೆಳೆದರೆ ಅಥವಾ ರೈತರು (Farmer) ಪಶುಸಂಗೋಪನೆ (Animal husbandry), ಉದ್ದಿಮೆ ಸರಿಯಾಗಿ ನಡೆಸಿದರೆ ಮಾತ್ರ ದೇಶದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ನಮ್ಮ ರಾಜ್ಯ ಸರ್ಕಾರವು ಕೂಡ ರಿಯಾಯಿತಿ ಬಡ್ಡಿ ದರದಲ್ಲಿ ಪಶು ಸಂಗೋಪನಾ (Animal husbandry) ಚಟುವಟಿಕೆಯನ್ನು ಮುನ್ನಡೆಸಿಕೊಂಡು ಹೋಗಲು ಸಾಲ ಸೌಲಭ್ಯ (Loan Facility) ನೀಡಿ ಪಶು ಸಂಗೋಪನೆಯನ್ನು ಪ್ರೋತ್ಸಾಹಿಸುತ್ತಿದೆ.

ಹಸು, ಕುರಿ, ಕೋಳಿ ಸಾಕುವವರಿಗೆ ಸಿಗುತ್ತೆ ಸರ್ಕಾರದಿಂದ ಸುಲಭ ಸಾಲ, ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ - Kannada News

ಹಸು ಖರೀದಿಗೆ 50 ರಿಂದ 75% ಸಬ್ಸಿಡಿ ಕೊಡುತ್ತಿದೆ ರಾಜ್ಯ ಸರ್ಕಾರ! ಈ ರೀತಿ ಇಂದೇ ಅಪ್ಲೈ ಮಾಡಿ

ಕಿಸಾನ್ ಕ್ರೆಡಿಟ್ ಕಾರ್ಡ್ (KCC)

ಸರ್ಕಾರದಿಂದ ಕೊಡಲ್ಪಡುವ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಒಂದನ್ನು ರೈತರು ಹೊಂದಿದ್ದರೆ ಸರ್ಕಾರದಿಂದ ಸಿಗುವ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಪಶು ಸಂಗೋಪನಾ ಚಟುವಟಿಕೆಗಳಿಗೆ ಬೆಂಬಲ ನೀಡುವಂತಹ ಯೋಜನೆಯನ್ನು ಜಾರಿಗೆ ತಂದಿದೆ, ಅದೇ ಕಡಿಮೆ ದರದಲ್ಲಿ ಸಾಲ (Loan in Low interest) ಕೊಡುವ ಅಭಿಯಾನ.

ಪಶು ಸಂಗೋಪನಿಗೆ ಸರ್ಕಾರದಿಂದ ಪ್ರೋತ್ಸಾಹ

ಸಾಮಾನ್ಯವಾಗಿ ರೈತರು ಪಶು ಸಂಗೋಪನೆಯಲ್ಲಿ ತೊಡಗಿಕೊಂಡರೆ ಅದರ ನಿರ್ವಹಣಾ ವೆಚ್ಚ (Maintenance cost ) ಭರಿಸುವುದು ಅಷ್ಟು ಸುಲಭವಲ್ಲ ಯಾಕೆಂದರೆ ಈಗ ಎಲ್ಲಾ ದರಗಳು ಕೂಡ ದುಬಾರಿ, ಹಾಗಾಗಿ ಪಶು ಸಂಗೋಪನೆ ಮಾಡುವವರು ಪಶುಗಳಿಗೆ ಅಗತ್ಯವಿರುವ ಮೇವು, ಔಷಧ ಮೊದಲಾದವುಗಳಿಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ.

ರಾಜ್ಯ ಹಣಕಾಸು ಸೇವೆಗಳ ಇಲಾಖೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ. ಯಾವೆಲ್ಲ ರೈತರಿಗೆ ಯಾವ ರೀತಿಯ ಸಾಲ ಸೌಲಭ್ಯ ಸಿಗುತ್ತದೆ ನೋಡೋಣ.

ಕಡಿಮೆ ಮೇವು ಸೇವಿಸಿ ಹೆಚ್ಚು ಹಾಲು ನೀಡುವ ಹಸು ತಳಿ ಇದು! ಖರ್ಚಿಲ್ಲದೆ ಹೆಚ್ಚು ಲಾಭ ನೀಡುವ ಹಸು

ಹೈನುಗಾರಿಕೆ

subsidy for the purchase of cowಹೈನುಗಾರಿಕೆ ಮಾಡುವವರು ಮಿಶ್ರತಳಿ ದನಗಳ ನಿರ್ವಹಣೆಗೆ ಪ್ರತಿ ಹಸುವಿಗೆ 18 ಸಾವಿರ ರೂಪಾಯಿಗಳಂತೆ ಎರಡು ಹಸುಗಳಿಗೆ 36,000ರೂ.ಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಅದೇ ರೀತಿ ಎಮ್ಮೆಗಳನ್ನು ಸಾಕುವ ರೈತರು ಅವುಗಳ ನಿರ್ವಹಣೆಗೆ ನಿಮಗೆ 21,000 ರೂ. ಅಂದರೆ ಎರಡು ಹೆಮ್ಮೆಗಳನ್ನು ನಿರ್ವಹಣೆ ಮಾಡಲು 42,000 ರೂ. ಸಾಲ ಪಡೆದುಕೊಳ್ಳಬಹುದು

