ಪಿಯುಸಿ ಪಾಸ್ ಅದವರಿಗೆ ಸಿಗಲಿದೆ ಸರ್ಕಾರಿ ಸ್ಕೂಲ್ ಟೀಚರ್ ಕೆಲಸ! ಇಂದೇ ಈ ರೀತಿ ಅಪ್ಲೈ ಮಾಡಿ

Story Highlights

ರಾಜ್ಯದ 558 ಸರ್ಕಾರಿ ಶಾಲೆಗಳಲ್ಲಿ LKG ಮತ್ತು UKG ಶುರುವಾಗಲಿದ್ದು, ಇದಕ್ಕಾಗಿ ಶಿಕ್ಷಕರ ಕೊರತೆ ಇರುವ ಕಾರಣ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದೆ.

ರಾಜ್ಯದಲ್ಲಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಒದಗಿಸಿಕೊಡಬೇಕು ಎಂದು ಸರ್ಕಾರ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಸರ್ಕಾರಿ ಶಾಲೆಗಳಲ್ಲಿ LKG ಮತ್ತು UKG ತರಗತಿಗಳನ್ನು ಪ್ರಾರಂಭ ಮಾಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕಾಗಿ ನರ್ಸರಿ ಸ್ಕೂಲ್ ಟೀಚರ್ ಗಳನ್ನು (School Teacher) ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ದಲ್ಲಿ ಈ ಹುದ್ದೆಯ (Govt Job) ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..

LKG ಮತ್ತು UKG ಈ ಎರಡು ಪ್ರಾಥಮಿಕ ತರಗತಿಗಳು ಪ್ರೈವೇಟ್ ಸ್ಕೂಲ್ ಗಳಲ್ಲಿ (Private Schools) ಮಾತ್ರ ಲಭ್ಯವಿದೆ. ಸರ್ಕಾರಿ ಶಾಲೆಗಳಲ್ಲಿ LKG ಮತ್ತು UKG ಇಲ್ಲ. ಮಕ್ಕಳಿಗೆ ಶಾಲೆಗೆ ಬರಲು ಆಸಕ್ತಿ ಮೂಡಬೇಕು ಎಂದರೆ, ಈ ತರಗತಿಗಳು ಶುರುವಾಗಿ, ಅಲ್ಲಿ ಶಿಕ್ಷಕರು ಮಕ್ಕಳಿಗೆ ಇಷ್ಟ ಆಗುವ ರೀತಿಯಲ್ಲಿ ಚಟುವಟಿಕೆಗಳನ್ನು ಮಾಡಿಸಿ, ಪ್ರತಿ ದಿನ ಮಕ್ಕಳು ಶಾಲೆಗೆ ಬರುವ ಹಾಗೆ ಮಾಡಬೇಕು, LKG ಮತ್ತು UKG ಶಿಕ್ಷಕರ ಮೇಲೆ ಇರುವ ಜವಾಬ್ದಾರಿ ಆಗಿದೆ. ಸರ್ಕಾರ ಈ ಬಗ್ಗೆ ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಫ್ರೀ ಅಂತ ಬೇಕಾಬಿಟ್ಟಿ ಕರೆಂಟ್ ಬಳಸೋಕು ಮುನ್ನ ಎಚ್ಚರ, ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್

LKG ಮತ್ತು UKG ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಕೊಡಬೇಕು ಎಂದು ಶಿಕ್ಷಣ ಇಲಾಖೆಯ ಜೊತೆಗೆ ಚರ್ಚಿಸಿ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯದ 558 ಸರ್ಕಾರಿ ಶಾಲೆಗಳಲ್ಲಿ LKG ಮತ್ತು UKG ಶುರುವಾಗಲಿದ್ದು, ಇದಕ್ಕಾಗಿ ಶಿಕ್ಷಕರ ಕೊರತೆ ಇರುವ ಕಾರಣ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದೆ.

ಈ ಹುದ್ದೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಕೆ ಮಾಡೋದು ಹೇಗೆ? ಎಲ್ಲವನ್ನು ತಿಳಿಯೋಣ..

