ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸರ್ಕಾರ ಕೊಡುತ್ತೆ 10 ಸಾವಿರ! ಎಷ್ಟೋ ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತಿಲ್ಲ
2018ರಲ್ಲಿ ಆರಂಭವಾದ ಯೋಜನೆ 2023ರ ಹೊತ್ತಿಗೆ ಅತಿ ಹೆಚ್ಚು ಜನರಿಗೆ ಪ್ರಯೋಜನ ನೀಡಿದೆ. ಮಾಹಿತಿಯ ಪ್ರಕಾರ ಐದು ಕೋಟಿಗೂ ಹೆಚ್ಚಿನ ಜನ ಅಟಲ್ ಪಿಂಚಣಿ ಯೋಜನೆಯ (Atal Pension Plan) ಅಡಿಯಲ್ಲಿ ಚಂದಾದಾರಿಕೆ ಪಡೆದುಕೊಂಡಿದ್ದಾರೆ.
ದೇಶದಲ್ಲಿರುವ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಲು ಕೇಂದ್ರ ಸರ್ಕಾರ (Central Government) ಹಲವಾರು ಯೋಜನೆಗಳನ್ನು (Scheme) ಜಾರಿ ತಂದಿದೆ. ಇನ್ನು ಕೆಲವು ಯೋಜನೆಗಳನ್ನು ಪ್ರತಿ ವರ್ಷ ಪರಿಷ್ಕರಣೆ ಕೂಡ ಮಾಡಲಾಗುತ್ತದೆ. ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತದೆ.
ಇನ್ನು ಇದುವರೆಗೆ ಮಕ್ಕಳಿಗೆ ಅಥವಾ ವೃದ್ದರಿಗೆ, ಯುವಕರಿಗೆ ಹೀಗೆ ಬೇರೆ ಬೇರೆ ವರ್ಗದವರಿಗೆ ಅಗತ್ಯವಿರುವ ಸರ್ಕಾರದ ಯೋಜನೆಗಳ ಬಗ್ಗೆ ನೀವು ಕೇಳಿರಬಹುದು, ಇದೀಗ ಸರ್ಕಾರದ ಮತ್ತೊಂದು ಹೊಸ ಯೋಜನೆ ಮದುವೆಯಾದ ನವ ದಂಪತಿಗಳಿಗೆ ಸಹಾಯಕವಾಗಲಿದೆ.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅಟಲ್ ಪಿಂಚಣಿ ಯೋಜನೆ (APY). ಈ ಯೋಜನೆಯ ಅಡಿಯಲ್ಲಿ ವಯಸ್ಸಾದ ದಂಪತಿಗಳು ಸಾವಿರದಿಂದ 5000 ವರೆಗೆ ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಿದೆ.
2018ರಲ್ಲಿ ಆರಂಭವಾದ ಯೋಜನೆ 2023ರ ಹೊತ್ತಿಗೆ ಅತಿ ಹೆಚ್ಚು ಜನರಿಗೆ ಪ್ರಯೋಜನ ನೀಡಿದೆ. ಮಾಹಿತಿಯ ಪ್ರಕಾರ ಐದು ಕೋಟಿಗೂ ಹೆಚ್ಚಿನ ಜನ ಅಟಲ್ ಪಿಂಚಣಿ ಯೋಜನೆಯ (Atal Pension Plan) ಅಡಿಯಲ್ಲಿ ಚಂದಾದಾರಿಕೆ ಪಡೆದುಕೊಂಡಿದ್ದಾರೆ.
ಯಾರು ಖಾತೆ ತೆರೆಯಬಹುದು?
ಅಟಲ್ ಪಿಂಚಣಿ ಯೋಜನೆಗೆ ಚಂದದಾರರಾಗಲು 18ರಿಂದ 40 ವರ್ಷ ವಯಸ್ಸಿನವರಾಗಿರಬೇಕು. ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (Bank Savings Account) ಅಥವಾ ಅಂಚೆ ಕಚೇರಿಯಲ್ಲಿ (Post Office Savings Account) ಉಳಿತಾಯ ಖಾತೆ ಹೊಂದಿರಬೇಕು, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರೂ ಕೂಡ ದಾಖಲಾಗಬಹುದು, ಇನ್ನು ಇದಕ್ಕೆ ಠೇವಣಿ ಇರುವ ಮೊತ್ತ ಬಹಳ ಕಡಿಮೆ. ದಿನಕ್ಕೆ ಕೇವಲ ರೂ.7 ಇಡುತ್ತಾ ಹೋದರೆ 60 ವರ್ಷದ ಬಳಿಕ 5000ಗಳನ್ನು ಪಿಂಚಣಿಯಾಗಿ ಪಡೆಯಬಹುದು.
ಉದಾಹರಣೆಗೆ 18 ವರ್ಷದ ವಯಸ್ಸಿನವರು ಎಪಿವೈ ಖಾತೆಯನ್ನು ತೆರೆಯುವುದಾದರೆ, 60 ವರ್ಷದ ಬಳಿಕ ಪ್ರತಿ ತಿಂಗಳು 1000 ಪಿಂಚಣಿ ಬಯಸಿದರೆ ಪ್ರತಿ ತಿಂಗಳು 42 ರೂಪಾಯಿಗಳನ್ನು ಠೇವಣಿ ಇಡಬೇಕು.
ಮಾಸಿಕ 2,000 ಪಿಂಚಣಿ ಬಯಸಿದರೆ 84 ಹಾಗೂ ಮಾಸಿಕ 3000 ರೂಪಾಯಿಗಳನ್ನು ಪಡೆಯಲು ಬಯಸಿದರೆ ಪ್ರತಿ ತಿಂಗಳು 126ಗಳನ್ನು ಹೂಡಿಕೆ ಮಾಡಬೇಕು. ಅದೇ ರೀತಿ ತಿಂಗಳಿಗೆ 168 ರೂಪಾಯಿ ಠೇವಣಿ ಇಟ್ಟರೆ 4000 ರೂಪಾಯಿ ಹಾಗೂ 210 ರೂಪಾಯಿ ಠೇವಣಿ ಇಟ್ಟರೆ ಪ್ರತಿ ತಿಂಗಳು 5000 ರೂ.ಗಳನ್ನು ಪಿಂಚಣಿಯಾಗಿ ಪಡೆಯಬಹುದು. ಈ ಹಣ 60 ವರ್ಷ ವಯಸ್ಸಿನಲ್ಲಿ ನಿಮ್ಮ ಕೈ ಸೇರುತ್ತದೆ.
ನೀವು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಅಟಲ್ ಪಿಂಚಣಿ ಯೋಜನೆಯ ಚಂದದಾರರಾಗಬಹುದು. ಯೋಜನೆಯ ಅಡಿಯಲ್ಲಿ ಮದುವೆಯಾದ ದಂಪತಿಗಳು ಚಂದಾದಾರರಾಗುವುದಿದ್ದರೆ ನಾಮಿನಿಯನ್ನು ಡೀಫಾಲ್ಟ್ ಆಗಿ ಹೆಂಡತಿಯ ಹೆಸರಿಗೆ ಮಾಡಬೇಕು.
ಅವಿವಾಹಿತರು ಅವರಿಗೆ ಬೇಕಾದವರ ಹೆಸರನ್ನು ನಾಮಿನಿ ಮಾಡಲು ಅವಕಾಶವಿದೆ. ಭಾರತೀಯ ನಾಗರಿಕರು ಮಾತ್ರ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆಯಲು ಸಾಧ್ಯ.
Atal Pension Plan Scheme Eligibility and Benefit Details
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Atal Pension Plan Scheme Eligibility and Benefit Details