ಮೇಕೆ ಸಾಕಾಣಿಕೆ

ಇನ್ನು ಮೇಕೆ ಸಾಕಾಣಿಕೆ ಮಾಡುವವರು 8 ತಿಂಗಳ ಸಾಕಾಣಿಕೆಗೆ 10 ಕುರಿಗಳಿಗೆ, ಕುರಿಗಳನ್ನು ಕೊಟ್ಟಿಗೆಯಲ್ಲಿ ಸಾಕಿ ಬೆಳೆಸುವುದಿದ್ದರೆ 29,250 ರೂ. ಹಾಗೂ ಬಯಲಿನಲ್ಲಿ ಮೇಯಿಸುವುದಾದರೆ 14,700 ರೂ. ಸಾಲ ಪಡೆದುಕೊಳ್ಳಬಹುದು.

ಅದೇ ರೀತಿ ಮೇಕೆ ನಿರ್ವಹಣೆಗೆ 8 ತಿಂಗಳ ಸಾಕಾಣಿಕೆಗೆ ಕಟ್ಟಿ ಬೆಳೆಸುವುದಾದರೆ 57,200 ರೂ. ಹಾಗೂ ಬಯಲಿನಲ್ಲಿ ಮೇಯಿಸುವುದಾದರೆ 28,200 ರೂ.ಗಳನ್ನು ಸಾಲವಾಗಿ ಪಡೆದುಕೊಳ್ಳಬಹುದು.

10 ಹಂದಿ ನಿರ್ವಹಣೆಗೆ 60,000 ರೂ. ಹಾಗೂ ಸಾವಿರ ಕೋಳಿಗಳಿಗೆ (ಮಾಂಸದ ಕೋಳಿ) 80,000 ರೂ.ಗಳನ್ನು ಸರ್ಕಾರದಿಂದ ಸಾಲವಾಗಿ ಪಡೆಯಬಹುದು. ಅದೇ ರೀತಿ ಮೊಟ್ಟೆ ಕೋಳಿ ಸಾಕಾಣಿಕೆಗೆ ಸಾವಿರ ಕೋಳಿಗಳಿಗೆ 1,80,000 ರೂ. ಸಾಲವಾಗಿ ಸಿಗುತ್ತವೆ. ಅದೇ ರೀತಿ ಮೊಲ ಸಾಕಾಣಿಕೆಗೂ ಕೂಡ 50 ಮೊಲಗಳಿಗೆ 50,000 ರೂ. ಸಾಲ ಪಡೆಯಬಹುದು.

₹1 ರೂಪಾಯಿ ಹೂಡಿಕೆ ಮಾಡಬೇಕಾಗಿಲ್ಲ, ಆದ್ರೂ ಸಿಗುತ್ತೆ ₹3000 ಪಿಂಚಣಿ; ಕೇಂದ್ರ ಸರ್ಕಾರದ ಯೋಜನೆ

ಎಷ್ಟು ಸಾಲಕ್ಕೆ ಎಷ್ಟು ಬಡ್ಡಿ

ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಹೊಂದಿರುವವರು 3 ಲಕ್ಷ ರೂಪಾಯಿಗಳವರೆಗಿನ ಸಾಲ ಪಡೆಯಬಹುದು. ಅದರಲ್ಲೂ 1.60 ಲಕ್ಷಗಳ ಸಾಲಕ್ಕೆ ಭದ್ರತೆ ಕೊಡುವ ಅಗತ್ಯವು ಇಲ್ಲ.

ಸರ್ಕಾರದಿಂದ ಈ ಸಾಲಕ್ಕೆ ಶೇಕಡ 2% ನಷ್ಟು ಬಡ್ಡಿ ಸಹಾಯಧನವಾಗಿ ಸಿಗಲಿದೆ. ವಾರ್ಷಿಕವಾಗಿ 3% ನಷ್ಟು ಬಡ್ಡಿ ಸಹಾಯಧನ ಸೌಲಭ್ಯವನ್ನು ರೈತರು ಪಡೆಯಬಹುದು. ಅಂದರೆ ಒಟ್ಟಾರೆ ಬ್ಯಾಂಕ್ನಿಂದ ಪಡೆಯುವ ಸಾಲಕ್ಕೆ 5% ನಷ್ಟು ಬಡ್ಡಿ ರಿಯಾಯಿತಿ ಪಡೆದುಕೊಳ್ಳಬಹುದು. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 8277100200 ಈ ನಂಬರಿಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು.

Kisan Credit Card Loan For Animal Husbandry Activities

Follow us On

FaceBook Google News

Kisan Credit Card Loan For Animal Husbandry Activities