ಶಿಕ್ಷಕರ ಮಾನದಂಡ:

*ಕೆಲಸಕ್ಕೆ ಅಪ್ಲೈ ಮಾಡುವ ಶಿಕ್ಷಕರು ಪಿಯುಸಿಯಲ್ಲಿ ಮಿನಿಮಮ್ 45% ಮಾರ್ಕ್ಸ್ ಗಳಿಸಿರಬೇಕು.

*NCET ಮಾನ್ಯತೆ ಪಡೆದ ಒಂದು ಸಂಸ್ಥೆಯಿಂದ ಡಿಪ್ಲೊಮಾ ಇನ್ ನರ್ಸರಿ ಎಜುಕೇಶನ್ ಅಥವಾ ಡಿಪ್ಲೊಮಾ ಇನ್ ಫ್ರೀ ಸ್ಕೂಲ್ ಎಜುಕೇಶನ್ ಈ ಕೋರ್ಸ್ ಅನ್ನು 2 ರಿಂದ 3 ವರ್ಷಗಳ ಕಾಲ ಮಾಡಿರಬೇಕು.

*DECED ಅಥವಾ B.ed ಮಾಡಿರುವವರನ್ನು ಪ್ರಿಫರ್ ಮಾಡಲಾಗುತ್ತದೆ.

*ಪಿಯುಸಿಯಲ್ಲಿ 50% ಮಾರ್ಕ್ಸ್ ಪಡೆದು, D.ed ಕೂಡ ಮಾಡಿದ್ದರೆ ಅಂಥವರಿಗೆ ಮೊದಲ ಆದ್ಯತೆ ಇರುತ್ತದೆ.

*18 ರಿಂದ 45 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದು.

*ಪುರುಷರು ಮತ್ತು ಮಹಿಳೆಯರು ಇಬ್ಬರು ಸಹ ಅರ್ಜಿ ಸಲ್ಲಿಸಬಹುದು. ಆದರೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

*ಅರ್ಜಿ ಸಲ್ಲಿಸುವವರನ್ನು ಆಯಾ ವಾರ್ಡ್ ನ ಶಾಲೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಕಸ್ಮಾತ್ ಆ ವಾರ್ಡ್ ನಲ್ಲಿ ಯಾರು ಇಲ್ಲ ಎಂದರೆ, ಪಕ್ಕದ ವಾರ್ಡ್ ನ ಅಭ್ಯರ್ಥಿಗಳನ್ನು ತೆಗೆದುಕೊಳ್ಳಬಹುದು.

ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಅಕೌಂಟ್ ಗೆ ಬಂದಿಲ್ವಾ? ಹಾಗಿದ್ದಲ್ಲಿ ಈ ಕೆಲಸ ಮಾಡಿ

Government Jobವೇತನ

LKG ಮತ್ತು UKG ಶಿಕ್ಷಕರಾಗಿ ಕೆಲಸ ಪಡೆಯುವವರಿಗೆ ಪ್ರತಿ ತಿಂಗಳು ₹10,000 ರೂಪಾಯಿಗಳನ್ನು ಗೌರವ ಧನವಾಗಿ ಕೊಡಲಾಗುತ್ತದೆ. ಜೊತೆಗೆ ಸಹಾಯಕರಾಗಿ ಕೆಲಸಕ್ಕೆ ಸೇರುವವರಿಗೆ, 5000 ಗೌರವಧನ ನೀಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಹಂತ ಹಂತವಾಗಿ ಹಣ ಬಿಡುಗಡೆ

ಆಯ್ಕೆ ಪ್ರಕ್ರಿಯೆ

ನೀವಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ ನಂತರ ಶಿಕ್ಷಣಾಧಿಕಾರಿಗಳು, ಶಾಲೆಯ ಮುಖ್ಯಸ್ಥರ ಜೊತೆಗೆ ಇನ್ನಿತರ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಆದ್ಯತೆಯ ಮೇರೆಗೆ ಅರ್ಹತೆ ಇರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

PUC pass will get them a government school teacher job, Apply today

Related Stories