ಸಣ್ಣ ಜಮೀನು ಇದ್ದರೂ ಸಾಕು, ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ! ಕೇಂದ್ರ ಸರ್ಕಾರದ ಹೊಸ ಯೋಜನೆ

ಒಂದು ಸಣ್ಣ ಜಮೀನು ಇಟ್ಟುಕೊಂಡು ಅದರಲ್ಲಿ ಬೆಳೆ ಬೆಳೆದರು ಸಾಕು ಅಥವಾ ಪಶುಸಂಗೋಪನೆ, ಹೈನುಗಾರಿಕೆ ಮೊದಲಾದ ಕೃಷಿ ಮಾಡುತ್ತಿದ್ದರು ಸಾಕು ಸರ್ಕಾರದಿಂದ ಈ ಯೋಜನೆಯ ಫಲ ಪಡೆದುಕೊಳ್ಳಬಹುದು, ಅದಕ್ಕೆ ಮೊಟ್ಟಮೊದಲನೆಯದಾಗಿ ಸರ್ಕಾರ ಬಿಡುಗಡೆ ಮಾಡಿರುವ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಅನ್ನು ಪ್ರತಿಯೊಬ್ಬ ರೈತರು ಹೊಂದಿರಬೇಕು.

ಅನ್ನದಾತ ರೈತ, (Farmer) ಈ ದೇಶದ ಬೆನ್ನೆಲುಬು ಭಾರತ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ರೈತರ ಕೊಡುಗೆ ಬಹಳ ದೊಡ್ಡದು, ನಮ್ಮ ದೇಶದಲ್ಲಿ ಶೇಕಡ 75 ರಷ್ಟು ಜನ ರೈತಾಪಿ ವರ್ಗ ಇದೆ, ಹಾಗಾಗಿ ರೈತರಿಗೆ ಅನುಕೂಲವಾಗಲು ಸರ್ಕಾರ ಕಡಿಮೆ ದರದಲ್ಲಿ ಸಾಲ (Loan in low interest) ನೀಡುವುದರಿಂದ ಹಿಡಿದು ರೈತರ ಬೆಳೆಗಳಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸರ್ಕಾರ ಕೊಡುತ್ತೆ 10 ಸಾವಿರ! ಎಷ್ಟೋ ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತಿಲ್ಲ

ರೈತರಿಗಾಗಿ ಮೀಸಲಿರುವ ಯೋಜನೆ ಇದು

ಒಂದು ಸಣ್ಣ ಜಮೀನು ಇಟ್ಟುಕೊಂಡು ಅದರಲ್ಲಿ ಬೆಳೆ ಬೆಳೆದರು ಸಾಕು ಅಥವಾ ಪಶುಸಂಗೋಪನೆ, ಹೈನುಗಾರಿಕೆ ಮೊದಲಾದ ಕೃಷಿ ಮಾಡುತ್ತಿದ್ದರು ಸಾಕು ಸರ್ಕಾರದಿಂದ ಈ ಯೋಜನೆಯ ಫಲ ಪಡೆದುಕೊಳ್ಳಬಹುದು, ಅದಕ್ಕೆ ಮೊಟ್ಟಮೊದಲನೆಯದಾಗಿ ಸರ್ಕಾರ ಬಿಡುಗಡೆ ಮಾಡಿರುವ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಅನ್ನು ಪ್ರತಿಯೊಬ್ಬ ರೈತರು ಹೊಂದಿರಬೇಕು.

ಸಣ್ಣ ಜಮೀನು ಇದ್ದರೂ ಸಾಕು, ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ! ಕೇಂದ್ರ ಸರ್ಕಾರದ ಹೊಸ ಯೋಜನೆ - Kannada News

ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ (Kisan Credit Card Benefits)

ನಮ್ಮ ದೇಶದ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ, ಪ್ರತಿಯೊಬ್ಬ ರೈತನ ಕೈಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಒಂದು ಇದ್ದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳುವುದು ಮಾತ್ರ ಅಲ್ಲದೆ ಯಾವುದೇ ಭದ್ರತೆ ಇಲ್ಲದೆಯೂ ಕೂಡ ಮೂರು ಲಕ್ಷಗಳವರೆಗೆ ಬ್ಯಾಂಕ್ನಿಂದ ಸಾಲ (Bank Loan) ಪಡೆದುಕೊಳ್ಳಬಹುದು.

ಮಹಿಳೆಯರ ಸ್ವಂತ ವ್ಯಾಪಾರಕ್ಕೆ ಸರ್ಕಾರದಿಂದ ಉಚಿತವಾಗಿ ಸಿಗುತ್ತೆ 25,000 ರೂಪಾಯಿಗಳು! ಇಂದೇ ಅರ್ಜಿ ಸಲ್ಲಿಸಿ

ಮೂರು ಲಕ್ಷಗಳವರೆಗೆ ಭದ್ರತೆ ರಹಿತ ಸಾಲ

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 5 ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗುತ್ತದೆ, ಅದರಲ್ಲೂ ಯಾವುದೇ ಗ್ಯಾರಂಟಿ ಇಲ್ಲದೆ 1.60 ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಲು ಸಾಧ್ಯ. ಅಚ್ಚರಿಯಾದರೂ ಇದು ನಿಜ.

ರೈತರು ತಮ್ಮ ಜಮೀನಿನ ಪತ್ರವನ್ನು ಅಡವಿಟ್ಟು ಅಥವಾ ಬೇರೆ ಆಸ್ತಿ ಪತ್ರವನ್ನು ನೀಡಿ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಳ್ಳುವ ಅಗತ್ಯವಲ್ಲ. ಕೇವಲ ಕಿಸಾನ್ ಕಾರ್ಡ್ ಹೊಂದಿದ್ದರೆ 1.60 ಲಕ್ಷ ರೂಪಾಯಿಗಳ ವರೆಗೆ ಭದ್ರತೆ ರಹಿತ ಸಾಲವನ್ನು ಪಡೆದುಕೊಳ್ಳಬಹುದು.

Get Agriculture Loan up to 3 Lakh by Kisan Credit card schemeಬಡ್ಡಿ ದರ

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲಿ ಮೂರು ಲಕ್ಷಗಳ ವರೆಗೆ ಸಾಲ ಪಡೆದುಕೊಳ್ಳಬಹುದು. ಈ ಸಾಲ ಮರುಪಾವತಿಸಲು (Loan Return) 5 ವರ್ಷಗಳ ಕಾಲಾವಕಾಶ ಇರುತ್ತದೆ. ಇನ್ನು ಈ ಸಾಲಕ್ಕೆ 9% ಬಡ್ಡಿ ನಿಗದಿಪಡಿಸಲಾಗಿದೆ. ಇದರಲ್ಲಿ 2% ನಷ್ಟು ಸರ್ಕಾರದಿಂದ ಸಹಾಯಧನ (Subsidy) ಸಿಗುತ್ತದೆ.

ಇನ್ನು ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದರೆ ಹೆಚ್ಚುರಿಯಾಗಿ 2% ರಿಯಾಯಿತಿ ಪಡೆದುಕೊಳ್ಳಬಹುದು. ಒಟ್ಟಾರೆಯಾಗಿ ಕೇವಲ 4% ನಷ್ಟು ಬಡ್ಡಿ ಪಾವತಿ ಮಾಡಿದ್ರೆ ಮೂರು ಲಕ್ಷ ರೂಪಾಯಿಗಳ ಸಾಲ ಪಡೆದುಕೊಳ್ಳಬಹುದು.

ಹಸು, ಕುರಿ, ಕೋಳಿ ಸಾಕುವವರಿಗೆ ಸಿಗುತ್ತೆ ಸರ್ಕಾರದಿಂದ ಸುಲಭ ಸಾಲ, ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವಿಕೆ

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕವೇ ಅರ್ಜಿ (Online Application) ಸಲ್ಲಿಸಬಹುದು, ಇದಕ್ಕೆ ರೈತರು ತಮ್ಮ ಜಮೀನಿನ ದಾಖಲೆ, ಬೆಳೆಯ ಬಗ್ಗೆ ಮಾಹಿತಿಯನ್ನು ನೀಡಬೇಕು. ಇನ್ನು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಲ್ಲಿ ಅರ್ಜಿ ಫಾರ್ಮ್ ಪಡೆದು ಅದನ್ನು ಫಿಲ್ ಮಾಡಿ ಅಗತ್ಯವಿರುವ ದಾಖಲೆಗಳನ್ನು ನೀಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಪಡೆದುಕೊಳ್ಳಬಹುದು.

ಬೇಕಾಗಿರುವ ದಾಖಲೆಗಳು

ಡ್ರೈವಿಂಗ್ ಲೈಸೆನ್ಸ್, ಜಮೀನಿನ ಬಗ್ಗೆ ಮಾಹಿತಿ, ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಗಾತ್ರದ ಫೋಟೋ. ಇವಿಷ್ಟು ದಾಖಲೆಗಳನ್ನು ಕೊಟ್ಟರೆ ನೀವು ಸುಲಭವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಮೂಲಕ ಬ್ಯಾಂಕ್ನಿಂದ ಕಡಿಮೆ ಬಡ್ಡಿ ದರದ ಸಾಲ ಪಡೆದುಕೊಳ್ಳಬಹುದು.

Farmers will get Rs 3 lakh loan by Kisan Credit Card even if they have small Agriculture land

Follow us On

FaceBook Google News

Farmers will get Rs 3 lakh loan by Kisan Credit Card even if they have small Agriculture land